ಅಧಿಕಾರ ಪೀಠ : ಅತಂತ್ರದಲ್ಲಿ ಕುರುಬ ಮತದಾರ

ಕೆಲ ತಿಂಗಳ ಹಿಂದೆ ಹಾಲುಮತ (ಕುರುಬ)ಸಮುದಾಯದವರು ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬೇಕಾದ ಒಂದು ಎನರ್ಜಿ ತುಂಬುವ ಕೆಲಸ ಮಾಡಿದ್ದರು. ಸಿದ್ದರಾಮಯ್ಯನವರು ಕೂಡ ಆಗಾಗ ಮುಖ್ಯಮಂತ್ರಿ ಸ್ಥಾನದ ಆಕ್ಷಾಂಕಿ ಎಂದು ಹೇಳಿಕೆ ಕೊಡುತ್ತಲ್ಲೆ ಬಂದಿದ್ದಾರೆ.
ಆದರೆ ಸಿದ್ದರಾಮಯ್ಯನವರಿಗೆ ಪ್ರಸ್ತಕ ರಾಜಕಾರಣದಲ್ಲಿ ಅಂತಹ ಅವಕಾಶಗಳು ಎಷ್ಟರಮಟ್ಟಿಗೆ ಇದೆ ಎಂದು ಪರಿಶೀಲಿಸಬೇಕಾಗಿರುತ್ತದೆ. ಲಿಂಗಾಯಿತ ಸಮುದಾಯದಲ್ಲಿ ಯಡಿಯೂರಪ್ಪನವರಿಗೆ ಇರುವ ಜನಪ್ರಿಯತೆ, ಒಕ್ಕಲಿಗ ಸಮುದಾಯದಲ್ಲಿ ದೇವೇಗೌಡರಿಗಿರುವ ಹಿಡಿತ ಕುರುಬ ಸಮುದಾಯದ ಮೇಲೆ ಮೇಲುನೋಟಕ್ಕೆ ಸಿದ್ದರಾಮಯ್ಯನವರಿಗೆ ಇರೋದು ಕಂಡುಬಂದರು ಇದನ್ನು ಮತಗಳಲ್ಲಿ ಬದಲಾಯಿಸುವ ವಿಷಯದಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ.
ಇದಕ್ಕೆ ಒಂದೆರಡು ತಾಜಾ ಉದಹಾರಣೆಗಳು ಅಂದರೆ ಕಡೂರು ಮತ್ತು ಕೊಪ್ಪಳ ಉಪಚುನಾವಣೆಗಳು. ಈ ಎರಡು ಕ್ಷೇತ್ರಗಳಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಕುರುಬ ಸಮುದಾಯದಕ್ಕೆ ಸಿದ್ದರಾಮಯ್ಯನವರ ಮೇಲೆ ದೊಡ್ಡ ಅಭಿಮಾನ ಕೂಡ ಕಂಡು ಬರುತ್ತದೆ. ಆದರೆ ಚುನಾವಣೆಯಲ್ಲಿ ಮಾತ್ರ ಹೆಚ್ಚಿನ ಸಂಖ್ಯೆ ಕುರುಬರು ಎರಡು ಕಡೆ ಬಿಜೆಪಿಗೆ ಬೆಂಬಲಿಸಿದರು. ಇದು ಯಾಕೆ?
ಸಿದ್ದರಾಮಯ್ಯನವರು ಒಂದು ನಿಲುವಿಗೆ ಅಂಟಿಕೊಳ್ಳದೆ ಇರೋದೇ ಸಮುದಾಯದ ಮತದಾರರಿಗೆ ಯಾರ ಪರ ಮತ ಚಲಾಯಿಸಬೇಕೆಂಬ ಗೊಂದಲ ಆಗಾಗ ಉಂಟು ಮಾಡುತ್ತಿರುವುದು. ಆಗಾಗ ಬಿಜೆಪಿಯಲ್ಲಿ ಯಡಿಯೂರಪ್ಪನವರು ಅಸಮಾಧಾನಗೊಳ್ಳುವಂತೆ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಸಿದ್ದರಾಮಯ್ಯನವರು ಅಸಮಾಧಾನಗೊಳ್ಳುತ್ತಲ್ಲೆ ಇರ್‍ತಾರೆ.
ಆದರೆ ವ್ಯತ್ಯಾಸ ಅಂದರೆ ಯಡಿಯೂರಪ್ಪನವರ ಬೆಲೆ ಚೆನ್ನಾಗಿ ಗೊತ್ತಿರುವ ಬಿಜೆಪಿ ಹೈಕಮಾಂಡ್ ತಕ್ಕಮಟ್ಟಿಗೆ ಅವರ ಬೇಡಿಕೆಗಳನ್ನು ಈಡೇರಿಸುತ್ತಲ್ಲೆ ಬಂದಿದೆ. ಇದೇ ಕಾರಣಕ್ಕೆ ಅವರ ಬೆಂಬಲಿಗರು ಈಗಲೂ ಸಚಿವ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.
ಇದನ್ನೆ ನೆಪವಾಗಿಟ್ಟುಕೊಂಡು ಸಿದ್ದರಾಮಯ್ಯನವರು ಅನೇಕ ಸಲ ಬಿಜೆಪಿ ಹೈಕಮಾಂಡ್‌ನ ಲೋ ಕಮಾಂಡ್ ಅನ್ನುತ್ತ ಜರೆಯುತ್ತಲ್ಲೆ ಬಂದಿದ್ದಾರೆ. ಆದರೆ ತುಂಬಾ ಪವರ್‌ಪುಲ್ ಆದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ಎಷ್ಟು ಬೇಡಿಕೆಗಳಿಗೆ ಸ್ಪಂದಿಸಿದೆ?
ಕನಿಷ್ಟ ಸಿದ್ದರಾಮಯ್ಯನವರು ಸೂಚಿಸಿದ ಸಿ.ಎಂ.ಇಬ್ರಾಹಿಂರಂತ ಒಂದೇ ಒಂದು ಅಭ್ಯರ್ಥಿಗೂ ಕೂಡ ಹೈಕಮಾಂಡ್ ಪರಿಷತ್ ಚುನಾವಣೆಯಲ್ಲಿ ಟಿಕೇಟ್ ನೀಡೋದಿಲ್ಲ. ಸಿದ್ದರಾಮಯ್ಯನವರಿಗೆ ಆಗಾಗ ಇಂತಹ ಅವಮಾನಗಳು ಕಾಂಗ್ರೆಸ್‌ನಿಂದ ಆಗುತ್ತಿದ್ದರು ಸಹಿಸಿಕೊಂಡು ಇರಬೇಕಾದ ಪರಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯನವರ ಸ್ವಯಂಕೃತ ಅಪರಾಧ.
ಜೆಡಿಎಸ್‌ನಿಂದ ಹೊರಬಂದಾಗ ಈ ರಾಜ್ಯದ ಪ್ರಗತಿಪರರು, ಅಹಿಂದ ಸಮಾಜ ಪೂರ್ತಿಯಾಗಿ ಸಿದ್ದರಾಮಯ್ಯನವರ ಪರವಾಗಿ ನಿಂತಿತ್ತು. ಆ ದಿನ ಲಿಂಗಾಯಿತ-ಒಕ್ಕಲಿಗ ಸಮಾಜಗಳಿಗೆ ಹೊರತಾದ ಒಂದು ನಾಯಕತ್ವಕ್ಕಾಗಿ ಅಹಿಂದ ಸಮುದಾಯ ಎದುರು ನೋಡುತ್ತಿತ್ತು,
ಅವರ ಕಣ್ಣಲ್ಲಿ ಸಿದ್ದರಾಮಯ್ಯನವರೇ ಇದಕ್ಕೆ ಸಮರ್ಥನಾಗಿ ಕಂಡು ಬಂದರು. ಆದರೆ ಹೊಸಪಕ್ಷ ಕಟ್ಟಿ ಧೈರ್‍ಯವಾಗಿ ಮುನ್ನುಗ್ಗುವ ಬದಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಪಕ್ಷಕ್ಕೆ ಕರೆತರುವ ಮುನ್ನ ಇಂದ್ರ-ಚಂದ್ರ ಅಂತೆಲ್ಲಾ ಗುಣಗಾನ ಮಾಡಿದವರೆ ಪಕ್ಷಕ್ಕೆ ಸೇರಿದ ಮೇಲೆ ಮೂಲೆಗುಂಪು ಮಾಡಬಿಟ್ಟರು. ವಿರೋಧಪಕ್ಷ ನಾಯಕನ ಸ್ಥಾನಕ್ಕಾಗಿ ಅವರು ಎಷ್ಟು ಹರಸಾಹಸ ಮಾಡಬೇಕಾಗಿ ಬಂತು ಅಂತ ಬಿಡಿಸಿ ಹೇಳಬೇಕಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications