ತಮಿಳುನಾಡಿಗೆ ಮತ್ತೆ ನೀರು ಬಿಡಲು ಸಿಎಂಸಿ ಸೂಚನೆ

ಸಭೆಯಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರು ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಇದೆ. ಅಕಾಲಿಕ ಚಂಡಮಾರುತ ಪರೋಕ್ಷವಾಗಿ ಕೃಷಿಕರಿಗೆ ಹೊಡೆತ ಕೊಟ್ಟಿದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ಕರ್ನಾಟಕ ಸರ್ಕಾರ ದೃಢ ನಿರ್ಧಾರ ಕೈಗೊಂಡಿದ್ದು, ತಮಿಳುನಾಡಿಗೆ ಮತ್ತೊಮ್ಮೆ ನೀರು ಬಿಡಲು ಸಾಧ್ಯವಿಲ್ಲ ಎಂದು ಎಸ್ ವಿ ರಂಗನಾಥ್ ಸ್ಪಷ್ಟಪಡಿಸಿದ್ದಾರೆ.
ಈವರೆಗೂ 13, 000 ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ಕಾವೇರಿ ಕೊಳ್ಳದಲ್ಲಿ ಮಂಗಳವಾರ ಹಾಗೂ ಬುಧವಾರ ಒಳ್ಳೆ ಮಳೆಯಾದ ಕಾರಣ ಗಡಿಭಾಗದ ಬಿಳಿಗುಂಡ್ಲು ಜಲಾಗಾರದಿಂದ ಹೊರಹರಿವು ಹೆಚ್ಚಾಗಿದೆ ಎಂದು ಎಸ್ ವಿ ರಂಗನಾಥ್ ಹೇಳಿದ್ದಾರೆ.
ಆದೇಶದ ವಿವರ: ಒಟ್ಟಾರೆ 5.5 ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. ನ.15ರೊಳಗೆ 4 ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕು. ಬಾಕಿ ಉಳಿದ 1.5 ಟೀಎಂಸಿ
15 ಟಿಎಂಸಿ ಅಥವಾ ಪ್ರತಿದಿನ 1 ಟಿಎಂಸಿಯಂತೆ ನೀರು ಬಿಡಬೇಕು ಎಂದು ತಮಿಳುನಾಡು ಮನವಿ ಸಲ್ಲಿಸಿತ್ತು. ಅದರೆ, 9 ಟಿಎಂಸಿ (8.745) ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶ ಅ.11ರಂದು ನೀಡಿತ್ತು.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆ ಬುಧವಾರ (ಅ.31) ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನವದೆಹಲಿಯ ಶಕ್ತಿ ಭವನದಲ್ಲಿ ನಡೆಸಲಾಯಿತು.












Click it and Unblock the Notifications