ಮೋದಿದು ಹಿಂಸೆಯಲ್ಲ, ಶೂದ್ರ ಮೀನು ತಿಂದರೆ ಹಿಂಸೆಯಾ?

ಇನ್ನು, ನೀವು(ಪೇಜಾವರ ಶ್ರೀ) ಬ್ರಾಹ್ಮಣ ಸಮಾವೇಶಗಳಿಗೆ ಹೋಗಿ ಅಂತರ್ಜಾತಿ ವಿವಾಹ ಆಗಬೇಡಿ, ಸಂಸ್ಕೃತಿ ಹಾಳಾಗುತ್ತದೆ. ಮಾಂಸಾಹಾರ ಸೇವನೆ ಮಾಡಬೇಡಿ ಎನ್ನುತ್ತೀರಿ. ನಿಮಗೆ ನನ್ನದೊಂದು ಸವಾಲು - 'ದಲಿತರ ಕೇರಿಗಳಿಗೆ ಹೋಗುವ ನೀವು ಅಲ್ಲಿಂದ ಬಂದು ಸ್ನಾನ ಮಾಡಿ, ಹಸುವಿನ ಗಂಜಲದಿಂದ ಶುದ್ಧಿ ಮಾಡಿಕೊಳ್ಳುತ್ತೀರಿ. ಒಂದು ವೇಳೆ, ನೀವು ಈ ರೀತಿ ಮಾಡುತ್ತಿಲ್ಲ ಎಂದು ಹೇಳಿದರೆ ಖಂಡಿತ ನಿಮ್ಮ ಕಾಲಿಗೆ ಬೀಳುತ್ತೇನೆ' ಎಂದೂ ಪ್ರೊ. ರಾವ್ ಹೇಳಿದ್ದಾರೆ.
ಪ್ರೊ. ರಾವ್ ಇನ್ನೂ ಏನೆಲ್ಲ ಹೇಳಿದರು?:
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (DSS) ವತಿಯಿಂದ ಭಾನುವಾರ ಐವರ್ನಾಡು ಕಾಲೇಜಿನಲ್ಲಿ 'ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಶಕ್ತಿಗಳ ಐಕ್ಯತೆಗಾಗಿ' ನಡೆದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದ ಪ್ರೊ. ರಾವ್ ಇನ್ನೂ ಏನೆಲ್ಲ ಹೇಳಿದರೆಂದರೆ...
* ಜಾತಿ ವಿನಾಶ ಪ್ರಕ್ರಿಯೆ ಆರಂಭಗೊಳ್ಳಬೇಕಿರುವುದು ಮೇಲ್ವರ್ಗ ಎನಿಸಿಕೊಂಡ ಬ್ರಾಹ್ಮಣರಿಂದಲೇ ಹೊರತು ದಲಿತರಿಂದಲ್ಲ. ಸಮಾಜದ ಸುಳ್ಳುಗಳನ್ನು, ಸ್ವಾರ್ಥಗಳನ್ನು ಮೀರಿದ ಬದುಕು ದಲಿತರದ್ದಾಗಬೇಕು. ತಮ್ಮ ಮನಸ್ಸಿನ ನೋವು, ಕಹಿ ಬಿಟ್ಟು ಸ್ವಾಭಿಮಾನದಿಂದ ಬದುಕುವುದನ್ನು ದಲಿತರು ಕಲಿಯಬೇಕು.
* ದೇಶದ ಪರಮೋಚ್ಚ ಸಾರ್ವಜನಿಕ ಧರ್ಮವೆಂದರೆ ಪ್ರಜಾಪ್ರಭುತ್ವ. ಮಿಕ್ಕೆಲ್ಲವೂ ವೈಯಕ್ತಿಕವಾದ ಧರ್ಮಗಳು. ಅವು ಮನೆಗೆ ಮಾತ್ರ ಸೀಮಿತವಾಗಬೇಕು. ಅದಕ್ಕೂ ಪ್ರಜಾಪ್ರಭುತ್ವಕ್ಕೂ ತಳುಕು ಹಾಕಬಾರದು. ಪ್ರಜಾಪ್ರಭುತ್ವದ ಧರ್ಮ ಗ್ರಂಥವೇ ಸಂವಿಧಾನ. ಇವೆರಡೂ ಚಲನಶೀಲವಾಗಿರುವುದರಿಂದ ವೌಲ್ಯ ಉಳಿದಿದೆ.
* ಸಾರ್ವಜನಿಕ ಬದುಕಿನಲ್ಲಿ ಜಾತಿ ಧರ್ಮದ ಪ್ರಭಾವ ಕುಗ್ಗದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ನಮ್ಮ ನಾಳಿನ ಚಿಂತನೆಗೆ, ಪ್ರಗತಿಯ ಚಿಂತನೆಗೆ ಶಕ್ತಿ ಕೊಡಲಾರದ ಯಾವುದೇ ಧರ್ಮವನ್ನು ತಿರಸ್ಕರಿಸುವ ಶಕ್ತಿ ನಮಗೆ ಬರಬೇಕು. ಶೇ. 95 ರಷ್ಟು ಮಠಗಳು ಸಮಾಜಮುಖಿಯಾಗಿಲ್ಲ. ಅವುಗಳನ್ನು ತಿರಸ್ಕರಿಸದಿದ್ದರೆ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ.
* ಪ್ರಜಾಪ್ರಭುತ್ವ ಮತ್ತು ಧರ್ಮ ಒಂದಾಗಬೇಕು. ಆದರೆ ಪ್ರಜಾಪ್ರಭುತ್ವವೆಂದರೆ ವಿಧಾನಸಭಾ ರಾಜಕಾರಣವಾಗಲೀ, ಧರ್ಮವೆಂದರೆ ಮಠ ಧರ್ಮವಾಗಲೀ ಅಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಮುಖ್ಯವಾಗಬೇಕೇ ಹೊರತು ಜಾತಿ, ಧರ್ಮ ಅಲ್ಲ.












Click it and Unblock the Notifications