ರಾತ್ರಿ ನಡೆಯುವ ಮದುವೆ ಸಮಾರಂಭಗಳಿಗೆ ನಿರ್ಬಂಧ

ರಾತ್ರಿ ವೇಳೆ ನಡೆಯುವ ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ರಾತ್ರಿ ವೇಳೆ ಮದುವೆ ಸಂಭ್ರಮಕ್ಕಿಂತ ಯುವ ಜನಾಂಗ ಮದ್ಯಪಾನ ಮಾಡಿ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಇದರಿಂದ ಸಂಸ್ಕೃತಿ ನಾಶವಾಗುತ್ತಿದೆ.
ರೋಹ್ಟಕ್ ಜಿಲ್ಲೆಯ 50 ಕ್ಕೂ ಅಧಿಕ ಖಾಪ್ ಪಂಚಾಯಿತಿಯ 200 ಕ್ಕೂ ಅಧಿಕ ಮುಖಂಡರು ಸಭೆ ಸೇರಿ ಈ ರೀತಿ ಕಠಿಣ ನಿರ್ಣಯ ಹೊರಡಿಸಿದ್ದಾರೆ.
ರಸ್ತೆ ಅಪಘಾತಗಳು ಹೆಚ್ಚಾಗಲು ಈ ರೀತಿ ಅಪರ ವೇಳೆಯ ಮದುವೆ ಸಮಾರಂಭಗಳೇ ಕಾರಣ. ಕುಡಿತ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗುವವರ ಸಂಖ್ಯೆ ಅಧಿಕವಾಗಿದೆ ಎಂದು ಖಾಪ್ ಗಳು ಹೇಳಿದ್ದಾರೆ.
ಖಾಪ್ ಪಂಚಾಯಿತಿ ಮುಖ್ಯಸ್ಥರು, ಮದುವೆ ವಯಸ್ಸಿನ ಬಗ್ಗೆ ತಾರತಮ್ಯ ತೆಗೆದಿದ್ದರು. ಈಗ ಚಾಲ್ತಿಯಲ್ಲಿರುವ ಮದುವೆಯಾಗಲು ಬೇಕಾದ ಕನಿಷ್ಠ ವಯೋಮಿತಿಯನ್ನು ತೆಗೆದು ಹಾಕಬೇಕು. ಹುಡುಗಿಯರು ಋತುಮತಿಯಾಗುತ್ತಿದ್ದಂತೆ ಮದುವೆ ಮಾಡಿಬಿಡಬೇಕು.
ಹುಡುಗ ಹಾಗೂ ಹುಡುಗಿಯರ ವಯಸ್ಸು 16 ವರ್ಷ ಆಗುತ್ತಿದ್ದಂತೆ ಮದುವೆ ಮಾಡುವುದು ಒಳ್ಳೆಯದು. ಇದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಖಾಪ್ ಪ್ರತಿನಿಧಿ ಸುಬೇ ಸಿಂಗ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮದುವೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ ಮೇಲೆ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ಹಳ್ಳಿಗರಿಗೆ ರಾತ್ರಿ ವೇಳೆ ಮದುವೆಯಿಂದ ಒದಗುವ ತೊಂದರೆಯ ಬಗ್ಗೆ ವಿವರಿಸಲಾಗುತ್ತದೆ.
ರಸ್ತೆ ಅಪಘಾತ, ಅನೈತಿಕ ಚಟುವಟಿಕೆ ಸೇರಿದಂತೆ ಯಾವುದೇ ಅವಘಡ ಸಂಭವಿಸದಂತೆ ತಡೆಗಟ್ಟಲು ಈ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಮದ್ಯಪಾನ ಸೇವನೆ ನಿರ್ಬಂಧ ಹೇರದಿದ್ದರೆ ಊರಿಗೆ ಊರೇ ಹಾಳಾಗುತ್ತದೆ ಎಂದು ಖಾಪ್ ಮುಖಂಡರು ಹೇಳಿದ್ದಾರೆ.
ಸ್ವಗೋತ್ರದಲ್ಲಿ ಮದುವೆ ಬಗ್ಗೆ ಈ ಹಿಂದೆ ಚರ್ಚೆ ನಡೆಸಿದ್ದ ಖಾಪ್ ಮುಖಂಡರು ಈಗ ಮತ್ತೊಮ್ಮೆ ಒಂದೇ ಗೋತ್ರದಲ್ಲಿ ಮದುವೆಗೆ ನಿಷೇಧ ಹೇರಬೇಕು. ಹಿಂದೂ ಮದುವೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ್ದಾರೆ. ಸ್ವಗೋತ್ರ ಮದುವೆಯಿಂದ ಆಗುವ ತೊಂದರೆಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಲಾಗುವುದು ಎಂದು ಖಾಪ್ ಮುಖಂಡ ಹರ್ದೀಪ್ ಸಿಂಗ್ ಹೇಳಿದ್ದಾರೆ.
ರೋಹ್ತಕ್, ಹಿಸಾರ್, ಜಿಂದ್, ಭಿವಾನಿ, ಯಮುನಾನಗರ, ಪಾಣಿಪತ್, ಸೋನಿಪತ್, ಅಂಬಾಲಾ, ಕರ್ನಲ್ ಮತ್ತು ಫರೀದಾಬಾದ್ ಪೊಲೀಸ್ ಠಾಣೆಗಳಲ್ಲಿ ಬಲಾತ್ಕಾರ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಗಳು ದಾಖಲಾಗಿತ್ತು.
ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಹರ್ಯಾಣ ಸರ್ಕಾರ 24 ತಾಸುಗಳ ಸಹಾಯವಾಣಿ 81466-93100 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಳ ಸೇರಿದಂತೆ ಹಲವಾರು ಮಹತ್ವದ ಕ್ರಮಗಳನ್ನು ಪಂಚಕುಲದ ಪೊಲೀಸರು ಪ್ರಕಟಿಸಿದ್ದರು,












Click it and Unblock the Notifications