ಬಯೋಕಾನ್ ಯುವ ವಿಜ್ಞಾನಿ ಕಾವೇರಿ ನೀರು ಪಾಲು

ವೀಕೆಂಡ್ ಮೋಜಿಗೆ ವಿಜ್ಞಾನಿ ಬಲಿ: ಕೊಡಗು ಕುಶಾಲನಗರದಲ್ಲಿರುವ ದುಬಾರೆ ಆನೆಬೀಡು ಪ್ರವಾಸಿ ತಾಣದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಬಯೋಕಾನ್ ವಿಜ್ಞಾನಿ ಪ್ರವೀಣ್ ತನ್ನ ಗೆಳೆಯರ ಸಂಗಡ ವೀಕೆಂಡ್ ಮೋಜಿಗೆ ಇಲ್ಲಿಗೆ ಬಂದಿದ್ದರು.
ಮಧ್ಯಾಹ್ನದ ವೇಳೆ ಬಿಸಿಲು ಜೋರಾಗಿತ್ತು. ಹಾಗಾಗಿ ಕಾವೇರಿ ತೀರದಲ್ಲಿ ಈಜಾಡಲು 9 ಸ್ನೇಹಿತರ ಸಂಗಡ ನದಿಗೆ ಇಳಿದಿದ್ದಾರೆ. ಆದರೆ ಆ ಜಾಗದಲ್ಲಿ ಸುಳಿ ತೀವ್ರವಾಗಿದ್ದರಿಂದ ಪ್ರವೀಣ್ ಕುಮಾರ್ ಅದರ ಸೆಳೆತಕ್ಕೆ ಸಿಕ್ಕಿ ನದಿ ಪಾಲಾಗಿದ್ದಾರೆ. ಪ್ರವೀಣ್ ದೇಹವನ್ನು ನದಿಯಿಂದ ಮೇಲಕ್ಕೆತ್ತಲಾಗಿದ್ದು ಕುಶಾಲನಗರ ಆಸ್ಪತ್ರೆಯಲ್ಲಿ ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಉದ್ಯೋಗಿಯೂ ಕಾವೇರಿ ಸೆಳೆತಕ್ಕೆ ಬಲಿ:
ಮತ್ತೊಂದು ಪ್ರಕರಣದಲ್ಲಿ ರೈಲ್ವೆ ಉದ್ಯೋಗಿಯೊಬ್ಬರು ಕಾವೇರಿ ಸೆಳೆತಕ್ಕೆ ಬಲಿಯಾಗಿದ್ದಾರೆ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದ ಬಳಿ ನಿನ್ನೆ ಭಾನುವಾರ ಈ ಘಟನೆ ನಡೆದಿದೆ.
ಮೃತ ಯುವಕನನ್ನು ಹುಣಸೂರಿನ ಚೇತನ್ (30) ಎಂದು ಗುರುತಿಸಲಾಗಿದೆ. ಚೇತನ್, ಕೋಲ್ಕೊತ್ತಾದಲ್ಲಿ ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ದಸರಾ ರಜೆಗಾಗಿ ಊರಿಗೆ ಬಂದಿದ್ದ ಅವರು ಗೆಳೆಯರ ಸಂಗಡ ಕಾವೇರಿ ನದಿಯಲ್ಲಿ ಈಜಲು ಹೋಗಿ, ಪ್ರಾಣ ತೆತ್ತಿದ್ದಾರೆ.












Click it and Unblock the Notifications