ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕವಾಗಿ 4ನೇ ಸ್ಥಾನಕ್ಕೇರಿದ ಭಾರ್ತಿ ಏರ್ ಟೆಲ್

By Mahesh
|
Google Oneindia Kannada News

Bharti Airtel world's fourth largest mobile operator: Report
ಬೆಂಗಳೂರು, ಅ.22: ಭಾರತದ ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆ ಭಾರ್ತಿ ಏರ್ ಟೆಲ್ ವಿಶ್ವಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆ ಎಂದು ವರದಿ ಬಂದಿದೆ.

ಜಾಗತಿಕವಾಗಿ ಸುಮಾರು 250 ಮಿಲಿಯನ್ ಚಂದಾದಾರರನ್ನು ಹೊಂದಿರುವ ಭಾರ್ತಿ ಏರ್ ಟೆಲ್ ನಾಲ್ಕನೇ ಅತಿದೊಡ್ಡ ಟೆಲಿಕಾಂ ನೆಟ್ವರ್ಕ್ ಸಂಸ್ಥೆಯಾಗಿದೆ ಎಂದು ವೆರ್ ಲೆಸ್ ಇಂಟೆಲಿಜೆನ್ಸ್ ಸಂಸ್ಥೆ ಹೇಳಿದೆ.

ಚೀನಾ ಮೊಬೈಲ್ ಸಂಸ್ಥೆ ಸುಮಾರು 683.08 ಮಿಲಿಯನ್ ಸಂಪರ್ಕ ಸಾಧಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. ವೋಡಾಫೋನ್ ಸಂಸ್ಥೆ 386.8 ಮಿಲಿಯನ್ ಸಂಪರ್ಕ ಸಾಧಿಸಿ ಎರಡನೇ ಸ್ಥಾನ ಪಡೆದಿದೆ.

ಅಮೆರಿಕದ ಮೊವಿಲ್ ಗ್ರೂಪ್ 251.83 ಬಳಕೆದಾರರೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಭಾರತದ ಭಾರ್ತಿ ಏರ್ ಟೆಲ್ ಸಂಸ್ಥೆ 250.04 ಬಳಕೆದಾರರನ್ನು ಹೊಂದಿದ್ದು ನಾಲ್ಕನೇ ಸ್ಥಾನ ಪಡೆದಿದೆ.ಐದನೇ ಸ್ಥಾನದಲ್ಲಿ 243.51 ಬಳಕೆದಾರರ ಸಂಪರ್ಕ ಸಾಧಿಸಿ ಟೆಲಿಫೋನಿಕಾ ಸಂಸ್ಥೆ ಇದೆ.

ಝೈನ್ ಗ್ರೂಪ್ ಮೊಬೈಲ್ ಸೇವಾ ಸಂಸ್ಥೆ ಖರೀದಿಯೊಂದಿಗೆ ಭಾರ್ತಿ ಏರ್ ಟೆಲ್ ತನ್ನ ಮಾರುಕಟ್ಟೆ ಮೌಲ್ಯ ವೃದ್ಧಿಸಿಕೊಂಡು ಜಾಗತಿಕವಾಗಿ ಐದನೇ ಸ್ಥಾನಕ್ಕೇರಿತ್ತು.

ಆಫ್ರಿಕಾದ 15 ರಾಷ್ಟ್ರಗಳಲ್ಲಿ ಝೈನ್ ಗ್ರೂಪ್ ಜನಪ್ರಿಯವಾಗಿದೆ. ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರ್ತಿ ಮೊಬೈಲ್ ಸಂಸ್ಥೆ 3.04 ಬಿಲಿಯನ್ ಡಾಲರ್ ಆದಾಯ ಗಳಿಸಿದ್ದು ಜಾಗತಿಕವಾಗಿ ಬೆಳೆಯಲು ಕಾರಣವಾಗಿದೆ.

ಅಭಿವೃದ್ಧಿ ಶೀಲ ದೇಶ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಆಫ್ರಿಕಾ ದೇಶಗಳಲ್ಲಿ ಭಾರ್ತಿ ಏರ್ ಟೆಲ್ ಉತ್ತಮ ನೆಟ್ವರ್ಕ್ ಹೊಂದುವ ಮೂಲಕ ತನ್ನ ಬೆಳವಣಿಗೆಯನ್ನು ಹಿಗ್ಗಿಸಿಕೊಂಡಿದೆ ಎಂದು ವೆರ್ ಲೆಸ್ ಸಂಸ್ಥೆ ಹೇಳಿದೆ.

ಉಳಿದಂತೆ, ಭಾರತದ ರಿಲಯನ್ಸ್ ಕಮ್ಯೂನಿಕೇಷನ್, ಐಡಿಯಾ ಸೆಲ್ಯುಲರ್ ಹಾಗೂ ಬಿಎಸೆನ್ನೆಲ್ ಸಂಸ್ಥೆಗಳು ಕ್ರಮವಾಗಿ 8, 14 ಹಾಗೂ 20ನೇ ಸ್ಥಾನ ಗಳಿಸಿದೆ.

ರಿಲಯನ್ಸ್ ಸ್ಥಾನದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲವಾದರೂ ಐಡಿಯಾ ಸೆಲ್ಯುಲರ್ ಮೂರು ಸ್ಥಾನ ಮೇಲಕ್ಕೇರಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆ ಎರಡು ಸ್ಥಾನ ಕುಸಿದಿದೆ.

ಟೆಲಿನಾರ್ ಹಾಗೂ ಸಿಸ್ಟೆಮ ವಿದೇಶಿ ಮೂಲದ ಭಾರತ ಟೆಲಿಕಾಂ ಕ್ಷೇತ್ರದ ಕಂಪನಿಗಳು 9 ಹಾಗೂ 15 ನೇ ಸ್ಥಾನದಲ್ಲಿದೆ. ರಷ್ಯಾ ಮೂಲದ ಸಿಸ್ಟೆಮ ಸಂಸ್ಥೆ ನಾಲ್ಕು ಸ್ಥಾನ ಕಳೆದುಕೊಂಡಿದೆ. (ಪಿಟಿಐ)

English summary
Telecom major Bharti Airtel is the fourth largest mobile operator in the world with over 250 million connnections globally, according to analyst firm Wireless Intelligence. China Mobile continues to be at the top spot with 683.08 million connections, followed by Vodafone Group (386.88 million) and America Movil Group (251.83 million).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X