ಅಪ್ಪನ ಮೇಲಿನ ದ್ವೇಷಕ್ಕೆ ಮೆಜಿಸ್ಟಿಕಿನಲ್ಲಿ ಮಗನ ಕಗ್ಗೊಲೆ

finacial-dispute-bangalore-youth-kills-pg-owner-son
ಬೆಂಗಳೂರು, ಅ.20: ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಕೆಲಸದಿಂದ ತೆಗೆದು ಹಾಕಿದ್ದೇ ಬಂತು ದುರ್ಮಾರ್ಗಿ ಯುವಕ ತನ್ನ ಮಾಲೀಕನ 10 ವರ್ಷದ ಮಗನನ್ನೇ ಕೊಲೆ ಮಾಡಿರುವ ಹೇಯ ಘಟನೆ ಮೆಜೆಸ್ಟಿಕ್ ಬಳಿ ಶುಕ್ರವಾರ ನಡೆದಿದೆ.

ಜೀವನ್‌ಬಿಮಾನಗರ ಬಳಿಯ ಕೋಡಿಹಳ್ಳಿ ನಿವಾಸಿ ಭಾಸ್ಕರ್‌ ರೆಡ್ಡಿ ಎಂಬುವರ ಮಗ ಹರ್ಷವರ್ಧನ (10) ಕೊಲೆಯಾದ ಬಾಲಕ. 24 ವರ್ಷದ ಆರೋಪಿ, ಮದನಪಲ್ಲಿಯ ಶ್ರೀನಿವಾಸ್‌ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕ ಎಚ್‌ಎಎಲ್ 3ನೇ ಹಂತದಲ್ಲಿರುವ ಕೇಂಬ್ರಿಡ್ಜ್ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ. ಮೊನ್ನೆ ಬುಧವಾರ (ಅ.17) ಟ್ಯೂಶನ್‌ಗೆ ಹೋದ ಬಾಲಕ ಮನೆಗೆ ಹಿಂತಿರುಗಿರಲಿಲ್ಲ. ಈ ಸಂಬಂಧ ಮಗ ಕಾಣೆಯಾಗಿರುವ ಬಗ್ಗೆ ಭಾಸ್ಕರ್‌ ರೆಡ್ಡಿ ಠಾಣೆಗೆ ದೂರು ನೀಡಿದ್ದರು.

ಅಲ್ಲದೇ, ಮಗನನ್ನು ಶ್ರೀನಿವಾಸ ಅಪಹರಿಸಿರಬಹುದು ಎಂಬ ಶಂಕೆ ಕೂಡ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

'ಭಾಸ್ಕರ್ ಅವರು, ಭಾಮೈದ ಕಿರಣ್‌ ರೆಡ್ಡಿ ಜತೆ ಮಡಿವಾಳದಲ್ಲಿ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದಾರೆ. ಶ್ರೀನಿವಾಸ್ ಅದೇ PGಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಹಣಕಾಸಿನ ವಿಷಯದಲ್ಲಿ ಭಾಸ್ಕರ್ ಮತ್ತು ಶ್ರೀನಿವಾಸ್ ನಡುವೆ ಜಗಳವಾಗಿ ಆತನನ್ನು ಕೆಲಸದಿಂದ ತೆಗದು ಹಾಕಿದ್ದರು.

ಅಲ್ಲದೇ, ಕಿರಣ್‌ ರೆಡ್ಡಿ ಅವರು ಆರೋಪಿಯಿಂದ 1.5 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಅದನ್ನು ಹಿಂತಿರುಗಿಸುವಲ್ಲಿ ವಿಳಂಬ ಮಾಡಿದ್ದರಿಂದ ಈ ಕೃತ್ಯ ಎಸಗಿದ್ದಾನೆ' ಎಂದು ಪೊಲೀಸರು ತಿಳಿಸಿದರು.

ಮೊದಲು ತನ್ನ 1.5 ಲಕ್ಷ ರೂಪಾಯಿ ಬಾಕಿ ವಸೂಲಿಗಾಗಿ ಶ್ರೀನಿವಾಸ, ಮಗುವನ್ನು ಮದನಪಲ್ಲಿಗೆ ಅಪಹರಿಸಿ ಒತ್ತೆ ಹಣದ ಮೂಲಕ ಪಡೆಯಲು ಪ್ಲಾನ್ ಹಾಕಿಕೊಂಡಿದ್ದ. ಹಾಗಾಘಿ ಪರಿಯಚವಿದ್ದ ಮಗುವನ್ನು ಮೆಜಿಸ್ಟಿಕ್ ಗೆ ಕರೆದೊಯ್ದಿದ್ದಾನೆ. ಆದರೆ ಅಲ್ಲಿ ಹರ್ಷವರ್ಧನ ಬಸ್ ಹತ್ತಲು ನಿರಾಕರಿಸಿದ್ದಾನೆ.

ಆಗ ಪ್ಲಾನ್ ಬದಲಾಯಿಸಿದ ಶ್ರೀನಿವಾಸ, ಮಗುವನ್ನು ಕಪಾಲಿ ಟಾಕೀಸ್ ಎದುರಿಗಿರುವ ಲಾಡ್ಜಿಗೆ ಕರೆದೊಯ್ದಿದ್ದಾನೆ. ಅಲ್ಲಿ ಲಾಡ್ಜಿನ್ ಹಿಂಭಾಗಕ್ಕೆ ಕರೆದೊಯ್ದು ಮಗುವನ್ನು ವೈರಿನಿಂದ ನೇಣಿಗೆ ಹಾಕಿ, ಜಾಗ ಖಾಲಿ ಮಾಡಿದ್ದಾನೆ.

'ಬುಧವಾರ ಹರ್ಷವರ್ಧನನನ್ನು ಅಪಹರಿಸಿ ಮೆಜೆಸ್ಟಿಕ್ ಬಳಿ ಇರುವ ಕೇಶವ ನಿಲಯ ಲಾಡ್ಜಿಗೆ ಕರೆದುಕೊಂಡು ಹೋಗಿದ್ದೆ. ಅದೇ ದಿನ ರಾತ್ರಿ ಬಾಲಕನನ್ನು ಕಟ್ಟಡದ ಕೊನೆ ಮಹಡಿಗೆ ಕರೆದೊಯ್ದು ಆತನ ಕುತ್ತಿಗೆಗೆ ವೈಯರ್‌ನಿಂದ ಬಿಗಿದೆ. ಬಳಿಕ ಕಂಬಿಯೊಂದಕ್ಕೆ ನೇಣು ಹಾಕಿ ಕೊಲೆ ಮಾಡಿದೆ ಎಂದು ಶ್ರೀನಿವಾಸ್ ಒಪ್ಪಿಕೊಂಡಿದ್ದಾನೆ' ಎಂದು ಪೂರ್ವ ವಿಭಾಗದ ಡಿಸಿಪಿ ಟಿ.ಜಿ. ಕೃಷ್ಣ ಭಟ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+