ಮಂಗಳೂರಿಗೆ ಸೋನಿಯಾ ಭೇಟಿ ಏನು? ಎತ್ತ?

ಅಕ್ಟೋಬರ್ 18 ರಂದು ಶ್ರೀಮತಿ ಸೋನಿಯಾ ಗಾಂಧಿ ಅವರು ಬಜ್ಪೆ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಆಗಮಿಸಲಿದ್ದಾರೆ. ಸುಮಾರು 4.30 ಕ್ಕೆ ಕಾರ್ಯಕರ್ತರ ಸಮಾವೇಶದ ವೇದಿಕೆ ಅಲಂಕರಿಸುತ್ತಾರೆ.
ನಂತರ ನವರಾತ್ರಿ ಪೂಜೆ ಅಂಗವಾಗಿ ಕುದ್ರೋಳಿಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದಸರಾ ಹಬ್ಬ ಮಹೋತ್ಸವದಲ್ಲಿ ಸೋನಿಯಾ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ನವರಾತ್ರಿ ಪೂಜೆ ಅಂಗವಾಗಿ ಕುದ್ರೋಳಿಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದಸರಾ ಹಬ್ಬ ಮಹೋತ್ಸವದಲ್ಲಿ ಸೋನಿಯಾ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಹೇಳಿದರು.
ಈ ಸಮಾವೇಶದಲ್ಲಿ ಸುಮಾರು 20,000 ಕಾರ್ಯಕರ್ತರು, ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ. ನೆಹರೂ ಮೈದಾನದಲ್ಲಿ ಸಕಲ ಸಿದ್ದತೆ ಸಾಂಗವಾಗಿ ನಡೆದಿದೆ ಎಂದು ಪರಮೇಶ್ವರ್ ತಿಳಿಸಿದರು.
ಸೋಮವಾರ ಬೆಳಗ್ಗೆ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಆಸ್ಕರ್ ಫರ್ನಾಂಡೀಸ್, ಜನಾರ್ದನ ಪೂಜಾರಿ ಹಾಗೂ ಜಿ ಪರಮೇಶ್ವರ್ ಅವರು ನೆಹರೂ ಮೈದಾನಕ್ಕೆ ಭೇಟಿ ನೀಡಿ ಸಮಾವೇಶದ ಸಿದ್ಧತೆಯನ್ನು ಪರಿಶೀಲಿಸಿದರು. ಸುಮಾರು 250ಕ್ಕೂ ಅಧಿಕ ಟ್ರಕ್ ಗಳಲ್ಲಿ ಬಂದಿದ್ದ ಹೊರೆ ಕಾಣಿಕೆಯನ್ನು ದುರ್ಗಾದೇವಿಗೆ ಸಲ್ಲಿಸಲು ಆಯೋಜನೆ ಮಾಡಲಾಗಿದ್ದು, ಜನಾರ್ದನ ಪೂಜಾರಿ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಟಿಕೆಟ್ ಹಂಚಿಲ್ಲ: ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ ಟಿಕೆಟ್ ಗಳು ಮಾರಾಟವಾಗಿಲ್ಲ. ರಮೇಶ್ ಅವರು ಆಧಾರ ಸಮೇತ ಬಂದರೆ ಕೆಪಿಸಿಸಿ ತನಿಖೆ ನಡೆಸಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.
ಚುನಾವಣೆಗೆ ಸಿದ್ಧತೆ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳೂರಿಗೆ ಬರುತ್ತಿರುವುದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಬಿಜೆಪಿ ಹಿಡಿತದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟ ಸದ್ಯದಲ್ಲೇ ಹಾರಲಿದೆ. ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿ ಬರುವ ಬೇರೆ ಪಕ್ಷದ ಮುಖಂಡರಿಗೆ ಸ್ವಾಗತ ಬಯಸುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ನೋಂದಣಿ 45 ಲಕ್ಷ ಸದಸ್ಯತ್ವ: ಕಾಂಗ್ರೆಸ್ ತನ್ನ ಸದಸ್ಯರ ನೋಂದಣಿ ಅಭಿಯಾನ ಮಂಗಳವಾರ(ಅ.16) ಆರಂಭಿಸಿದೆ. ಸುಮಾರು 45 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ.
2010ರಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಲಾಗಿತ್ತು. ಈ ಬಾರಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ. ಬೂತ್ ಮಟ್ಟದಿಂದ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಮಂಗಳೂರಿನ ಸಮಾವೇಶ ಮುಂಬರುವ ಚುನಾವಣಾ ಸಿದ್ಧತೆಗೆ ನಾಂದಿ ಹಾಡಲಿದೆ ಎಂದು ಪರಮೇಶ್ವರ್ ಹೇಳಿದರು.












Click it and Unblock the Notifications