ಸುರೇಂದ್ರಬಾಬು ಜೆಡಿಎಸ್ ಸದಸ್ಯನೇ ಅಲ್ಲ: ದೇವೇಗೌಡ

HD Deve Gowda
ಬೆಂಗಳೂರು, ಅ. 14: ಕಿರುತೆರೆ ನಟಿ ಹೇಮಶ್ರೀ ಹತ್ಯೆ ಪ್ರಕರಣದ ಆರೋಪಿ ಸುರೇಂದ್ರಬಾಬುಗೂ ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುರೇಂದ್ರಬಾಬು ನಮ್ಮ ಪಕ್ಷದ ಸದಸ್ಯರಲ್ಲ. ಕೆಲವರ ಒತ್ತಡಕ್ಕೆ ಮಣಿದು ಟಿಕೆಟ್ ನೀಡಲಾಯಿತು. 2008ರಲ್ಲಿ ಸುರೇಂದ್ರ ಬಾಬು ಜೆಡಿಎಸ್ ಟಿಕೆಟ್ ಪಡೆದಿದ್ದು ನಿಜ. ಆದರೆ, ಚುನಾವಣಾ ಫಲಿತಾಂಶದ ಬಳಿಕ ಅವರು ಪಕ್ಷದಲ್ಲಿಯೇ ಇಲ್ಲ ಎಂದು ದೇವೇಗೌಡ ಹೇಳಿದ್ದಾರೆ.

2009ರಲ್ಲಿ ಲೋಕಸಭೆ ಚುನಾವಣೆಗೂ ಸುರೇಂದ್ರ ಬಾಬು ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ 2009ರ ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ನಟಿ ಹೇಮಶ್ರೀ ಸಾವಿನ ಪ್ರಕರಣದ ಪ್ರಮುಖ ಆರೋಪಿ ಆಕೆ ಪತಿ ಆರ್ ಸುರೇಂದ್ರ ಬಾಬು ಅವರು ರಿಯಲ್ ಎಸ್ಟೇಟ್ ಉದ್ಯಮಿ. ಇವರ ವಿರುದ್ಧ ಹಲವಾರು ಆರೋಪಗಳು ಇವೆ. ಹೇಮಶ್ರೀ ಅವರ ಜೊತೆ ಸುರೇಂದ್ರ ಬಾಬು ಮದುವೆ ಜೂ.22, 2011ರಲ್ಲಿ ನಡೆದಿತ್ತು. ಮದುವೆಯಾದ ಮರುದಿನವೇ ಆತನಿಂದ ಮುಕ್ತಿ ಕೊಡಿಸಿ ಎಂದು ಹೇಮಶ್ರೀ ಪೊಲೀಸರ ಮೊರೆ ಹೊಕ್ಕಿದ್ದರು.

ಈ ಸಂಬಂಧ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆ ಹಾಗೂ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ದೂರು ನೀಡಿದ್ದಾರೆ ಎನ್ನಲಾಗಿದೆ.

ಮದುವೆ ಸಂದರ್ಭದಲ್ಲಿ ಹೇಮಶ್ರೀಗೆ ಸುಮಾರು 50 ಲಕ್ಷ ರು. ಬೆಲೆಬಾಳುವ ಚಿನ್ನಾಭರಣಗಳನ್ನು ವಧುದಕ್ಷಿಣೆಯಾಗಿ ಬಾಬು ಸುಮಾರು 400 ಕೋಟಿ ರು ಗಳ ಒಡೆಯ ಎನ್ನಲಾಗಿದೆ. ಆದರೆ, ಮದುವೆ ಸಂದರ್ಭದಲ್ಲಿ ಯಾವುದೇ ವಧುದಕ್ಷಿಣೆ ಪಡೆದಿಲ್ಲ ಎಂದು ಹೇಮಶ್ರ್ರೀ ಅಕ್ಕ ರೂಪಶ್ರೀ ಸ್ಪಷ್ಟಪಡಿಸಿದ್ದಾರೆ.

ಹೇಮಶ್ರೀ 2008ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು.

ಚುನಾವಣಾ ಕಣದಲ್ಲಿದ್ದ ಅತ್ಯಂತ ಚಿಕ್ಕ ವಯಸ್ಸಿನ ಸ್ಪುರದ್ರೂಪಿ, ಚಿನಕುರಳಿಯಂಥ ಅಭ್ಯರ್ಥಿಯಾಗಿ ಹೇಮಶ್ರೀ ಎಲ್ಲರ ಗಮನ ಸೆಳೆದಿದ್ದಳು. ಸುರೇಂದ್ರಬಾಬುವಿಗೂ ಈ ಸಂದರ್ಭದಲ್ಲೇ ಹೇಮಶ್ರೀ ಮೇಲೆ ಮನಸ್ಸಾಗಿದೆ.

ಹೇಮಶ್ರೀ ಚುನಾವಣೆಯಲ್ಲಿ ಗೆಲ್ಲದೇ ಹೋದಾಗ ಮೈಮೇಲಿದ್ದ ಸಾಲವನ್ನು ತೀರಿಸಿಕೊಳ್ಳಲು ಆಕೆ ಪೋಷಕರು ಅನ್ಯಮಾರ್ಗಗಳನ್ನು ಹುಡುಕಿದ್ದಾರೆ. ಈ ಸಮಯಕ್ಕೆ ಸಿಕ್ಕ ಸುರೇಂದ್ರ ಬಾಬು ಆಕೆ ಸೌಂದರ್ಯಕ್ಕೆ ಮರುಳಾಗಿ ಕೈ ಹಿಡಿಯಲು ಮುಂದಾಗಿದ್ದಾನೆ. ಆರ್ಥಿಕ ಸಂಕಷ್ಟದಿಂದ ಪರಿಹಾರ ನೀಡುವುದಾಗಿ ಹೇಳಿದ್ದಾನೆ. ಅನೇಕ ಪ್ರಭಾವಿ ರಾಜಕೀಯ ನಾಯಕರ ಒತ್ತಡದ ನಂತರ ಹೇಮಶ್ರೀ ಅವರು ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದಾರೆ.

ಅಪ್ಪ ಅಮ್ಮನ ಒತ್ತಡಕ್ಕೆ ಮಣಿದು ಹಸೆಮಣೆ ಏರಿದ್ದ ಹೇಮಶ್ರೀ ಮೈಮೇಲೆ ಆಕೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ ಆಸ್ತಿ ಪ್ರಮಾಣದ ಡಬ್ಬಲ್ ಮೊತ್ತ ಒಡವೆ ವಸ್ತ್ರ ಇತ್ತು ಎಂದರೆ ಸುರೇಂದ್ರನ ಪ್ರಭಾವ ಎಷ್ಟಿತ್ತು ಎಂದು ಊಹಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+