ಮಂಗಳೂರು ಪ್ರೌಢಶಾಲೆ ವಿದ್ಯಾರ್ಥಿನಿಯರು ಪತ್ತೆಯಾದರು

ಶಿವಭಾಗದಲ್ಲಿ ಶನಿವಾರ ಬೆಳಗ್ಗೆ ಈ ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ಶುಕ್ರವಾರ ರಾತ್ರಿ ಸ್ಥಳೀಯ ಮನೆಯೊಂದರಲ್ಲಿ ಆಶ್ರಯಪಡೆದಿದ್ದರು. ಇಲ್ಲಿನ ಇಎಸ್ಐ ಆಸ್ಪತ್ರೆಯ ಸಮೀಪವಿರುವ ಮನೆಯಲ್ಲಿ ಇವರು ಉಳಿದುಕೊಂಡಿದ್ದರು. ನಾಲ್ವರು ಹೆಣ್ಣುಮಕ್ಕಳ ಬಗ್ಗೆ ಮರುಕಪಟ್ಟ ಮನೆಯೊಡತಿ ಬೆಳಗ್ಗೆ ಆಗುತ್ತಿದ್ದಂತೆ ಮನೆ ಬಿಟ್ಟು ಹೋಗಬೇಕು ಎಂಬ ಷರತ್ತಿನೊಂದಿಗೆ ರಾತ್ರಿ ಅವರನ್ನು ಪೊರೆದಿದ್ದಾರೆ.
ಬೆಳಗ್ಗೆಯ ವೇಳೆಗೆ ಪೊಲೀಸರಿಗೂ ಈ ವಿಷಯ ತಿಳಿದುಬಂದು ಸೀದಾ ಆ ಮನೆಗೆ ತೆರಳಿ, ವಿದ್ಯಾರ್ಥಿನಿಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಅವರವರ ಪೋಷಕರಿಗೆ ಒಪ್ಪಿಸಿ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದ್ದಿವಿ. ಮನೆಯವರು ಬೈತಾರೆ ಅಂತ ಮನೆ ಬಿಟ್ಟು ಹೋಗಿದ್ದೆವು ಎಂದು ನಾಲ್ಕೂ ಬಾಲಕಿಯರು ಹೇಳಿದ್ದಾರೆ.
ನಾಪತ್ತೆಯಾಗಿದ್ದ ಕಥೆ:
ಕರಾವಳಿ ಭಾಗದಲ್ಲಿ ವಿದ್ಯಾರ್ಥಿನಿಯರು ಕಾಣೆಯಾಗುವ ಪ್ರಕರಣಗಳಿಗೆ ಕೊನೆ ಮೊದಲಿಲ್ಲ ಎಂಬಂತಾಗಿದೆ. ನಗರದ ಕಪಿತಾನಿಯೋ (Capitanio) ಹೈಸ್ಕೂಲಿನ ನಾಲ್ವರು ಹೆಣ್ಣು ಮಕ್ಕಳು ನಿನ್ನೆಯಿಂದ (ಅಕ್ಟೋಬರ್ 12) ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
ಇವರೆಲ್ಲ 8 ತರಗತಿಯ ವಿದ್ಯಾರ್ಥಿನಿಯರು. ಲಾವಣ್ಯ, ಧನ್ಯಶ್ರೀ, ಸುಪ್ರೀತಾ ಮತ್ತು ಪ್ರತೀಕ್ಷಾ ಗಾಢ ಸ್ನೇಹಿತೆಯರಾಗಿದ್ದು, ಶಾಲಾ ಸಮವಸ್ತ್ರದಲ್ಲೇ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಪೊಲೀಸರು/ಸಾರ್ವಜನಿಕರು ಸೇರಿದಂತೆ ಇಡೀ ಊರಿಗೆ ಉರೇ ನಿನ್ನೆಯಿಂದ ಇವರನ್ನು ಹುಡಕಾಡತೊಡಗಿದೆ. ಪೊಲೀಸ್ ನಾಕಾಬಂದಿಯೂ ಯಾವುದೇ ಫಲ ನೀಡಿಲ್ಲ.
ಇವರ ಪೈಕಿ ಮೂವರು ಹುಡುಗಿಯರು ಕಣ್ಣೂರಿನ ಕಡಕ್ಕಲ್ ನವರಾಗಿದ್ದರೆ ಮತ್ತೊಬ್ಬಳು ಕೊಲ್ಲೂರುಗುಡ್ಡೆಯವಳು. ಓದಿನಲ್ಲಿ ಅಷ್ಟೇನೂ ಚುರುಕಿಲ್ಲ. ಶುಕ್ರವಾರ ಎಂದಿನಂತೆ ಶಾಲೆಗೆ ಹಾಜರಾದ ಈ ನಾಲ್ವರೂ ಹುಡುಗಿಯರು ಸಂಜೆ ತರಗತಿಗಳು ಮುಗಿಯುತ್ತಿದ್ದಂತೆ ಪರಾರಿಯಾಗಿದ್ದಾರೆ.
ಶಿವಬಾಗ್ ಬಳಿ ಈ ನಾಲ್ವರೂ ಚುರುಮುರಿ ತಿನ್ನುತ್ತಿರುವುದನ್ನು ನೋಡಿದವರಿದ್ದಾರೆ. ಅಷ್ಟೇ ಅಲ್ಲ, ಅಲ್ಲೇ ಸುತ್ತಮುತ್ತ ಎರಡು ಮನೆಗಳಲ್ಲಿ ಕೆಲಸ ಕೊಡಿ ಎಂದು ಕೇಳಿದರಂತೆ.
ಇವತ್ತಲ್ಲ, ನಾಳೆ ವಾಪಸಾಗಬಹುದು ಎಂದು ಪೋಷಕರು ಕಾದುಕುಳಿತಿದ್ದಾರೆ. ಇನ್ನು ಕೆಲವರು ಮಕ್ಕಳನ್ನು ಯಾರಾದರೂ ಅಪಹರಿಸಿರಬಹುದಾ ಅಥವಾ ಏನಾದರೂ ಅನಾಹುತಾ ಮಾಡಿಕೊಂಡರಾ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications