ತಮಿಳುನಾಡಿಗೆ ನೀರು ಬಿಡುವುದಿಲ್ಲ: ಬೊಮ್ಮಾಯಿ

ನವದೆಹಲಿ, ಅ.8: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರ ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಲಾಗಿದೆ.
ಆದರೆ, ಸುಪ್ರೀಂ ಆದೇಶದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ರೈತರ ಹಿತದೃಷ್ಟಿಯಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಸೋಮವಾರ(ಅ.8) ಮಧ್ಯರಾತ್ರಿಯಿಂದ ತಮಿಳುನಾಡಿಗೆ ಹನಿ ನೀರು ಬಿಡುವುದಿಲ್ಲ ಈ ಬಗ್ಗೆ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.
ಕಾವೇರಿ ಪ್ರಾಧಿಕಾರ ಆದೇಶದ ಅನುಗುಣವಾಗಿ ಅ.12ರವರೆಗೆ ನೀರು ಬಿಡಬೇಕು ಎಂಬ ಸುಪ್ರೀಂ ಆದೇಶವನ್ನು ಪಾಲಿಸಬೇಕಾಗುತ್ತದೆ. ಆದರೆ, ಮೊದಲ ಬಾರಿಗೆ ದಿಟ್ಟತನ ತೋರಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.
ಸುಮಾರು 15 ಲಕ್ಷ ಎಕರೆ ಭೂಮಿಯಲ್ಲಿನ ಸಾಂಬಾ ಭತ್ತದ ಬೆಳೆ ಉಳಿಸಲು ತಮಿಳುನಾಡಿಗೆ ಅಕ್ಟೋಬರ್ 1, 2012 ರಿಂದ ಜನವರಿ 31, 2013ರ ತನಕ ಸುಮಾರು 123 ಟಿಎಂಸಿ ಅಡಿ ಅಥವಾ ಪ್ರತಿದಿನ ಸರಾಸರಿ 1 ಟಿಎಂಸಿ ಪೂರೈಕೆ ಮಾಡಬೇಕಿದೆ. ತಮಿಳುನಾಡು ಒಟ್ಟಾರೆ 38 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಿದೆ.












Click it and Unblock the Notifications