ಸೋಮ ರೆಡ್ಡಿಗೆ ಸಿಕ್ತು ಜಾಮೀನು; ಸಂಜೆ ಬಿಡುಗಡೆ

bailgate-mla-soma-reddy-gets-bail-ap-hc-to-release
ಹೈದರಾಬಾದ್, ಅ.8: ತಮ್ಮನಿಗಾಗಿ ಜಾಮೀನು ಖರೀದಿ ಪ್ರಕರಣದಲ್ಲಿ ಗುರುತರ ಆರೋಪ ಹೊತ್ತಿದ್ದ ಬಳ್ಳಾರಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಜಾಮೀನು ಲಭಿಸಿದ್ದು, ಚೆರ್ಲಪಲ್ಲಿ ಜೈಲಿನಿಂದ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ರೆಡ್ಡಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೇಲಿದ್ದಾರೆ.

ಹೈಕೋರ್ಟಿನಲ್ಲಿ ಇಂದು ವಿಚಾರಣೆ ನಡೆಸಿದ ಸಮುದ್ರಾಲ ಗೋವಿಂದರಾಜು ನ್ಯಾಯಪೀಠ ಸೋಮಶೇಖರ ರೆಡ್ಡಿ ವಿರುದ್ಧ ದಾಖಲಾಗಿದ್ದ ಎರಡನೆಯ ಆರೋಪಪಟ್ಟಿಯ ವಿಚಾರಣೆ ನಡೆಸಿದ ಬಳಿಕ ಈ ಜಾಮೀನು ಮಂಜೂರು ಮಾಡಿದೆ. ಆ. 6ರಂದು ವಿಚಾರಣೆಗೆಂದು ಕರೆಸಿಕೊಂಡ ACB ಅಧಿಕಾರಿಗಳು, ಸೋಮಶೇಖರ ರೆಡ್ಡಿಯನ್ನು ಬಂಧಿಸಿದ್ದರು.

ಅಕ್ರಮ ಗಣಿ ಪ್ರಕರಣದಲ್ಲಿ ಚಂಚಲಗೂಡ ಜೈಲುವಾಸಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ಖರೀದಿಸುವ ಪ್ರಕರಣದಲ್ಲಿ ನ್ಯಾ. ನಾಗಮಾರುತಿ ಶರ್ಮಾ ಅವರು ಪ್ರಮುಖ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪಹೊತ್ತಿರುವ ನ್ಯಾ. ಶರ್ಮಾ ಅವರ ಬಾಯಿಮಾತಿನ ಹೇಳಿಕೆಯನ್ನಾಧರಿಸಿ, KMF ಅಧ್ಯಕ್ಷರೂ ಆಗಿರುವ ಸೋಮಶೇಖರ ರೆಡ್ಡಿ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳವು (ACB) ಆರೋಪಪಟ್ಟಿಗಳನ್ನು ದಾಖಲಿಸಿತ್ತು. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಜಡ್ಜ್ ಗೋವಿಂದರಾಜು ಸೋಮಶೇಖರ ರೆಡ್ಡಿಗೆ ಜಾಮೀನು ದಯಪಾಲಿಸಿದ್ದಾರೆ.

ಕಳೆದ ತಿಂಗಳು ಇದೇ ಪ್ರಕರಣದಲ್ಲಿ ಮೊದಲ FIRಗೆ ಸಂಬಂಧಿಸಿದಂತೆ ಆಂಧ್ರ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ನೀಡಿತ್ತು. ಕುತೂಹಲದ ಸಂಗತಿಯೆಂದರೆ ಕಂಪ್ಲಿ ಶಾಸಕ ಸುರೇಶ್ ಬಾಬುಗೆ ಈ ಎರಡನೆಯ FIRನಲ್ಲೂ ಜಾಮೀನು ಮಂಜೂರಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+