ಗಾಯಕಿ ಆಶಾ ಭೋಂಸ್ಲೆ ಪುತ್ರಿ ವರ್ಷಾ ದುರಂತ ಅಂತ್ಯ

Asha with Varsha Bhonsle
ಮುಂಬೈ, ಅ.8: ಸುಮಧುರ ಬಾಲಿವುಡ್ ಗಾಯಕಿ ಆಶಾ ಭೋಂಸ್ಲೆ ಅವರ ಎರಡನೇ ಪುತ್ರಿ ವರ್ಷಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ಪೆದ್ದಾರ್ ರಸ್ತೆ ನಿವಾಸದಲ್ಲಿ ಸೋಮವಾರ (ಅ.8) ಈ ದುರ್ಘಟನೆ ನಡೆದಿದೆ. ಸ್ಥಳೀಯರು ಹಾಗೂ ಪೊಲೀಸರು ವರ್ಷಾ ಅವರನ್ನು ಬದುಕಿಸುವ ಯತ್ನ ವಿಫಲವಾಗಿದ್ದು, 56 ವರ್ಷದ ವರ್ಷಾ ಅವರು ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ವರ್ಷಾ ಅವರಿದ್ದ ನಿವಾಸದಿಂದ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಗುಂಡು ಹಾರಿಸಿದ ಶಬ್ದ ಕೇಳಿಸಿದೆ. ತಕ್ಷಣವೇ ನೆರೆಮನೆಯವರು ವರ್ಷಾ ಮನೆಗೆ ಧಾವಿಸಿದ್ದಾರೆ. ಆದರೆ, ಮನೆ ಒಳಗಿನಿಂದ ಬಾಗಿಲು ಹಾಕಿರುವುದು ಕಂಡು ಬಂದಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಪೊಲೀಸರು ಬಂದು ಬಾಗಿಲು ಒಡೆದು ಒಳಗೆ ಬಂದು ನೋಡಿದರೆ, ವರ್ಷಾ ಅವರು ರಕ್ತದ ಮಡುವಿನಲ್ಲಿ ಶವವಾಗಿ ಮಲಗಿರುವುದು ಕಂಡು ಬಂದಿದೆ. ಘಟನೆ ನಡೆದ ಸ್ಥಳದಲ್ಲಿ ಅತ್ಮಹತ್ಯಾ ಪತ್ರವೊಂದು ಸಿಕ್ಕಿದೆ. 'ಜೀವನದಲ್ಲಿ ಜಿಗುಪ್ಸೆ ಹೊಂದಿ, ಮಾನಸಿಕ ತೊಳಲಾಟ ಅನುಭವಿಸಲು ಸಾಧ್ಯವಾಗದೆ ಸಾಯಲು ನಿರ್ಧರಿಸಿದೆ' ಎಂದು ಪತ್ರದಲ್ಲಿ ಬರೆಯಲ್ಪಟ್ಟಿದೆ.

ಆದರೆ, ವರ್ಷಾ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಿಂಗಾಪುರದಲ್ಲಿ ಮರಾಠಿ ಸಾಂಸ್ಕೃತಿಕ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಶಾ ಭೋಂಸ್ಲೆ ಅವರು ತೆರಳಿದ್ದಾರೆ. 2008ರಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾವಿನ ದವಡೆಯಿಂದ ವರ್ಷಾ ಪಾರಾಗಿದ್ದರು.

ಮುಂಬೈನ ಪ್ರತಿಷ್ಠಿತ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ವರ್ಷಾ ಅವರು ಹವ್ಯಾಸಿ ಬರಹಗಾರ್ತಿ ವರ್ಷಾ ಅವರು ಈ ಮುಂಚೆ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ವರ್ಷಾ ತಮ್ಮ ತಾಯಿ ಆಶಾ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ವರ್ಷಾರನ್ನು ಗಮನಿಸಿದ ಪರಿಚಾರಕಿ ಮನೆಯವರಿಗೆ ಸುದ್ದಿ ತಿಳಿಸಿದರು. ಆ ಕೂಡಲೆ ಆಕೆಯನ್ನು ಮುಂಬೈನ ಜಲ್ಸೋಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

'ರೀಡೀಫ್' ಮತ್ತು 'ದಿ ಸಂಡೇ ಅಬ್ಸರ್ವರ್' ಪತ್ರಿಕೆಗಳಲ್ಲಿ ಆಕೆ ಅಂಕಣಕಾರ್ತಿಯಾಗಿ ವರ್ಷಾ ಕಾರ್ಯನಿರ್ವಹಿಸುತ್ತಿದ್ದರು. ಮರಾಠಿ ಸಿನಿಮಾಗಳಲ್ಲಿ ಗಾಯಕಿಯಾಗಿ ಕೂಡಾ ಪರಿಚಿತರಾಗಿದ್ದಾರೆ. ಹೇಮಂತ್ ಕೆಂಕ್ರೆ ಎಂಬುವವರನ್ನು ಮದುವೆಯಾಗಿದ್ದ ವರ್ಷಾ ಅವರು ವಿವಾಹ ವಿಚ್ಛೇದನ ಪಡೆದಿದ್ದರು.

ವರ್ಷಾ ಅವರು ಗಾಯಕಿ ಆಶಾ ಭೋಂಸ್ಲೆ ಹಾಗೂ ಗಣಪತ್ ರಾವ್ (ಆಶಾ ಅವರ ಮೊದಲ ಪತಿ) ದಂಪತಿಯ ಎರಡನೇ ಪುತ್ರಿಯಾಗಿದ್ದಾರೆ. 2008, 2010 ರಲ್ಲಿ ವರ್ಷಾ ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ತಿಳಿದಿದ್ದರೂ ವರ್ಷಾ ಅವರ ಮನೆ ಕೆಲಸಗಾರರು ಪಿಸ್ತೂಲ್ ಸಿಗದಂತೆ ಇಡುವಲ್ಲಿ ವಿಫಲವಾಗಿದ್ದೇ ವರ್ಷಾ ಸಾವಿಗೆ ಕಾರಣ ಎಂಬ ಸುದ್ದಿಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+