ವಿದೇಶಾಂಗ ಬೆಡಗಿ ಹೀನಾ ಉಡುಪು, ಎಸ್ಎಂ ಕೃಷ್ಣರ ವಿಗ್ಗೂ
ಇಸ್ಲಾಮಾಬಾದ್, ಅ.6 : ಪಾಕಿಸ್ತಾನದ ಬೆಡಗಿ 'ಎಕ್ಸಟರ್ನಲ್ ಅಫೇರ್ಸ್ ರಾಣಿ' ಹೀನಾ ರಬ್ಬಾನಿ ಖಾರ್ ಮತ್ತು ನಮ್ಮ ಮಂಡ್ಯದ ಸಂಸದ ಎಸ್ ಎಂ ಕೃಷ್ಣ ಅವರ ಜೀವನಶೈಲಿ ಬಗ್ಗೆ ಪಾಕ್ ವಿದೇಶಾಂಗದ ಮಾಜಿ ಕಾರ್ಯದರ್ಶಿ ಶಂಷಾದ್ ಅಹ್ಮದ್ ಅವರು ಕಿಡಿಕಾರಿದ್ದಾರೆ.
ಗಮನಾರ್ಹವೆಂದರೆ ಇವರಿಬ್ಬರೂ ಪ್ರಸ್ತುತ ತಮ್ಮ ತಮ್ಮ ರಾಷ್ಟ್ರಗಳ ವರ್ಚಸ್ವಿ ವಿದೇಶಾಂಗ ಸಚಿವರು. ಹಾಗಾಗಿಯೇ ಈ ಮಾಜಿ ಕಾರ್ಯದರ್ಶಿ ಅವರಿಬ್ಬರ ವಿರುದ್ಧ ಅಸಮಾಧಾನಗೊಂಡಿರುವುದು.

ವಿದೇಶಾಂಗ ಸಚಿವೆ ಹೀನಾ ರಬ್ಟಾನಿ ಖಾರ್ ಅವರದು ದುಂದುವೆಚ್ಚದ ಜೀವನಶೈಲಿ ಎಂದಿದ್ದರೆ ಭಾರತದ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ಪದೇ ಪದೇ ವಿಗ್ ಬಣ್ಣ ಬದಲಾಯಿಸುತ್ತಿರುವುದನ್ನು ವಿಗ್ ರಾಜತಾಂತ್ರಿಕತೆ (wig diplomacy) ಎಂದು ಶಂಷಾದ್ ಕರೆ (ಜರಿ)ದಿದ್ದಾರೆ.
ವಿದೇಶಾಂಗ ಸಚಿವರಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ಇವರಿಬ್ಬರೂ ತಮ್ಮ ಉಡುಪು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಇರಬೇಕಾದ ಗಾಂಭೀರ್ಯ, ನಡೆನುಡಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳುವ ಅಗತ್ಯವಿದೆ ಎಂದು ಶಂಷಾದ್ ಅಹ್ಮದ್ 'ಉಚಿತ' ಸಲಹೆ ನೀಡಿದ್ದಾರೆ.
ಹೀನಾ ರಬ್ಟಾನಿ ಖಾರ್ ಅವರು ಅತ್ಯಾಧುನಿಕ ಫ್ಯಾಷನ್ ಉಡುಪುಗಳು, ಅವುಗಳ ಬಣ್ಣ, ವಿನ್ಯಾಸ, ಅವರು ಹಿಡಿದುಕೊಳ್ಳುವ ಬ್ಯಾಗ್, ಧರಿಸುವ ಚಪ್ಪಲಿ ಇತ್ಯಾದಿಗಳನ್ನೆಲ್ಲ ಅವರು ಜಾಲಾಡಿದ್ದಾರೆ. ಇಬ್ಬರಿಗೂ Foreign Service Academyಯಲ್ಲಿ ಅಲ್ಪಾವಧಿ ಶಿಷ್ಟಾಚಾರ ಪಾಠ ಹೇಳಿಕೊಡುವ ಅಗತ್ಯವಿದೆ ಎಂದಿದ್ದಾರೆ.
ಬಿಲಾವಲ್ ಜತೆಗಿನ ಪ್ರಣಯ ಸಂಬಂಧಗಳ ವದಂತಿಗಳಿಂದಾಗಿ ಚರ್ಚೆಯ ಕೇಂದ್ರ ಬಿಂದುವಾಗಿರುವ ಹೀನಾ ಈ ವದಂತಿ ಬಹಿರಂಗವಾದ ಬಳಿಕ ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ತುಂಟ ಬಿಲಾವಲ್ ಮತ್ತು ಅನುಭವಿ ಹೀನಾ ಜೋಡಿಯ ಬಗ್ಗೆ ವಿಶ್ವದಾದ್ಯಂತ ಪಡ್ಡೆಗಳು ಕುಹಕವಾಡುತ್ತಿದ್ದಾರೆ.
ಬಿಲಾವಲ್ ಮತ್ತು ಹೀನಾ ಜೋಡಿಯನ್ನು 'ಕೋಯಿ ಪತ್ತರ್ ಸೆ ಮಾರೋ' ಎನ್ನುತ್ತಾ ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು ಎಂದು ಇಸ್ಲಾಮಿಕ್ ಧಾರ್ಮಿಕ ಮುಖಂಡರು ಇತ್ತೀಚೆಗೆ ಹೇಳಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications