ಕೊನೆಗೂ ಪ್ರಧಾನಿಗೆ ಕೃಷ್ಣ ಪತ್ರ; ತಕ್ಷಣ ನೀರು ನಿಲ್ಸಿ

ಶನಿವಾರ ಬೆಳಗ್ಗೆ ಪತ್ರ ಬರೆದಿರುವ ಕೇಂದ್ರ ಸಚಿವ ಕೃಷ್ಣ ತಕ್ಷಣ ತಮಿಳುನಾಡಿಗೆ ನೀರು ಬಿಡುವುದಕ್ಕೆ ತಡೆಯಾಜ್ಞೆ ನೀಡಿ ಎಂದು ಮನವಿ ಮಾಡಿದ್ದಾರೆ.
ಸ್ವಲ್ಪ ಖಾರವಾಗಿಯೇ ಪತ್ರ ಬರೆದಿರುವ ಕೃಷ್ಣ ಸಾಹೇಬರು ನೀವು ಹೇಳಿದಂತೆ ತಮಿಳುನಾಡಿಗೆ ದಿನಾ ನೀರು ಬಿಟ್ಟರೆ ಸದ್ಯದಲ್ಲೇ ಕಾವೇರಿ ಒಡಲು ಬರಿದಾಗುತ್ತದೆ. ಆಮೇಲೆ ಕುಡಿಯಲೂ ಸಹ ಒಂದು ತೊಟ್ಟು ನೀರು ಇರುವುದಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ತಮ್ಮ ಆದೇಶವನ್ನು ಪುನರ್ ಪರಿಶೀಲಿಸಿ ಬುದ್ಧಿ' ಎಂದು ಪ್ರಧಾನಿ ಸಿಂಗ್ ಅವರಲ್ಲಿ ಭಿನ್ನವಿಸಿಕೊಂಡಿದ್ದಾರೆ.
ತಮ್ಮ ತವರೂರಿನ ಅಕ್ಕಪಕ್ಕದ ರೈತರ ವಿರುದ್ಧ FIR ಬಿದ್ದ ಮೇಲೆ, ತಮಿಳುನಾಡಿಗೆ ಭರಪೂರ ನೀರು ಹರಿದುಹೋದ ಮೇಲೆ, ಇಡೀ ಕರ್ನಾಟಕ ಕಾವೇರಿ ಉಳಿಸಿಕೊಳ್ಳಲು ಬೀದಿಗಿಳೀದ ಮೇಲೆ, ನಿನ್ನೆಯವರೆಗೂ ಅಪಾರ ಪ್ರಮಾಣದ ನೀರು ಹರಿದ ಮೇಲೆ ಇಷ್ಟೊಂದು ತಡವಾಗಿ ಕೃಷ್ಣ ಸಾಹೇಬರು ನಿದ್ದೆಯಿಂದ ಎಚ್ಚೆತ್ತಿರುವುದು ಕುತೂಹಲಕಾರಿಯಾಗಿದೆ.
ಈ ಮಧ್ಯೆ, ಕರ್ನಾಟಕದಲ್ಲಿ ಕೆಲವು ಜಿಲ್ಲಾ ಪ್ರದೇಶಗಳನ್ನು ಹೊರತು ಪಡಿಸಿ, ಕಾವೇರಿ ಕಣಿವೆಯ ಭಾಗಗಳಲ್ಲಿ ಕರ್ನಾಟಕ ಬಂದ್ ಯಶಸ್ವಿಯಾಗಿ ನಡೆದಿದೆ.












Click it and Unblock the Notifications