ಎಚ್ಚರಾ! ಬೆಂಗಳೂರಿಗೆ ಕಾವೇರಿ ನೀರು ಇಲ್ಲದೇ ಹೋದೀತು

ಇತ್ತ ಕಾವೇರಿಗಾಗಿ ನಾವೆಲ್ಲ ಹೋರಾಡುತ್ತಿರುವಾಗ ಕಾನೂನು ಸಚಿವ ಸುರೇಶ್ ಕುಮಾರ್ ಎಲ್ಲಿ ದುರ್ಬೀನು ಹಾಕಿಕೊಂಡು ಹುಡುಕುತ್ತಿರುವ ಸಂದರ್ಭದಲ್ಲೇ ಮಾನ್ಯ ಸುರೇಶ್ ಅವರು ಬೆಂಗಳೂರು ಜನತೆಯಲ್ಲಿ ಭೀತಿ ಹುಟ್ಟಿಸಿದ್ದಾರೆ.
ರಾಜ್ಯದಲ್ಲಿ ಜಲಾಶಗಳೆಲ್ಲ ತ್ವರಿತವಾಗಿ ಬರಿದಾಗುತ್ತಿವೆ. ತಮಿಳುನಾಡಿಗೆ ಪ್ರಧಾನಿ ಹೇಳಿದಂತೆ ನೀರು ಬಿಡುವುದರಿಂದ ಇನ್ನೊಂದೇ ತಿಂಗಳಲ್ಲಿ ಕಾವೇರಿ ಜಲಾಶಯಗಳು ಖಾಲಿಯಾಗಲಿದೆ. ಹಾಗಾಗಿ ಚಿತ್ರಣ ಭಯಾನಕವಾಗಿದೆ. ಅದಕ್ಕಿಂತ ಭೀಕರ ಸತ್ಯವೆಂದರೆ ಈ ಸಮಸ್ಯೆಯಿಂದ ಹೊರಬರಲು ಯಾವುದೇ ಮಾರ್ಗವೂ ಕಾಣಿಸುತ್ತಿಲ್ಲ. ಮುಂದಿನ ಮಳೆಗಾಲಕ್ಕಾಗಿ ಕಾದುಕುಳಿತುಕೊಳ್ಳಬೇಕಷ್ಟೇ ಎಂದು ಸಚಿವ ಸುರೇಶ್ ಹಣೆಯಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದ್ದಾರೆ.
'ಪ್ರಸ್ತುತ ಮಂಡ್ಯ ಶ್ರೀರಂಗಪಟ್ಟದಲ್ಲಿರುವ ಕನ್ನಂಬಾಡಿ ಕಟ್ಟೆ ಮತ್ತು ಚಾಮರಾಜನಗರ ಜಿಲ್ಲೆಯ ಕಬಿನಿ ಜಲಾಶಯದಿಂದ ದಿನಂಪ್ರತಿ 900 ಮೆಗಾ ಲೀಟರ್ಸ್ (megalitres per day- MLD) ನೀರು ಬೆಂಗಳೂರಿಗೆ ಸರಬರಾಜು ಆಗುತ್ತಿದೆ. ಕಾವೇರಿ 4ನೆಯ ಹಂತದ ಎರಡನೆಯ ಯೋಜನೆಯಿಂದ ಬಿಬಿಎಂಪಿಯ ಹೊಸ ಬಡಾವಣೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಪ್ರಯೋಗಾರ್ಥವಾಗಿ ಇತ್ತೀಚೆಗೆ ಈ ಬಡವಾಣೆಗಳಿಗೆ ನೀರು ಹರಿಯಬಿಡಲಾಗಿತ್ತು' ಎಂದು ಸುರೇಶ್ ಮಾಹಿತಿ ನೀಡಿದ್ದಾರೆ.
'ಬಿಬಿಎಂಪಿ ವ್ಯಾಪ್ತಿಯ ಹಳೆಯ ಬಡಾವಣೆಗಳಿಗೆ ನಿಗದಿತವಾಗಿ ಸರಬರಾಜು ಮಾಡುವುದಕ್ಕೇ ನೀರು ಲಭ್ಯವಾಗುತ್ತಿಲ್ಲ. ಅಂತಹುದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಹೊಸ ಬಡಾವಣೆಗಳಿಗೆ ನೀರು ಎಲ್ಲಿಂದ ತರುವುದು?' ಎಂದು ಸಚಿವ ಸುರೇಶ್ ಭುಜದ ಮೇಲೆ ಖಾಲಿ ಕೊಡ ಹೊತ್ತು ಕೇಳುತ್ತಿದ್ದಾರೆ.












Click it and Unblock the Notifications