ಗಾಂಧಿ ಜಯಂತಿ ದಿನ 'ಹಿಸ್ ಎಕ್ಸಲೆನ್ಸಿ' ಥೇಮ್ಸ್ ನದಿಗೆ

president-pranab-good-bye-to-his-excellency-honourable
ಪಾಟ್ನಾ (ಧರ್ಬಾಂಗಾ), ಅ.3: ರಾಷ್ಟ್ರವು ನಿನ್ನೆ ಗಾಂಧಿ ಜಯಂತಿಯನ್ನು ಸರಳವಾಗಿ ವಾಡಿಕೆಯಂತೆ ಆಚರಿಸಿದೆ. ಈ ಮಧ್ಯೆ ಮಾಹಾತ್ಮ ಗಾಂಧಿ ಅವರು ಯಾವ ಬ್ರಿಟೀಷರ ವಿರುದ್ಧ ದನಿಯೆತ್ತಿ, ರಾಷ್ಟ್ರವನ್ನು ದಾಸ್ಯದ ಸಂಕೋಲೆಯಿಂದ ಮುಕ್ತಿಗೊಳಿಸಿದ್ದರೋ ಅವರ ಜಯಂತಿಯಂದು ಬ್ರಿಟೀಷರು ಬಿಟ್ಟು ಹೋಗಿದ್ದ ವಾಡಿಕೆಯೊಂದಕ್ಕೆ ನೂತನ ರಾಷ್ಟ್ರಪತಿ His Excellency, Honourable ಪ್ರಣಬ್ ಮುಖರ್ಜಿ ಗಂಟು ಮೂಟೆ ಕಟ್ಟಿ ಬ್ರಿಟನ್ನಿನ ಥೇಮ್ಸ್ ನದಿಗೆ ಎಸೆದಿದ್ದಾರೆ.

ಏನಪಾ ಅಂದರೆ ರಾಷ್ಟ್ರಪತಿಗಳ ಹೆಸರಿನ ಮೊದಲು ಹಲವು ದಶಕಗಳಿಂದ ಬಳಸುತ್ತಾ ಬಂದಿರುವ 'ಗೌರವಾನ್ವಿತ', 'ಘನವೆತ್ತ' ಮುಂತಾದ ಗೌರವ ಸೂಚಕ ಶಿಷ್ಟಾಚಾರದ ಪದಗಳನ್ನು ಬಳಸದಂತೆ ಪಶ್ಚಿಮ ಬಂಗಾಳದ ದಾ ಆದೇಶಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರ ಈ ನಿರ್ಧಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ದಾಸ್ಯ ಮನೋಭಾವದ, ಕ್ಲೀಷೆ ಎನಿಸಿರುವ, ಅರ್ಥರಹಿತ ಈ 'ಗೌರವಾರ್ಥ' ಪದಪುಂಜಗಳಿಗೆ ದೇಶದ ನಾನಾ ರಾಜ್ಯಪಾಲರೂ ಗುಡ್ ಬೈ ಹೇಳುತ್ತಾರಾ? ಬಂಗಾಳದ ದಾ ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ತಾವೂ ಅನುಸರಿಸುತ್ತಾರಾ? ಎಂಬುದು ಕುತೂಹಲಕಾರಿಯಾಗಿದೆ. ಹೌದೂ, ಇಂತಹ ನಿರರ್ಥಕ ಡೆಕೋರೇಶನ್ ಗಳ ಬಗ್ಗೆ 'ದಟ್ಸ್ ಕನ್ನಡ' ಓದುಗರಾಗಿ ನೀವೇನನ್ನುತ್ತೀರಿ, ದಯವಿಟ್ಟು ತಿಳಿಸಿ.

ಸಂದರ್ಭ ಸಹಿತ ವಿವರಿಸಿ: ಇಂದು ಇಲ್ಲಿಯ ನಾಗೇಂದ್ರ ಝಾ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿಹಾರದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ (LNMU) ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಣವ್ ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ರಾಷ್ಟ್ರಪತಿಯವರನ್ನು ಈ ವಿಶೇಷಣಗಳಿಂದ ಸಂಬೋಧಿಸದಂತೆ ರಾಷ್ಟ್ರಪತಿ ಭವನವು ವಿಶ್ವವಿದ್ಯಾಲಯ ಆಡಳಿತಕ್ಕೆ ಪತ್ರ ಬರೆದಿದೆ.

ರಾಷ್ಟ್ರಪತಿಯವರ ಈ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿರುವ ವಿಶ್ವವಿದ್ಯಾಲಯವು ಘಟಿಕೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಮರು ಮುದ್ರಿಸಿ, ಪ್ರಣಬ್ ದಾ ಹೆಸರಿನ ಮುಂದೆ ಇದ್ದ His Excellency, Honourableಗಳನ್ನು ಅಳಿಸಿ ಹಾಕಿದೆ.

ಗಮನಾರ್ಹವೆಂದರೆ ಬಿಹಾರದ ರಾಜ್ಯಪಾಲರಾದ ದೇವಾನಂದ ಕೊನ್ವಾರ್ ಅವರು ರಾಷ್ಟ್ರಪತಿಗಳೇ ಅವುಗಳನ್ನು ಬೇಡವೆಂದ ಮೇಲೆ ಅವುಗಳ ಸಾಂಗತ್ಯ ನನಗೇಕೆ ಎಂದು ರಾಜ್ಯಪಾಲ ದೇವಾನಂದರೂ ಆ ಪದಪುಂಜವನ್ನು ಅಳಿಸಿ ಹಾಕಲು ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+