ಬರಿಗೈ ದಾಸ ಜೇಟ್ಲಿ; ಶಕ್ಕು ಅಕ್ಕ ಯಡಿಯೂರಪ್ಪ ತಕ್ಕೆಗೆ

ಜೇಟ್ಲಿ ಅಂದು ಯಡಿಯೂರಪ್ಪಗೆ ಅಕ್ಷರಶಃ ಚಿಟಿಕೆ ಹೊಡೆದು 'ನಿಮ್ಮ ಸಮಯ ಮೀರಿದೆ, ಜಾಗ ಖಾಲಿ ಮಾಡಿ' ಎಂದಿದ್ದರು. ಆದರೆ 'ಇಂದು ತಮ್ಮನ್ನು ಭೇಟಿ ಮಾಡಲೆಂದೇ ಬೆಂಗಳೂರಿಗೆ ಹಾಕಿ ಆಡಲು ಬಂದಿದ್ದ ಜೇಟ್ಲಿಯ ಕೈಗೆ ಸಿಗದೆ ಯಡಿಯೂರಪ್ಪ ಸರಿಯಾದ ತಿರುಗೇಟು ನೀಡಿದ್ದಾರೆ' ಎಂದು ಯಡಿಯೂರಪ್ಪ ಅವರ ಅತ್ಯಾಪ್ತ ಮೂಲಗಳು ಗಾಂಧಿ ಜಯಂತಿ ದಿನ ಶಿವಮೊಗ್ಗದಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದುದು ಬೆಂಗಳೂರಿನಲ್ಲಿದ್ದ ಜೇಟ್ಲಿ ಕಿವಿಗೆ ಬಿದ್ದಿರಲೂ ಸಾಕು.
ಈ ಮಧ್ಯೆ, ಜೆಡಿಎಸ್ ಅಧಿನಾಯಕಿ ಅನಿತಾ ಕುಮಾರಸ್ವಾಮಿ ಅವರಿಂದ ವರ ಮಹಾಲಕ್ಷ್ಮಿ ಬಾಗಿನ ತೆಗೆದುಕೊಂಡಿದ್ದರೂ, ಯಡಿಯೂರಪ್ಪನವರ ಒಂದು ಕಾಲದ ಆತ್ಮೀಯ ನಾಗರಾಜ ಶೆಟ್ಟಿ ತಮ್ಮ ಕಣ್ಣೇದುರೇ ಜೆಡಿಎಸ್ ಪಕ್ಷದತ್ತ ಹಾರಿದರೂ ಎಲ್ಲ ಬೆಳವಣಿಗೆಗಳನ್ನು ನೊಡುತ್ತಾ ಸುಮ್ಮನಿದ್ದ ಪುತ್ತೂರಿನ ಶಕುಂತಳಾ ಅವರು ಯಡಿಯೂರಪ್ಪನವರ ಕೈಹಿಡಿಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ.
ಇದಕ್ಕೆ ಪುಷ್ಟಿ ನೀಡುವಂತೆ ಖುದ್ದು ಯಡಿಯೂರಪ್ಪನವರ ಶಕ್ಕು ಅಕ್ಕನತ್ತ ಕೈ ಚಾಚಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರೇ ಈ ವಿಷಯವನ್ನು ದೃಢಪಡಿಸಿದ್ದು, 'ಹೌದು ಹಿರಿಯರಾದ ಯಡಿಯೂರಪ್ಪನವರು ನನಗೆ ಫೋನ್ ಮಾಡಿದರು. ಒಂದಷ್ಟು ರಾಜಕೀಯ ಮಾತನಾಡಿದೆವು. 'ಎಲ್ಲೂ ಹೋಗಬೇಡಿ ನಮ್ಮ ಜತೆ ಬಂದ್ಬಿಡಿ' ಎಂದು ಯಡಿಯೂರಪ್ಪನವರು ಆಮಂತ್ರಣ ನೀಡಿದ್ದಾರೆ' ಎಂದಿದ್ದಾರೆ.
ಆದರೆ ಶಕ್ಕು ಅಕ್ಕ ಮಾತುಕತೆಯ ವಿವರ ಬಹಿರಂಗಪಡಿಸಿಲ್ಲ. ಹಾಗೆಯೇ ಎಂದಿನಂತೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ತಮ್ಮ ರಾಜಕೀಯ ನಡೆಯ ದಿಕ್ಕು ಯಾವುದು ಎಂಬುದನ್ನೂ ಬಹಿರಂಗಪಡಿಸಿಲ್ಲ.
ಸರಿ ಇಷ್ಟಕ್ಕೂ ಯಡಿಯೂರಪ್ಪನವರು ಇದ್ದಕ್ಕಿದ್ದಂತೆ ದೂರದ ಪುತ್ತೂರಿನ ಮೇಲೆ ಕಣ್ಣು ನೆಟ್ಟಿದ್ದು ಯಾಕಪ್ಪಾ ಅಂದರೆ ...Interesting ವಿಚಾರ ಹೊರಬೀಳುತ್ತದೆ. ಬಿಜೆಪಿಯಿಂದ ಎರಡೂ ಕಾಲುಗಳನ್ನು ಹೊರಗಿಟ್ಟು ಉಳಿದ ಭಾಗವನ್ನಷ್ಟೇ ಬಿಜೆಪಿಯಲ್ಲಿ ಬಿಟ್ಟಿರುವ ಯಡಿಯೂರಪ್ಪನವರಿಗೆ ತಾವು ಕಟ್ಟಿ ಬೆಳೆಸಿದ ಪಕ್ಷದಲ್ಲಿ ತಮ್ಮ ಇಂದಿನ ದುಃಸ್ಥಿತಿಗೆ ಕಾರಣಕರ್ತರು, ಹಿತಶತ್ರುಗಳು ಅನೇಕಾನೇಕ ಎಂಬುದು ಚೆನ್ನಾಗಿ ಮನವರಿಕೆಯಾಗಿದೆ.
ಹಾಗಾಗಿ, 'ಶತ್ರುವಿನ ಶತ್ರು ಮಿತ್ರ' ಎಂಬ ಸರಳ ಸಿದ್ಧಾಂತ ಅಪ್ಪಿಕೊಂಡಿರುವ ಯಡಿಯೂರಪ್ಪ, ತಮ್ನನ್ನು ಅನಾದಿ ಕಾಲದಿಂದಲೂ ದೂಷಿಸುತ್ತಾ ಬಂದಿರುವ ಬಿಜೆಪಿ ಹಿರಿಯ ವೇದಿಕೆಯ ರಾಮಭಟ್ಟರ ಮೇಲೆ ಈಗ ಕೆಂಗಣ್ಣು ಬಿದ್ದಿದೆ. ಹಾಗಾಗಿ ವೈಯಕ್ತಿಕವಾಗಿ ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಳ್ಳದೆ ತೊಳಲಾಡುತ್ತಿರುವ ರಾಮಭಟ್ಟರ ಶಿಷ್ಯೆ ಶಕುಂತಲಾರತ್ತ ಯಡಿಯೂರಪ್ಪನವರು ಸ್ನೇಹದ ಹಸ್ತ ಚಾಚಿದ್ದಾರೆ.












Click it and Unblock the Notifications