ಜನಾರ್ದನ ರೆಡ್ಡಿ ಸಹ ವಾಸ ಶಂಕಿತ ಉಗ್ರರ ಜತೆ

reddy-lodged-with-terror-suspects-parappana-jail-bngl
ಹೈದರಾಬಾದ್, ಅ.1: ಸದ್ಯಕ್ಕೆ ಜಾಮೀನು ಖರೀದಿ ಆರೋಪದಲ್ಲಿ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿರುವ ಬಿಜೆಪಿಯ ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ ಇಂದಲ್ಲ ನಾಳೆ ಮತ್ತೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾಗಲೇ ಬೇಕು. ಹಾಗೆ ವಾಪಸಾದಾಗ ಈ ಬಾರಿ ಅವರು ಶಂಕಿತ ಭಯೋತ್ಪಾದಕರ ಜತೆ ಜೈಲುವಾಸ ಅನುಭವಿಸಬೇಕಾಗಿದೆ.

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್ ಸಿಬಿಐನಿಂದ ರೆಡ್ಡಿ ಮೊದಲು ಬಂಧನಕ್ಕೊಳಗಾದರು. ಬಳಿಕ, ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಬೆಂಗಳೂರು ಸಿಬಿಐ ಅವರನ್ನು ಕರೆತಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡಿಹಾಕಿತು. ಅದಾದನಂತರ, ತಮ್ಮದೇ ಜಾಮೀನು ಖರೀದಿ ಪ್ರಕರಣದಲ್ಲಿ ಮತ್ತೆ ಹೈದರಾಬಾದ್ ಜೈಲುಪಾಲಾದರು.

ಈ ಮಧ್ಯೆ, ಬೆಂಗಳೂರು ಸಿಸಿಬಿ ಪೊಲೀಸರು ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ 13 ಶಂಕಿತ ಭಯೋತ್ಫಾದಕರನ್ನು ಬಂಧಿಸಿದರು. ಅವರನ್ನೆಲ್ಲ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪರಪ್ಪನ ಅಗ್ರಹಾರ ಜೈಲಿಗಟ್ಟಿತು.

ಅಷ್ಟೂ ಶಂಕಿತ ಉಗ್ರರನ್ನು ವಿಶೇಷ ಭದ್ರತಾ ವ್ಯವಸ್ಥೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ. ಜೈಲು ಪ್ರವೇಶ ದ್ವಾರಕ್ಕೆ ಸನಿಹದಲ್ಲಿ ಎರಡಂತಸ್ತಿನ ಕಟ್ಟಡದಲ್ಲಿ ಬಂಧಿಸಿಡಲಾಗಿದೆ. 10X15 ಅಡಿ ಅಳತೆಯ ಕೊಠಡಿಗಳಿವು. ಅಟ್ಯಾಚ್ಡ್ ಟಾಯ್ಲೆಟ್ ಹೊಂದಿರುವ ಈ ಕೊಠಡಿಗೆ ಟಿವಿ ಸಂಪರ್ಕವಿದೆ. ಶಂಕಿತ ಭಯೋತ್ಫಾದಕರು ಉಳಿದುಕೊಂಡಿರುವ ಈ ಕೊಠಡಿಗಳಲ್ಲಿ ಪೈಕಿ ಒಂದರಲ್ಲಿ ಜನಾರ್ದನ ರೆಡ್ಡಿ ಅವರನ್ನು ಇಡಲಾಗುವುದು ಎಂದು ಜೈಲು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+