'ಮೋದಿಗೆ ಇನ್ನು ರಾಷ್ಟ್ರ ಬಾವುಟ ಹಾರಿಸುವ ಅವಕಾಶವಿಲ್ಲ'

ಮೊನ್ನೆಯಷ್ಟೇ ಸಾಹಿತಿ ಅನಂತಮೂರ್ತಿ ಅವರಿಂದ ಕ್ರೂರಿ ಅನಿಸಿಕೊಂಡಿರುವ ನರೇಂದ್ರ ಮೋದಿ ಯಾಕೆ ಈ ಅವಕಾಶ ವಂಚಿತರಾಗುತ್ತಾರೆ ಅಂದರೆ 'ಡಿಸೆಂವರ್ ಚುನಾವಣೆಯಲ್ಲಿ ಮೋದಿ ಸೋಲು ಖಚಿತ. ಹಾಗಾಗಿ ಅವರಿಗೆ ಬಾವುಟ ಹಾರಿಸುವ ಛಾನ್ಸೇ ಇಲ್ಲ' ಎಂದು ಮೋದಿ ಕಟ್ಟಾ ವಿರೋಧಿ, ಗುಜರಾತ್ ಪರಿವರ್ತನ ಪಾರ್ಟಿಯ ಸ್ಥಾಪಕ ಅಧ್ಯಕ್ಷ ಕೇಶುಭಾಯಿ ಎದೆಮುಟ್ಟಿಕೊಂಡು ಹೇಳಿದ್ದಾರೆ.
ರಾಜಕೋಟ್ ವೀರಾಪುರದಲ್ಲಿ ಮಾತನಾಡಿದ ಹಿರಿಯ ನಾಯಕ ಕೇಶುಭಾಯಿ ಅವರು ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಇಡೀ ಗುಜರಾತ್ ಹೇಳುತ್ತಿದೆ ಮುಂದಿನ ಗಣರಾಜ್ಯೋತ್ಸವ ದಿನದಂದು ಮೋದಿ ರಾಷ್ಟ್ರ ಬಾವುಟ ಹಾರಿಸುವುದಿಲ್ಲವೆಂದು ಎಂದು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರನ್ನುದ್ದೇಶಿಸಿ ಹೇಳಿದರು.
ಇದನ್ನು ಅರಿತಿರುವ ಮೋದಿ 'ಸುಳ್ಳುಗಳ ಯಾತ್ರೆ' ನಡೆಸುತ್ತಿದ್ದಾರೆ. ಹೋದಲ್ಲೆಲ್ಲ ಅವರು ಹಸೀ ಸುಳ್ಳುಗಳನ್ನು ಹೇಳುತ್ತಿದ್ದಾರೆ. 10 ಸಾವಿರ ಕೋಟಿ ರೂ. ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದರು. ಆದರೆ ಯಾವುದೂ ಆಗಿಲ್ಲ' ಎಂದು ಕೇಶುಭಾಯಿ ಕಿಡಿಕಾರಿದರು.












Click it and Unblock the Notifications