ಖ್ಯಾತ ವ್ಯಂಗ್ಯಚಿತ್ರಕಾರ ಡಾ .ಸತೀಶ್ ಶೃಂಗೇರಿ ಇನ್ನಿಲ್ಲ
ಬೆಂಗಳೂರು, ಸೆ.27: ಖ್ಯಾತ ವ್ಯಂಗ್ಯಚಿತ್ರಕಾರ ಹಾಗೂ ಆಯುರ್ವೇದ ವೈದ್ಯ ಡಾ .ಸತೀಶ್ ಶೃಂಗೇರಿ ಅವರು ಗುರುವಾರ (ಸೆ.27) ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಸತೀಶ್ ಅವರು ಉಸಿರಾಟ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು.

'ಹೊಸ ತಲೆಮಾರಿನ ವ್ಯಂಗ್ಯಚಿತ್ರಕಾರರಲ್ಲಿ ತುಂಬಾ ಭರವಸೆ ಮೂಡಿಸಿದ ಸತೀಶ್(44) ಸಾವು ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ಆವರ ಆತ್ಮಕ್ಕೆ ಶಾಂತಿ ಸಿಗಲಿ. ಮುಖ್ಯವಾಗಿ ಅವರ ಪತ್ನಿ, ಮಗ ಮತ್ತು ತಂದೆ, ತಾಯಿ, ಸೋದರ ರಘುಪತಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ' ಎಂದು ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಅವರು ತಮ್ಮ ದುಃಖ ತೋಡಿಕೊಂಡಿದ್ದಾರೆ.
ಶೃಂಗೇರಿ ಬಳಿಯ ಕಿಗ್ಗದ ಅಭಿನವ ರಮಾನಂದ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದ ಸತೀಶ್ ಅವರು ನಂತರ ಶೃಂಗೇರಿ ಶ್ರೀ ಜಗ್ದ್ಗುರು ಚಂದ್ರಶೇಖರ ಭಾರತಿ ಸ್ಮಾರಕ ಕಾಲೇಜು ಹಾಗೂ ಗದಗ ಎಎಲ್ ಎನ್ ಸ್ಮಾರಕ ಆಯುರ್ವೇದ ಕಾಲೇಜಿನ ವ್ಯಾಸಂಗ ಮಾಡಿದ್ದರು.
ಅಯುರ್ವೇದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲ ಕಾಲ ಶಿಕ್ಷಕರಾಗಿ, ವಿಜ್ಞಾನಿಯಾಗಿ ಫಾರ್ಮಾಸ್ಯೂಟಿಕಲ್ ಕಂಪನಿಯಲ್ಲಿ ವೃತ್ತಿ ಜೀವನ ನಡೆಸಿದ್ದರು.
ದಿನಕ್ಕೊಂದು ಗುಳಿಗೆ: ಕನ್ನಡ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ದಿನಕ್ಕೊಂದು ಗುಳಿಗೆ ಹೆಸರಿನಲ್ಲಿ ಡಾ ಸತೀಶ್ ಅವರು ವ್ಯಂಗ್ಯಚಿತ್ರಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಸಾರ್ವಜನಿಕರ ಮುಂದಿಡುತ್ತಿದ್ದರು.
ಪತ್ನಿ, ಪುತ್ರ, ಸೋದರ ರಘುಪತಿ ಹಾಗೂ ಸೋದರಿಯನ್ನು ಮೃತರು ಅಗಲಿದ್ದಾರೆ. ಮೃತದೇಹವನ್ನು ಕತ್ತರಿಗುಪ್ಪೆ ವಾಟರ್ ಬ್ಯಾಂಕ್ ಬಳಿ ಮನೆ ಇರಿಸಲಾಗುತ್ತೆ. ನಂತರ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ಹೇಳಿದೆ.
ಸತೀಶ್ ಅವರಿಗೆ ನಮನ ಸಲ್ಲಿಸಲು : https://www.facebook.com/drsatish.sringeri; http://sringericartoons.blogspot.com; http://caricaturindia.blogspot.com. ನೋಡಿ












Click it and Unblock the Notifications