ಅನೈತಿಕ ಸಂಬಂಧ ಶಂಕೆ, ಪತ್ನಿ ಪ್ರೀತಿ ಕೊಂದ ಪತಿ

ಕೇರಳ ಮೂಲದ 22 ವರ್ಷದ ಪೀತಿಯನ್ನು ಒರಿಸ್ಸಾ ಮೂಲದ 25 ವರ್ಷದ ಬಿಸ್ವಜಿತ್ ಭಗತ್ ದಾಸ್ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿ ಬಂಡೆಪಾಳ್ಯದ ನಿವಾಸಿಗಳಾಗಿದ್ದರು. ಬಿಟಿಎಂ ಲೇಔಟ್ ನ ಸೂಪರ್ ಮಾರ್ಕೆಟ್ ವೊಂದರಲ್ಲಿ ಮಾರಾಟಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ್ದರು.
ಸುಮೂರು ಒಂದೂವರೆ ವರ್ಷಗಳ ಕಾಲ ಪ್ರೀತಿ ಪ್ರೇಮದ ಸಂಬಂಧದ ನಂತರ ಇಬ್ಬರು ಮದುವೆಯಾಗಿದ್ದರು. ಮದುವೆಯಾಗಿ 6-8 ತಿಂಗಳ ತನಕ ಎಲ್ಲವೂ ಸುಸೂತ್ರವಾಗಿ ಸುಖಿ ಸಂಸಾರದ ಜೋಡಿಗಳಾಗಿದ್ದರು.
ಆದರೆ ಇತ್ತೀಚೆಗೆ ಭಗತ್ ದಾಸ್ ಗೆ ತನ್ನ ಪತ್ನಿ ಪ್ರೀತಿ ಮದುವೆಗೆ ಮುಂಚೆ ವಿನಯ್ ಎಂಬ ಯುವಕನೊಡನೆ ಪ್ರೇಮ ಸಂಬಂಧ ಇದ್ದ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಪತ್ನಿಯನ್ನು ಭಗತ್ ದಾಸ್ ಪ್ರಶ್ನಿಸಿದ್ದಾನೆ. ಪ್ರೀತಿ ಈಗ ಅದು ಮುಗಿದು ಹೋದ ಅಧ್ಯಾಯ ಎಂದು ಪರಿಪರಿಯಾಗಿ ಹೇಳಿದ್ದಾಳೆ.
ಆದರೆ, ಕೋಪದ ಕೈಗೆ ಬುದ್ಧಿಯನ್ನು ಕೊಟ್ಟಿದ್ದ ಭಗತ್ ದಾಸ್ ತನ್ನ ಪತ್ನಿಯ ಕುತ್ತಿಗೆಗೆ ಟವ್ಲ್ ನಿಂದ ಬಿಗಿದು ಉಸಿರು ಗಟ್ಟಿಸಿ ಸಾಯಿಸಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ನಡೆದ ಘಟನೆಯನ್ನು ವಿವರಿಸಿದ ಭಗತ್, ಇಬ್ಬರ ನಡುವೆ ಜೋರು ಜಗಳ ನಡೆದಿದ್ದು ನಿಜ ಆದರೆ, ನನಗೆ ಸಾಯಿಸುವ ಉದ್ದೇಶ ಇರಲಿಲ್ಲ.
ಪ್ರೀತಿ ಕುತ್ತಿಗೆಗೆ ಟವೆಲ್ ಸುತ್ತಿಕೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದಳು ಈ ಸಂದರ್ಭದಲ್ಲಿ ಟವೆಲ್ ತುದಿಯನ್ನು ಹಿಡಿದು ಎಳೆದೆ ಇದರಿಂದ ಉಸಿರುಗಟ್ಟಿ ಆಕೆ ಸಾವನ್ನಪ್ಪಿದಳು ಎಂದು ಹೇಳಿಕೆ ನೀಡಿದ್ದಾನೆ.
ಘಟನಾ ಸ್ಥಳಕ್ಕೆ ಮಡಿವಾಳ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗಣಪತಿ ಹಾಗೂ ಡಿಸಿಪಿ ಹರ್ಷ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.












Click it and Unblock the Notifications