ಸರ್ಕಾರದ ಆಫರ್ ತಿರಸ್ಕಾರ; ನಕ್ಸಲರು ಶರಣಾಗಲ್ಲ

Naxals refuse BJP Govt Offer
ಮಂಗಳೂರು,ಸೆ.23: ದಿನಕರ್ ಯಾನೆ ಎಲ್ಲಪ್ಪ ಎನ್‌ಕೌಂಟರಿಗೆ ಪ್ರತಿಕಾರ ತೆಗೆದುಕೊಳ್ಳುತ್ತೇವೆ. ಸರ್ಕಾರದ ಪ್ಯಾಕೇಜ್ ಬೇಕಿಲ್ಲ ಎಂದು ನಕ್ಸಲ್ ಸಂಘಟನೆಯಿಂದ ಎಚ್ಚರಿಕೆ ಪತ್ರ ಕೆಲವು ಮಾಧ್ಯಮ ಕಚೇರಿಗಳಿಗೆ ಬಂದಿದೆ ಎಂದು ದ.ಕ. ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಗೃಹ ಸಚಿವ ಆರ್ ಅಶೋಕ್ ಮಾತನಾಡಿ, ನಕ್ಸಲರು ಶರಣಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಸಿದ್ದಾರೆ.

ನಕ್ಸಲ್ ಸಂಘಟನೆಯ ಮೂಲಕ ಗುರುತಿಸಲ್ಲಟ್ಟಿರುವ ಕರ್ನಾಟಕ ರಾಜ್ಯ ಮಾವೋವಾದಿ ಕಮ್ಯುನಿಸ್ಟ್ ಪಕ್ಷವೆಂದು ಹೇಳಿಕೊಂಡಿರುವ ಸಂಘಟನೆ ಈ ಕರಪತ್ರ ಹೊರಡಿಸಿದೆ. ಕರಪತ್ರದಲ್ಲಿ ಗಂಗಾಧರ ಎಂಬ ಹೆಸರಿನಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಅಭಿಷೇಕ್ ಗೋಯಲ್ ಹೇಳಿದರು.

'ಇತ್ತೀಚೆಗೆ ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ ಎಲ್ಲಪ್ಪರನ್ನು ಕೊಲೆ ಮಾಡಿದ್ದಾರೆ. ಅದಕ್ಕಾಗಿ ನಾವು ಪ್ರತಿಕಾರ ತೆಗೆದುಕೊಳ್ಳುತ್ತೇವೆ' ಎಂದು ಕರಪತ್ರದಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆದೇಶದ ಮೇರೆಗೆ ನಕ್ಸಲರ ವಿರುದ್ಧ ಕೈಗೊಂಡಿರುವ ಕೂಂಬಿಂಗ್ ಕಾರ್ಯ ಕೊನೆಗೊಳಿಸಲಾಗಿದೆ. ಶರಣಾಗುವ ನಕ್ಸಲರಿಗೆ ಅವಕಾಶ ನೀಡಲಾಗುವುದು ಎಂದು ಅಭಿಷೇಕ್ ಗೋಯಲ್ ತಿಳಿಸಿದರು.

ಅಶೋಕ್ ಎಚ್ಚರಿಕೆ: ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರ್. ಅಶೋಕ್ ಎಚ್ಚರಿಸಿದ್ದಾರೆ.

ನಕ್ಸಲರಿಗೆ ಶರಣಾಗಲು ಸರ್ಕಾರ ಅವಕಾಶ ಕಲ್ಪಿಸಿ, ಕಾಲಾವಾಕಾಶ ನೀಡಿದೆ. ಈಗಾಗಲೇ 15 ರಿಂದ 20 ಮಂದಿ ಶರಣಾಗಲು ಸಮ್ಮತಿಸಿದ್ದಾರೆ.ಶರಣಾಗಲು ಒಪ್ಪದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಶೋಕ್ ಹೇಳಿದರು.

ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವ ನಕ್ಸಲೀಯರಿಗೆ ಅಗತ್ಯ ನೆರವು ನೀಡಲಾಗುವುದು. ಆದರೆ, ಶಾಂತಿಭಂಗ ಉಂಟು ಮಾಡುವ ಕೆಲಸಕ್ಕೆ ಮುಂದಾದರೆ ಕಾರ್ಯಾಚರಣೆ ಅನಿವಾರ್ಯ. ನಕ್ಸಲ್ ಪ್ರಭಾವಿತ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಈಗಾಗಲೇ 45ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ. ಆ ಭಾಗದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಅಶೋಕ್ ಹೇಳಿದರು.

ನಕ್ಸಲೀಯ ಚಟುವಟಿಕೆಗೆ ಕಡಿವಾಣ ಹಾಕಲು ಸ್ಥಳೀಯರು ಕೂಡಾ ಸಹಕಾರ ನೀಡಬೇಕು. ರಕ್ತಪಾತದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ನಕ್ಸಲ್ ಚಟುವಟಿಕೆ ತೀವ್ರವಾಗಿಲ್ಲ. ಗೃಹ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಅಲೋಕ್ ಕುಮಾರ್ ನೇತೃತ್ವದ ನಕ್ಸಲ ನಿಗ್ರಹ ದಳ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ ಎಂದು ಅಶೋಕ್ ಶ್ಲಾಘಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+