ದಿ ಹಿಂದೂ ಪತ್ರಿಕೆಯ ಪಿತಾಮಹ ಜಿ ಕಸ್ತೂರಿ ವಿಧಿವಶ
![G Kasturi (1924-2012) [The Hindu photo] G Kasturi (1924-2012) [The Hindu photo]](https://imagesvs.oneindia.com/kn/img/2012/09/21-gopalan-kasturi.jpg)
ಪತ್ರಿಕೆಯನ್ನು ಬೆಳೆಸುವಲ್ಲಿ ಮತ್ತು ಆಧುನೀಕರಣಗೊಳಿಸುವಲ್ಲಿ ಅಪಾರವಾಗಿ ಶ್ರಮಿಸಿದ ಕಸ್ತೂರಿ ಅವರು ಹೆಂಡತಿ ಕಮಲಾ ಕಸ್ತೂರಿ, ಮಕ್ಕಳಾದ ಕೆ. ಬಾಲಾಜಿ, ಕೆ. ವೇಣುಗೋಪಾಲ್, ಮಗಳು ಲಕ್ಷ್ಮೀ ಶ್ರೀನಾಥ್, ಐವರು ಮೊಮ್ಮಕ್ಕಳು ಮತ್ತುತ ಇಬ್ಬರು ಮರಿಮೊಮ್ಮಕ್ಕಳನ್ನು ಜಿ ಕಸ್ತೂರಿ ಅವರು ಅಗಲಿದ್ದಾರೆ.
134 ವರ್ಷಗಳ ಇತಿಹಾಸ ಹೊಂದಿರುವ ದಿ ಹಿಂದೂ ಪತ್ರಿಕೆಯನ್ನು 1965ರಿಂದ 1991ರವರೆಗೆ 25 ವರ್ಷಗಳ ಕಾಲ ಅವರು ಸಂಪಾದಕರಾಗಿ ಪತ್ರಿಕೆಯಲ್ಲಿ ಜೀವ ತುಂಬಿದ್ದರು. ಪತ್ರಿಕೆ ಸೆ.20ರಂದು ತನ್ನ 134ನೇ ಹುಟ್ಟುಹಬ್ಬ ಆಚರಿಸಿದ ಮರುದಿನವೇ ಪತ್ರಿಕೆಯನ್ನು ಆಗಾಧ ಪ್ರಮಾಣದಲ್ಲಿ ಬೆಳೆಸಿದ ಕಸ್ತೂರಿ ಅವರು ಅಸುನೀಗಿದ್ದಾರೆ. ಕಸ್ತೂರಿ ಅವರು ಕಸ್ತೂರಿ ಅಂಡ್ ಸನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ದಿ ಹಿಂದೂ ಗ್ರೂಪ್ ಆಫ್ ಪಬ್ಲಿಕೇಷನ್ಸ್‌ನ ಮಾಲೀಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಂಪಾದಕರಾಗಿ ನಿವೃತ್ತಿ ಹೊಂದಿದ ನಂತರವೂ ಕಸ್ತೂರಿ ಅವರು ತಮ್ಮ ಕೊನೆಯ ಗಳಿಗೆಯವರೆಗೆ ಅತ್ಯಂತ ಕ್ರಿಯಾಶೀಲರಾಗಿದ್ದರು. 1924ರ ಡಿಸೆಂಬರ್ 17ರಂದು ಚೆನ್ನೈನಲ್ಲಿ ಜನಿಸಿದ ಕಸ್ತೂರಿ ಅವರು, ಚೆನ್ನೈನಲ್ಲಿಯೇ ಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎ ಪಡೆದಬಳಿಕ 1944ರಲ್ಲಿ ಪತ್ರಿಕೆಯನ್ನು ಸೇರಿದ್ದರು. ಅವರ ತಂದೆ ಕಸ್ತೂರಿ ಶ್ರೀನಿವಾಸನ್ ಅವರು ಕೂಡ ದಿ ಹಿಂದೂ ಪತ್ರಿಯಲ್ಲಿ 1934ರಿಂದ 1959ರವರೆಗೆ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. (Photo courtesy : V. Ganesan)
ಜಗದೀಶ್ ಶೆಟ್ಟರ್ ಸಂತಾಪ : ಚೆನ್ನೈ ಮೂಲದ ಆಂಗ್ಲ ದಿನಪತ್ರಿಕೆ ದಿ ಹಿಂದೂನ ಮಾಜಿ ಸಂಪಾದಕ ಜಿ. ಕಸ್ತೂರಿ ಅವರ ಅಗಲಿಕೆಗೆ ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾವುದೇ ಇಸಂಗಳಿಗೆ ಕಸ್ತೂರಿಯವರು ಬಲಿಯಾಗದೆ, ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ಅತ್ಯಂತ ನಿಷ್ಪಕ್ಷಪಾತದಿಂದ ಅವರು ಪತ್ರಿಕೆಯನ್ನು ನಡೆಸಿ ಇಂದಿನ ಪತ್ರಕರ್ತರಿಗೆ ಮಾದರಿಯಾಗಿದ್ದರು. ಪತ್ರಿಕಾಧರ್ಮ ಮೇಲೆತ್ತಿ ಹಿಡಿದಿರುವವರಲ್ಲಿ ಕಸ್ತೂರಿ ಅವರು ಅಗ್ರಗಣ್ಯರು ಎಂದು ಶೆಟ್ಟರ್ ಅವರು ಕಸ್ತೂರಿಯವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications