ವೈಷ್ಣೋದೇವಿ ಯಾತ್ರೆಗೆ ಹೊರಟಿದ್ದವರ ಬರ್ಬರ ಹತ್ಯೆ
ನವದೆಹಲಿ,
ಸೆ.21: ಅಪ್ಪ-ಅಮ್ಮ ಮತ್ತು ಒಬ್ಬೇಒಬ್ಬ ಮಗಳಿದ್ದ ಆ ಉದ್ಯಮಿ ಕುಟುಂಬದವರು ಇಂದು ಮುಂಜಾನೆ ವೈಷ್ಣೋದೇವಿ ಯಾತ್ರೆಗೆ ಹೊರಡುವ ತಯಾರಿಯಲ್ಲಿದ್ದರು. ಆದರೆ ಆಗುಂತಕರು ಆ ಕುಟುಂಬದ ಮೇಲೆ ಎರಗಿ ಮೂವರನ್ನೂ ಬರ್ಬರವಾಗಿ ಹತ್ಯೆ ಮಾಡಿಹೋಗಿದ್ದಾರೆ. id="toptextpromo">ಕುಟುಂಬದೊಂದಿಗೆ
ವೈಷ್ಣೋದೇವಿ ಯಾತ್ರೆಗೆ ತೆರಳ ಬೇಕಿದ್ದ ಪೊಜಾರಿಯು ಆ ಮನೆಗೆ ಬಂದಾಗ ಮೂವರೂ ಹತ್ಯೆಗೀಡಾಗಿರುವುದು ಬೆಳಕಿಗೆ ಬಂದಿದೆ. ಉತ್ತರ ದೆಹಲಿಯ ರೋಹಿಣಿ ಅಪಾರ್ಟ್ ಮೆಂಟಿನಲ್ಲಿ ಇಂದು ಶುಕ್ರವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಯೋಗೇಂದ್ರ ಸಿಂಗ್ ಎಂಬುವವರ ಕುಟುಂಬವೇ ಹೀಗೆ ಹತ್ಯೆಗೀಡಾದ ದುರ್ದೈವಿ ಕುಟುಂಬ. id='are-slot-1' class='oiad oi-axt oiadv'> id='top-searched-articles'>ರಕ್ತದ
ಮಡುವಿನಲ್ಲಿ ಬಿದ್ದಿದ್ದ ಯೋಗೇಂದ್ರ ಸಿಂಗ್ ಅವರ ದೇಹ ಮೊದಲ ಮಹಡಿಯಲ್ಲಿ ಪತ್ತೆಯಾಗಿದ್ದರೆ ಅವರ ಪತ್ನಿ ಮತ್ತು ಪುತ್ರಿಯ ದೇಹ ನೆಲಮಹಡಿಯಲ್ಲಿತ್ತು. ಮೂವರ ಕತ್ತುಗಳನ್ನು ಸೀಳಿ, ಹತ್ಯೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ವೈಯಕ್ತಿಕ ದ್ವೇಷದಿಂದ ಈ ಕೊಲೆಗಳಾಗಿರಬಹುದು ಎಂದು ಶಂಕಿಸಲಾಗಿದೆ.











Click it and Unblock the Notifications