ಸಕಾಲ ಯೋಜನೆಯಡಿಗೆ ಇನ್ನೂ 14 ಇಲಾಖಾ ಸೇವೆ

Sakala services 14 more added
ಬೆಂಗಳೂರು, ಸೆ. 21 : ಸಕಾಲ ಯೋಜನೆಯಡಿ ಈಗಿರುವ 151 ಸೇವೆಗಳ ಜೊತೆಗೆ ಇನ್ನೂ 14 ಇಲಾಖೆಗಳನ್ನು ಸೇರ್ಪಡಿಸಿ ಒಟ್ಟು 265 ಸೇವೆಗಳನ್ನು ಸಕಾಲ ಯೋಜನೆಯಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ ಅವರು ವಿವರ ನೀಡಿದರು.

ನಗರದ ಓಕಳಿಪುರಂ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ 8 ಪಥದ ಕಾರಿಡಾಡ್ ಸಿಗ್ನಲ್ ಫ್ರೀ ಅಂಡರ್‌ಪಾಸ್ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸುಮಾರು 102 ಕೋಟಿ ವೆಚ್ಚದಲ್ಲಿ, 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

ತಾವರೆಕೆರೆ ಹೋಬಳಿ (ಸುಬ್ಬರಾಯನವಾಡ) ಗ್ರಾಮದ ಹತ್ತಿರ ಸಂಪೂರ್ಣ ಘನ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ 10 ಎಕರೆ ಜಾಗವನ್ನು 20 ವರ್ಷ ಅವಧಿಗೆ ಅಂಜಿರ್ ಬಯೋಟೆಕ್ ಇಂಜಿನಿಯರ್ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದ ಪಾರ್ವಡ, ತೀರ್ಥಹಳ್ಳಿ, ಹೊಸನಗರ, ಶೃಂಗೇರಿ, ಮೂಡಿಗೆರೆ, ಕೊಪ್ಪ, ಕಾರ್ಕಳ, ಕುಂದಾಪುರ, ಬೆಳ್ತಂಗಡಿ ತಾಲ್ಲೂಕುಗಳನ್ನು ನಕ್ಸಲ್ ಪೀಡಿತ ತಾಲ್ಲೂಕುಗಳೆಂದು ಗುರುತಿಸಿದ್ದು ಪ್ರತಿ ತಾಲ್ಲೂಕುಗಳಿಗೆ 5 ಕೋಟಿ ರು. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಇಂದಿನ ಸಚಿವ ಸಂಪುಟ ಅನುಮೋದನೆ ನೀಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+