ಬಾಣಂತಿ ಜೊತೆ ಸರಸ ಬಯಸಿದ ಪತಿ ಪರಲೋಕಕ್ಕೆ

Wife Kills Husband for forcing lovemaking, Suggestive image
ದೊಡ್ಡಬಳ್ಳಾಪುರ, ಸೆ.18: ಮುದ್ದಾದ ಮಗುವಿನೊಡನೆ ಆಡವಾಡುವುದನ್ನು ಬಿಟ್ಟು ಬಾಣಂತಿ ಪತ್ನಿಯನ್ನು ಪದೇ ಪದೇ ಕಾಮದಾಟಕ್ಕೆ ಕರೆದು ಪೀಡಿಸುತ್ತಿದ್ದ ಪತಿಯೊಬ್ಬ ದುರಂತ ಸಾವನ್ನಪ್ಪಿದ್ದಾನೆ.

ಕಳೆದ ತಿಂಗಳಷ್ಟೇ ನವಜಾತ ಶಿಶುವನ್ನು ಕಂಡು ಹರ್ಷಗೊಂಡಿದ್ದ ಅಶ್ವಥ್ ಈಗ ಹೆಣವಾಗಿ ಮಲಗಿದ್ದಾನೆ. ದೈಹಿಕ ಸಂಪರ್ಕ ಬಯಸಿ ಬಂದ ಪತಿಯನ್ನು ಆತನ ಪತ್ನಿಯ ಮರ್ಮಾಂಗ ಒದ್ದು ಸಾವಿಗೆ ನೂಕಿದ ಆರೋಪವನ್ನು ಪತ್ನಿ ವಿದ್ಯಾಶ್ರೀ ಹೊತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಲಿ ನಿವಾಸಿ 30 ವರ್ಷದ ಅಶ್ವಥ್ ಮೃತಪಟ್ಟ ದುರ್ದೈವಿ. ಹಾಡೋಹಳ್ಳಿಯ ವಿದ್ಯಾಶ್ರೀಯನ್ನು ವಿವಾಹವಾಗಿದ್ದ. ಈ ದಂಪತಿಗೆ ಕಳೆದ ತಿಂಗಳು ಮಗುವಾಗಿತ್ತು.

ಹೆರಿಗೆಗೆ ತವರಿಗೆ ಬಂದಿದ್ದ ವಿದ್ಯಾಶ್ರೀ ಹಾಗೂ ಮಗುವನ್ನು ನೋಡಲು ಅಶ್ವಥ್ ಬಂದಿದ್ದಾನೆ. ಮಗುವನ್ನು ಕರೆದುಕೊಂಡು ಮನೆಗೆ ಬರುವಂತೆ ಕರೆ ನೀಡಿದ್ದಾನೆ. ಆದರೆ, ಬಾಣಂತನ ಮುಗಿಸಿಕೊಂಡು ಬರುತ್ತೇನೆ. ಸದ್ಯಕ್ಕೆ ಸಾಧ್ಯವಿಲ್ಲ ಎಂದು ವಿದ್ಯಾಶ್ರೀ ಖಡಾಖಂಡಿತವಾಗಿ ಹೇಳಿದ್ದಾಳೆ.

ಕಳೆದ ರಾತ್ರಿ ಕಾಮಬಾಧೆ ತಾಳಲಾರದೆ ಪತ್ನಿ ವಿದ್ಯಾಶ್ರೀ ಬಳಿಗೆ ಬಂದ ಅಶ್ವಥ್ ಸರಸಕ್ಕೆ ಆಹ್ವಾನ ನೀಡಿದ್ದಾನೆ. ಹೇರಿಗೆ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ವಿದ್ಯಾಶ್ರೀ, ಅಶ್ವಥ್ ಆಹ್ವಾನವನ್ನು ನಿರಾಕರಿಸಿ, ತಿಳಿ ಹೇಳಿದ್ದಾಳೆ,

ಆದರೆ, ಆಕೆ ಮಾತು ಕೇಳದ ಅಶ್ವಥ್ ತನ್ನ ಪತ್ನಿಯನ್ನು ಬಲವಂತವಾಗಿ ಅನುಭವಿಸಲು ಮುಂದಾಗಿದ್ದಾನೆ. ವಿದ್ಯಾಶ್ರೀ ವಿಧಿ ಇಲ್ಲದೆ ಜಗಳವಾಡಿದ್ದಾಳೆ. ಇಬ್ಬರು ಕೈ ಕೈ ಮಿಲಾಸಿದ್ದಾರೆ. ಈ ನಡುವೆ ಗಂಡನ ಮರ್ಮಾಂಗಕ್ಕೆ ಜಾಡಿಸಿ ಒಂದೆರಡು ಬಾರಿ ಒದ್ದಿದ್ದಾಳೆ.

ನೋವಿನಿಂದ ಚೀರಿಕೊಂಡ ಅಶ್ವಥ್ ಕ್ಷಣಾರ್ಧದಲ್ಲೇ ಸಾವನ್ನಪ್ಪಿದ್ದಾನೆ. ಮರುದಿನ ವಿಷಯ ತಿಳಿದ ಅಶ್ವಥ್ ತಂದೆ ತಾಯಿ ವಡ್ಡರಹಳ್ಳಿಗೆ ಧಾವಿಸಿ ಬಂದಿದ್ದಾರೆ. ಮಗನ ಸಾವಿನಿಂದ ಆಕ್ರೋಶಗೊಂಡು ತಕ್ಷಣವೇ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾಶ್ರೀಯನ್ನು ಬಂಧಿಸಿದ ಪೊಲೀಸರಿಗೆ ವಿದ್ಯಾಶ್ರೀ ತನ್ನ ಕತೆಯನ್ನು ಮುಚ್ಚುಮರೆಯಿಲ್ಲದೆ ವಿವರಿಸಿದ್ದಾಳೆ. ಹಸುಗೂಸಿನ ಆರೈಕೆ ದೃಷ್ಟಿಯಿಂದ ತಾಯಿಗೆ ಮಗುವನ್ನು ನೀಡಲಾಗಿದೆ. ವಿದ್ಯಾಶ್ರೀ ಪೋಷಕರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+