ಈಶ್ವರಪ್ಪ ಕೂಡಲೇ ರಾಜೀನಾಮೆ ನೀಡಲಿ : ಯಡಿಯೂರಪ್ಪ

ಹಾವೇರಿ ಜಿಲ್ಲಾ ಪ್ರವಾಸದಲ್ಲಿರುವ ಯಡಿಯೂರಪ್ಪ ಅವರು ಕಿಕ್ಕಿರಿದ ಸಭೆಯಲ್ಲಿ ಡಿಸಿಎಂ ಈಶ್ವರಪ್ಪ ವಿರುದ್ಧ ಕಿಡಿಕಾರಿದರು. ಕಂದಾಯ ಖಾತೆ, ಉಪಮುಖ್ಯಮಂತ್ರಿ ಹುದ್ದೆ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಲು ಈಶ್ವರಪ್ಪ ಅವರು ಅಸಮರ್ಥರಾಗಿದ್ದಾರೆ.ಹೀಗಾಗಿ ಸಮರ್ಥ ಕೈಗೆ ರಾಜ್ಯದ ಚುಕ್ಕಾಣಿ ನೀಡಬೇಕಿದೆ, ಕಾರ್ಯಕರ್ತರ ಆಶಯ ಅರಿತು, ಸಂಘಟಿಸಿ ಮುನ್ನಡೆಯಬೇಕಿದೆ ಎಂದರು.
ಬಿಜೆಪಿ ತೊರೆಯುವುದಿಲ್ಲ: ನಾನು ಪಕ್ಷ ತೊರೆಯುತ್ತಿಲ್ಲ. ಕೆಲವರು ನಾನು ಪಕ್ಷ ತೊರೆಯುವುದನ್ನೇ ಕಾಯುತ್ತಿದ್ದಾರೆ. ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಬೇಕಿದೆ. ಈ ಸಂದರ್ಭದಲ್ಲಿ ನಾನು ಈಶ್ವರಪ್ಪ ನಾಯಕತ್ವದಲ್ಲಿ ಚುನಾವಣೆ ಎದುರಿಸಲೂ ಸಿದ್ಧ. ಒಟ್ಟಾರೆ ಪಕ್ಷದ ಏಳಿಗೆ ಮುಖ್ಯ.
ರೈತರ ಪರ ಪಕ್ಷ ಅಧಿಕಾರಕ್ಕೆ ಬರಲಿ ಎಂಬುದು ನನ್ನ ಆಸೆ. ಅದರೆ, ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟುವ ಚಿಂತನೆ ನಡೆಸಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಹೊನ್ನಾಳಿಯಲ್ಲಿ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರ ನಿವಾಸದಲ್ಲಿ ಮಾತನಾಡಿದ್ದ ಯಡಿಯೂರಪ್ಪ ತಮ್ಮ ಇಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಅತ್ಮಗೌರವಕ್ಕೆ ಚ್ಯುತಿ ಬಂದರೆ ಸಹಿಸಲು ಸಾಧ್ಯವಿಲ್ಲ. ಅಧಿಕಾರ, ಸ್ಥಾನಮಾನ ಯಾವತ್ತೂ ಶಾಶ್ವತವಲ್ಲ. ಜನರೇ ನಮ್ಮ ಕೈ ಹಿಡಿದು ಬೆಳೆಸಿದ್ದು, ಅವರಿಗೆ ಅನ್ಯಾಯವಾದಾಗ ಆಕ್ರೋಶದಲ್ಲಿ ಮಾತನಾಡುವುದು ತಪ್ಪಲ್ಲ.
ಪ್ರತಿಪಕ್ಷಕ್ಕಿಂತ ನಮ್ಮ ಪಕ್ಷದಲ್ಲೇ ನನ್ನ ವಿರುದ್ಧ ಷಡ್ಯಂತ್ರ ಜೋರಾಗಿ ನಡೆಯುತ್ತಿದೆ.ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಯಾವ ಸ್ಫೋಟಗೊಳ್ಳುತ್ತೆನೋ ಗೊತ್ತಿಲ್ಲ. 5 ವರ್ಷ ಮಾದರಿ ಸರ್ಕಾರ ನೀಡಬೇಕೆಂಬ ನನ್ನ ಕನಸು ಹಾಳುಗೆಡವಿಬಿಟ್ಟರು. ಈಗಲೂ ಜನ ಬೆಂಬಲ ಸಿಕ್ಕರೆ ನಾನು ಮತ್ತೊಮ್ಮೆ ಮಾದರಿ ರಾಜ್ಯವನ್ನು ಪ್ರಪಂಚಕ್ಕೆ ಪರಿಚಯಿಸುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.
'ಬಿಜೆಪಿ, ಜೆಡಿಎಸ್, ಕಾಂಗ್ರೆಸ್ಸೇತರ ಸರ್ಕಾರಕ್ಕಾಗಿ ಜನತೆ ಹಾತೊರೆಯುತ್ತಿದ್ದಾರೆ. ರೈತರ ಸರ್ಕಾರ ಇನ್ಮುಂದೆ ಅಧಿಕಾರ ನಡೆಸಲಿದೆ. ರೈತರ ಅಭಿವೃದ್ಧಿಗೆ ಮುಖ್ಯವೇ ಹೊರತು ಪಕ್ಷದ ಅಭಿವೃದ್ಧಿಯಲ್ಲ, ರೈತ ಪರ ಕೆಲಸ ಮಾಡುವ ಸರ್ಕಾರ ಮಾತ್ರ ಉತ್ತಮ ಸರ್ಕಾರ' ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ಯಡಿಯೂರಪ್ಪರಿಗೆ ಈಗ ರೈತರ ಮೇಲೆ ಅತಿಯಾದ ಕಾಳಜಿ ಬಂದಿದೆ. ಇದೆಲ್ಲಾ ಜನರನ್ನು ಮರಳುಗೊಳಿಸುವ ತಂತ್ರ ಎಂದ ಅವರು, ಯಡಿಯೂರಪ್ಪ ಇದೀಗ ರೈತರ ಹಿತ ಮುಖ್ಯ ಎಂದು ಹೇಳುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪರಿಗೆ ಇದೀಗ ಜ್ಞಾನೋದಯವಾಗಿದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications