ಪ್ರೇಮ ವೈಫಲ್ಯ: ಮಂಗಳೂರು ಯುವತಿ ಆತ್ಮಹತ್ಯೆ

ಸುಷ್ಮಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಕೊಡಿಕಾಲ್ ನಿವಾಸಿ. ನಿನ್ನೆ ಭಾನುವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಏನಾಯಿತೆಂದರೆ ಗುರವಾರ ಬೆಳಗ್ಗೆ ಸುಷ್ಮಾ ಮನೆಯ ಹತ್ತಿರವಿರುವ ಸತ್ಯ ಸಾಯಿ ಮಂದಿರಕ್ಕೆ ಹೋಗಿಬರುತ್ತೇನೆ ಎಂದು ಹೊರಟಿದ್ದಳು. ಆ ನಂತರ ಆಕೆ ಕಾಣೆಯಾಗಿದ್ದಳು. ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಸುಷ್ಮಾಳ ಪತ್ತೆಗಾಗಿ ಪೊಲೀಸರು ಮತ್ತು ಮನೆಯವರು ಒಂದೇ ಸಮನೆ ಹುಡುಕಾಟ ನಡೆಸಿದ್ದರು. ಈ ಮಧ್ಯೆ ಪಣಂಬೂರು ಬೀಚ್ ಬಳಿ ಶನಿವಾರ ಆಕೆಯ ಶವ ಪತ್ತೆಯಾಗಿದೆ.
ಕಮಲಾಕ್ಷ ಶೆಟ್ಟಿ ಮತ್ತಿ ಗೀತಾ ಶೆಟ್ಟಿ ದಂಪತಿಯ ಮಗಳಾದಂತಹ ಸುಷ್ಮಾ ನಗರದ ಆಸ್ಪತ್ರೆಯೊಂದರಲ್ಲಿರುವ ಔಷಧ ಅಂಗಡಿಯಲ್ಲಿ ಕೆಲಸದಲ್ಲಿದ್ದಳು. ಇದೇ ಆಸ್ಪತ್ರೆಯಲ್ಲಿ ಡಾ. ಭರತ್ ಎಂಬ ಯುವ ವೈದ್ಯರೊಬ್ಬರು ಇದ್ದಾರೆ. ಡಾ. ಭರತ್ ಗೆ ಸೂರತ್ಕಲ್ ನಲ್ಲಿ ಒಂದು ಚಿಕ್ಕಾಸ್ಪತ್ರೆಯೂ ಇದೆ. ಇತ್ತೀಚೆಗೆ ಡಾ. ಭರತ್ ಅವರ ಪತ್ನಿ ತೀರಿಕೊಂಡಿದ್ದರು. ಇಂತಿಪ್ಪ ಡಾ. ಭರತ್ ಮತ್ತು ಸುಷ್ಮಾ ಮಧ್ಯೆ ಪ್ರೇಮಾಂಕುರವಾಗಿದೆ ಎನ್ನಲಾಗಿದೆ.
ಈ ಮಧ್ಯೆ ಮಹಿಳೆಯೊಬ್ಬರು ಸುಷ್ಮಾ ಬಗ್ಗೆ ಅಪಸ್ವರವೆತ್ತಿದಾಗ ಡಾ. ಭರತ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ನೊಂದ ಸುಷ್ಮಾ ಸಮುದ್ರಕ್ಕೆ ಹಾರಿ ತನ್ನ ಬಾಳಪಯಣ ಕೊನೆಗಾಣಿಸಿದ್ದಾಳೆ.












Click it and Unblock the Notifications