ದೊಡ್ಡಗೌಡರಿಗೆ ಹಾಸನದಲ್ಲಿ ಒಂದು ಮನೆ ಬೇಕಂತೆ

'ಹಾಸನ ನಗರದಲ್ಲೆ ವಾಸ್ತವ್ಯ ಹೂಡುತ್ತೇನೆ' ಎಂದು ಖುದ್ದು ದೇವೇಗೌಡರೇ ಶ್ರುಕವಾರ ಈ ವಿಷಯ ಪ್ರಕಟಿಸಿದ್ದಾರೆ. ಅದಕ್ಕಾಗಿ ಸೂಕ್ತ ಮನೆ ಗುರುತಿಸುವಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಯವರ ಮುಂದೆ ಬೇಡಿಕೆಯನ್ನೂ ಇಟ್ಟಿದ್ದಾರೆ.
ಅಕ್ಟೋಬರ್‌ನೊಳಗೆ ಹಾಸನದಲ್ಲಿ ಮನೆ ಮಾಡಿ ವಾರದಲ್ಲಿ ಕನಿಷ್ಠ ಎರಡು ದಿನ ಇಲ್ಲಿ ವಾಸ್ತವ್ಯ ಹೂಡಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವೆ. ನಾನು ಸಂಸದನಾಗಿ 21 ವರ್ಷ ಆಗುತ್ತಿದೆ. ಹಾಸನದಲ್ಲಿಯೇ ಒಂದು ಮನೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇನೆ. ಈಗ ಆರೋಗ್ಯ ಸುಧಾರಿಸಿದೆ. ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡು ಪಕ್ಷ ಸಂಘಟಿಸುವೆ. ಹಾಸನ ಜಿಲ್ಲೆಯ ಅಕ್ಕ ಪಕ್ಕದ ಜಿಲ್ಲೆಗಳಿಗೆ ಹಾಸನದಿಂದಲೇ ಪ್ರವಾಸ ತೆರಳುವೆ ಎಂದು ದೊಡ್ಡಗೌಡರು ಹೇಳಿದರು.
ಪ್ರಜ್ವಲ್ ರೇವಣ್ಣ ಕುರಿತು ಅಪ ಪ್ರಚಾರ: ಇತ್ತೀಚಿಗೆ ಜೆಡಿಎಸ್ ಯುವನಾಯಕ ಪ್ರಜ್ವಲ್ ರೇವಣ್ಣ ಅವರಿಂದಾಗಿ ಯುವ ಕಾರ್ಯಕರ್ತರಲ್ಲಿ ಸಂಚಲನ ಉಂಟಾಗಿದೆ. ಆದರೆ ಅವರ ಆಗಮನದಿಂದ ಕೆಲವರು ಆತಂಕಗೊಂಡು ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆಂದು ಸಕಲೇಶಪುರದ ಜೆಡಿಎಸ್ ಯುವ ಕಾರ್ಯಕರ್ತರು ಆರೋಪಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಹಾಗೂ ಯುವ ಜೆಡಿಎಸ್ ಕಾರ್ಯಕರ್ತರನ್ನು ಮಾನಸಿಕವಾಗಿ ಕುಗ್ಗಿಸಿ ರಾಜಕೀಯದಿಂದ ದೂರ ಸರಿಸುವ ಪ್ರಯತ್ನ ನಡೆಯುತ್ತಿದೆ. ಜೆಡಿಎಸ್‌ನ ಯುವ ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ಅವರ ಆಗಮನದಿಂದ ತಾಲೂಕಿನ ಯುವ ಜೆಡಿಎಸ್ ಕಾರ್ಯಕರ್ತರು ಬಹಳ ಉತ್ಸಾಹಗೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಪಕ್ಷ ಗೆಲುವು ಸಾಧಿಸುವ ಸಾಧ್ಯತೆ ಇದೆ' ಎಂದು ಯುವ ಕಾರ್ಯಕರ್ತರು ಆಶಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಆಶೀರ್ವಾದ ಪಡೆದು ಪ್ರಜ್ವಲ್ ರೇವಣ್ಣ ಅವರು ಜಿಲ್ಲೆಯಲ್ಲಿ ಯುವ ಜೆಡಿಎಸ್‌ನ ಸಂಘಟನೆಗೆ ಮುಂದಾಗಿದ್ದಾರೆ. ಆದರೆ ಇವರಿಗೆ ಸಕಲೇಶಪುರದಲ್ಲಿ ದೊರಕಿದ ಜನ ಬೆಂಬಲವನ್ನು ನೋಡಿದ ಕೆಲವರು ಹೊಟ್ಟೆ ಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದೂ ಅವರು ದೂರಿದರು.












Click it and Unblock the Notifications