ಕಾಣೆಯಾಗುತ್ತಿರುವ ಯುವತಿಯರು: ಆತಂಕದಲ್ಲಿ ಉಡುಪಿ

udupi-women-missing-cases-on-rise-cause-for-concern
ಉಡುಪಿ, ಸೆ. 14: ದೇವರನಾಡು ಉಡುಪಿಯಲ್ಲಿ ಯುವತಿಯರು ಕಾಣೆಯಾಗುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಮತ್ತು ಇದು ಕರಾವಳಿ ಭಾಗವನ್ನು ಆತಂಕಕ್ಕೆ ದೂಡಿದೆ.

18ರಿಂದ 25 ವರ್ಷ ಪ್ರಾಯದ ಯುವತಿಯರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದಾರೆ. ಅದೃಷ್ಟವಶಾತ್ ಕೆಲವರು ಜೀವಂತವಾಗಿ ವಾಪಸಾಗುತ್ತಿದ್ದಾರೆ. ಆದರೆ ಮದುವೆಯೋ ಮತ್ತೊಮದು ಅವಘಡ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಅನೇಕರು ಮರಳಿ ಬಾರದ ಲೋಕಕ್ಕೆ ಹೋಗುತ್ತಿದ್ದಾರೆ. ಅವರ ಪತ್ತೆಯೂ ಇಲ್ಲದಂಗಾಗುತ್ತಿದೆ.

ತಾಜಾ ಆಗಿ ಮೊನ್ನೆ ಸೆ. 11ರಂದು 21 ವರ್ಷದ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ. ಶಿವರಂಜಿನಿ ಎಂಬ ಯುವತಿ ಮಂಗಳವಾರ ಬೆಳಗ್ಗೆಯೇ ಮನೆಬಿಟ್ಟು ಹೋಗಿದ್ದಾಳೆ. ಉದ್ಯೋಗಕ್ಕೆಂದು ಮಣಿಪಾಲಕ್ಕೆ ಹೋದ ಈ ಯುವತಿ ವಾಪಸಾಗಿಲ್ಲ. ಉಡುಪಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರನ್ನು ದಾಖಲಿಸಲಾಗಿದೆ. 5 ಅಡಿ ಎತ್ತರದ ಶಿವರಂಜಿನಿ (ಚಿತ್ರ ನೋಡಿ) ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ ಮತ್ತು ತುಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.

ಅತ್ತ ಶಿವರಂಜಿನಿ ಮನೆಬಿಟ್ಟು ಹೋದ ಘಳಿಗೆಯಲ್ಲೇ ಇತ್ತ ಸಂಗೀತಾ ಎಂಬ ವಿವಾಹಿತ ಯುವಮಹಿಳೆಯೊಬ್ಬರು ಕಾಣೆಯಾದರು. ಆದರೆ 24 ವರ್ಷದ ಈ ಮಹಿಳೆ ಮನೆಬಿಟ್ಟ ಮೂರೇ ದಿನದಲ್ಲಿ ಹೆಣವಾಗಿದ್ದಾಳೆ. ಈ ಮಹಿಳೆ ಪುರುಷನೊಬ್ಬನ ಜತೆ ಮನೆಬಿಟ್ಟಿದ್ದಳು. ಮೊದಲು ಈಕೆ ಆತ್ಮಹತ್ಮೆ ಮಾಡಿಕೊಂಡಿರಬಹುದು ಎನ್ನಲಾಗಿತ್ತು. ಆದರೆ ಅದು ಹತ್ಯೆ ಎಂದು ತಿಳಿದುಬಂದಿದೆ.

ಇನ್ನು, ಸೆ. 5ರಂದು ಧನವಂತಿ (25) ಎಂಬ ಯುವತಿ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು ಇನ್ನೂ ಮರಳಿ ಬಂದಿಲ್ಲ. ಆಗಸ್ಟಿನಲ್ಲಿ ಹೀಗೆ ಕಾಣೆಯಾದವರ ಪಟ್ಟಿ ಹೀಗಿದೆ: ವಿಜಯಲಕ್ಷ್ಮಿ, ಪ್ರಿಯಾಂಕಾ, ಭಾಗ್ಯಶ್ರೀ...ಇನ್ನೂ ಅನೇಕ ಯುವತಿಯರು.

ಪ್ರಸಕ್ತ ಸಾಲಿನಲ್ಲೇ ಸುಮಾರು 50 ಯುವತಿಯರು ಮನೆ ಬುಟ್ಟು ಹೋಗಿದ್ದಾರೆ. ಹೀಗೆ ಯುವತಿಯರೇನೋ ಮರಳಿ ಬಾರದ ಲೋಕಕ್ಕೆ ಹೋಗುತ್ತಿದ್ದಾರೆ. ಆದರೆ ಅವರ ಪೋಷಕರು ಮತ್ತು ಕುಟುಂಬಸ್ಥರು ದಿನಾ ಕಣ್ಣೀರಲ್ಲಿ ಕೈತೆಳೆಯುತ್ತಿದ್ದಾರೆ. ಇನ್ನು ಪೊಲೀಶ್ ಇಲಾಖೆ ತಲೆ ಮೇಲೆ ಕೈಹೊತ್ತು ಕುಳಿತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+