ಮೊಬೈಲಿನಲ್ಲಿ ಬ್ಲೂಫಿಲಂ: ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಸದರಿ ಕಾಲೇಜು ವಿದ್ಯಾರ್ಥಿ ಹರ್ಷಿತ್ ಪರೀಕ್ಷಾ ಕೊಠಡಿಯಲ್ಲಿ ಮೊಬೈಲಿನಲ್ಲಿ ಬ್ಲೂ ಫಿಲಂ ವೀಕ್ಷಿಸುತ್ತಿದ್ದ ಎಂಬುದಾಗಿ ಉಪನ್ಯಾಸಕರು ಹಾಗೂ ಕಾಲೇಜಿನ ಶಿಸ್ತು ಸಮಿತಿ ಪ್ರಚಾರ ನಡೆಸಿದ್ದ ಕಾರಣಕ್ಕಾಗಿ ಮನನೊಂದ ದ್ವಿತೀಯ ಬಿಕಾಂ ವಿದ್ಯಾರ್ಥಿ ಯಾಲದಾಳು ಹರ್ಷಿತ್ (19) ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದಾರೆ.
ಸೆ. 6ರಂದು ಕಾಲೇಜು ಕೊಠಡಿಯಲ್ಲಿ internals (ಆಂತರಿಕ ಪರೀಕ್ಷೆ) ನಡೆಯುತ್ತಿದ್ದಾಗ ವಿದ್ಯಾರ್ಥಿ ಹರ್ಷಿತ್ ಮೊಬೈಲಿನಲ್ಲಿ ಬ್ಲೂ ಫಿಲಂ ವೀಕ್ಷಿಸುತ್ತಿದ್ದಾಗ ಮೊಬೈಲ್ ರಿಂಗಣಿಸಿದೆ. ಕೊಠಡಿಯಲ್ಲಿದ್ದ ಉಪನ್ಯಾಸಕರು ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ. ಆಗ ವಿದ್ಯಾರ್ಥಿ ಹರ್ಷಿತ್ ಬ್ಲೂ ಫಿಲಂ ವೀಕ್ಷಿಸುತ್ತಿರುವುದು ಬೆಳಕಿಗೆ ಬಂತು ಎನ್ನಲಾಗಿದೆ.
ಬ್ಲೂ ಫಿಲಂ ವೀಕ್ಷಿಸಿದ ಕಾರಣಕ್ಕಾಗಿ ಕೆಲವು ಉಪನ್ಯಾಸಕರು ಹರ್ಷಿತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಲೇಜಿನ ಶಿಸ್ತು ಸಮಿತಿ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿತ್ತು. ಇದರಿಂದ ನೊಂದ ಹರ್ಷಿತ ಸೆ. 6ರಂದು ಕಾಲೇಜಿಗೆಂದು ಹೊರಟವನು, ಬಳಿಕ ಕಾಣೆಯಾಗಿದ್ದ. ಸೆ. 9ರಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಸೆ. 11 ರಂದು ಮನೆಯ ಸಮೀಪದಲ್ಲೇ ಇರುವ ತೋಟದಲ್ಲಿ ಹರ್ಷಿತನ ಶವ ಪತ್ತೆಯಾಗಿದೆ.
ಆತ ವಿಷ ಸೇವಿಸಿ ಸಾವಿಗೆ ಶರಣಾಗಿದ್ದು, ಈ ಸಾವಿಗೆ ತಾನೇ ಕಾರಣ ಎಂದು ಮರಣ ಪತ್ರದಲ್ಲಿ ಬರೆದಿಟ್ಟಿದ್ದಾನೆ. ಇದರ ಜತೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿ 6 ತಿಂಗಳ ಹಿಂದೆ ಮೃತಪಟ್ಟಿದ್ದೂ ಹರ್ಷಿತನನ್ನು ಬಾಧಿಸಿದೆ. ಇದನ್ನು ಆತ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.












Click it and Unblock the Notifications