ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ,ಸೋಮಣ್ಣ ಒಬ್ರನ್ನೊಬ್ರು ಹೊಗಳಿ ಕೊಂಡಾಡಿದ್ರು

By Balaraj
|
Google Oneindia Kannada News

Somanna and DKS mutual admiration
ಕನಕಪುರ, ಸೆ 12: ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಾಯಕರುಗಳು ಒಬ್ಬರನ್ನೊಬ್ಬರು ಹೊಗಳಿಕೊಂಡಿದ್ದಕ್ಕೆ ಇಲ್ಲಿ ಮಂಗಳವಾರ (ಸೆ 11) ನಡೆದ ಪ್ರತಿಭಾ ಪುರಷ್ಕಾರ ಸಮಾರಂಭ ವೇದಿಕೆಯಾಯಿತು. ಕಾಂಗ್ರೆಸ್ ಧುರೀಣ ಡಿ ಕೆ ಶಿವಕುಮಾರ್ ಅವರನ್ನು ವಸತಿ ಸಚಿವ ವಿ ಸೋಮಣ್ಣ ಹೊಗಳಿದರೆ, ಸೋಮಣ್ಣ ಡಿಕೆಶಿ ಅವರನ್ನು ಹೊಗಳಿದರು.

ಗುಡಿಸಲು ರಹಿತ ಕ್ಷೇತ್ರವನ್ನಾಗಿಸಲು ಕನಕಪುರ ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಮೊದಲು ರಾಜ್ಯ ಸರಕಾರ ಮತ್ತು ವಸತಿ ಸಚಿವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅದರಲ್ಲೂ ಸಚಿವ ಸೋಮಣ್ಣ ಅವರು ಈ ಯೋಜನೆ ಜಾರಿಗೆ ಬರುವಲ್ಲಿ ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ.

ಈ ಯೋಜನೆಯಡಿಯಲಿ 13 ಸಾವಿರ ಮನೆಗಳು ನಿರ್ಮಾಣಗೊಳ್ಳುತ್ತಿವೆ. ಅಲ್ಲದೆ ರಾಯಸಂದ್ರ ಗ್ರಾಮದ ಬಳಿ 400 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮಾದರಿ ಬಡಾವಣೆ ರೂಪುಗೊಳ್ಳುತ್ತಿವೆ. ಈ ಎಲ್ಲಾ ಕೆಲಸಗಳಿಗೆ ಹಣಕಾಸಿನ ತೊಂದರೆಯಾಗದಂತೆ ಸಚಿವ ಸೋಮಣ್ಣ ಮುತುವರ್ಜಿ ವಹಿಸಿಕೊಂಡಿದ್ದಾರೆ. ಆವರಿಗೆ ನನ್ನ ಮತ್ತು ನನ್ನ ಕ್ಷೇತ್ರದ ಮತದಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಸೋಮಣ್ಣ ಹೇಳಿಕೆ: ವಿಪಕ್ಷದಲ್ಲಿರುವ ಡಿ ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಪೂರ್ವ ಬೆಂಬಲ ನೀಡಿ ಸಹಕರಿಸಿದ್ದಾರೆ. ಯಾವುದೇ ಪಕ್ಷವಾಗಲಿ, ಅಭಿವೃದ್ದಿ ನಡೆಸುವವರಿಗೆ ಬಿಜೆಪಿ ಸಹಕಾರ ಇದ್ದೇ ಇರುತ್ತದೆ.

ಕನಕಪುರ ಕ್ಷೇತ್ರದಲ್ಲಿ ಡಿ ಕೆ ಶಿವಕುಮಾರ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರು ಮಾಡುವ ಉತ್ತಮ ಕೆಲಸಕ್ಕೆ ಸರಕಾರದ ಬೆಂಬಲವಿದೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಶಿವಕುಮಾರ್ ಮಾತ್ರ ಕನಕಪುರ ಕ್ಷೇತ್ರದಿಂದ ಜಯ ಗಳಿಸುತ್ತಾರೆ ಎಂದು ಸೋಮಣ್ಣ ಹೇಳಿಕೆ ನೀಡಿದ್ದಾರೆ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪನವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜಕೀಯವಾಗಿ ಅವರನ್ನು ಯಾರೂ ತುಳಿಯಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಯಡಿಯೂರಪ್ಪ ಅವರನ್ನು ನೆನೆಯಲು ಸೋಮಣ್ಣ ಮರೆಯಲಿಲ್ಲ.

ಕೆಲ ದಿನಗಳ ಹಿಂದೆ ಬಿಜೆಪಿಯ ಮೂವರು ಸಚಿವರಾದ ವಿ ಸೋಮಣ್ಣ, ಸಿ ಪಿ ಯೋಗೀಶ್ವರ್ ಮತ್ತು ಬಿ ಎನ್ ಬಚ್ಚೇಗೌಡ ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ.

English summary
Minister V Somanna and Congress Leader D K Shiva Kumar praised each other in a function in Kanakapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X