ಬಸ್ ಪ್ರಯಾಣಿಕರ ಪರದಾಟ ಬುಧವಾರವೇ ಶುರು

KSRTC, BMTC Bandh
ಬೆಂಗಳೂರು, ಸೆ.12: ಕೆಎಸ್ಸಾರ್ಟಿಸಿ ನೌಕರರು ಕರೆ ನೀಡಿರುವ ಗುರುವಾರದ (ಸೆ.13) ಬಂದ್ ಬಿಸಿ ಬುಧವಾರವೇ ತಟ್ಟಿದ್ದು, ಪ್ರಯಾಣಿಕರು ಪರದಾಟಪಟ್ಟಿದ್ದಾರೆ. ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಂದ್ ಗೆ ಕರೆ ನೀಡಿರುವ ನೌಕರರ ಸಂಘಟನೆಗಳು ತಮ್ಮ ಬಿಗಿಪಟ್ಟನ್ನು ಮುಂದುವರೆಸಿದ್ದು, ಗುರುವಾರ ಬಂದ್ ನಡೆಯುವುದು ಖಾತ್ರಿಯಾಗಿದೆ.

ಗುರುವಾರದ ಬಂದ್ ಹಿನ್ನೆಲೆಯಲ್ಲಿ ಬುಧವಾರವೇ ಬಹುತೇಕ ಡಿಪೋಗಳಲ್ಲಿ ಸಿಬ್ಬಂದಿಗಳ ಹಾಜರಾತಿ ಕಮ್ಮಿಯಾಗಿತ್ತು. ಅನೇಕ ಡ್ರೈವರ್ ಹಾಗೂ ಕಂಡೆಕ್ಟರ್ ಗಳು ಕೆಲಸಕ್ಕೆ ಗೈರು ಹಾಜರಾಗಿದ್ದರು. ಇದರಿಂದ ಅನೇಕ ಕಡೆ ಬಸ್ ಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡುಬಂದಿದೆ.

ದಾವಣಗೆರೆ, ಮಂಗಳೂರು ಹಾಗೂ ತುಮಕೂರಿನಲ್ಲಿ ಅನೇಕ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.

ಸರ್ಕಾರ ಬೇಡಿಕೆಗಳನ್ನು ಪರಿಶೀಲಿಸುತ್ತಿದೆ. ನೌಕರರ ವೇತನ ಹೆಚ್ಚಳ ಮಾಡಬೇಕಾದರೆ ಪ್ರಯಾಣ ದರವನ್ನು ಹೆಚ್ಚಿಸಬೇಕಾಗುತ್ತದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಹಾಕಲು ಸಾಧ್ಯವಿಲ್ಲ ಎಂದು ಕೆಎಸ್ಸಾರ್ಟಿಸಿ ವಕ್ತಾರರು ಹೇಳಿದ್ದಾರೆ.

ಸುಮಾರು 70,000 ಹಾಗೂ 80,000 ಚಾಲಕ ಹಾಗೂ ನಿರ್ವಾಹಕರನ್ನು ಹೊಂದಿರುವ ಕೆಎಸ್ಸಾರ್ಟಿಸಿ ಸಂಸ್ಥೆಯ ಶೇ 10 ರಷ್ಟು ಸಿಬ್ಬಂದಿ ಮುಷ್ಕರ ಹೂಡಿದರೂ ಸಹ ಇಡೀ ಕರ್ನಾಟಕವೇ ಸ್ತಬ್ದವಾಗುತ್ತದೆ.

ಬಿಜೆಪಿ ಸರ್ಕಾರದ ಪರ ಇರುವ ನೌಕರರ ಸಂಘಟನೆ ಮಾತ್ರ ಮುಷ್ಕರದಿಂದ ಹಿಂದೆ ಸರಿಯುವ ಮಾತನ್ನಾಡಿದ್ದು, ಉಳಿದಂತೆ ಎಲ್ಲಾ ಸಂಘಟನೆಗಳು ಮುಷ್ಕರ ಹೂಡುವುದಾಗಿ ಹೇಳಿದೆ.
ಮುಷ್ಕರದ ಪ್ರಮುಖ ಬೇಡಿಕೆಗಳು
* ಸಂಸ್ಥೆಯ ನೌಕರರ ವೇತನ ಪರಿಷ್ಕರಣೆ
* ಟ್ರೈನಿಯಾಗಿ ಕೆಲಸ ಮಾಡುತ್ತಿರುವ ಸುಮಾರು 30 ಸಾವಿರಕ್ಕೂ ಹೆಚ್ಚು ನೌಕರರನ್ನು ಖಾಯಂ ಮಾಡುವುದು
* ಏಕಗವಾಕ್ಷಿ ವೇತನ ಪರಿಷ್ಕರಣೆ ಪದ್ಧತಿ ರದ್ದತಿ
* ಮಂಡಳಿಯಿಂದ ನೇಮಿಸಲ್ಪಟ್ಟ ಸಮಿತಿಯೊಂದಿಗೆ ಮಾತುಕತೆ ನಡೆಸಿ ವೇತನ ಪರಿಷ್ಕರಣೆ

ಸಾರಿಗೆ ಸಂಸ್ಥೆ ನೌಕರರಿಗೆ ಮತ್ತು ರಾಜ್ಯದ ಜನತೆಗೆ ಮನವಿ ಮಾಡಿ ಸರಕಾರ ಇಂದಿನ ದೈನಿಕದಲ್ಲಿ ಜಾಹೀರಾತು ನೀಡಿದೆ. ಸರಕಾರ ನೌಕರರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಜಾಹೀರಾತಿನಲ್ಲಿ ಪ್ರಕಟಿಸಿ ಮುಷ್ಕರ ಕೈಬಿಡುವಂತೆ ಕೋರಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಾಲ್ಕು ಘಟಕಗಳ (ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ರಸ್ತೆ ಸಾರಿಗೆ, ವಾಯುವ್ಯ ರಸ್ತೆ ಸಾರಿಗೆ) ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳಿನ ಮುಷ್ಕರದಲ್ಲಿ ನೌಕರರ ಸಂಘದ ಎಸ್ಸಿ,ಎಸ್ಟಿ ಘಟಕ ಪಾಲ್ಗೊಳ್ಳುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+