ಮೈಸೂರ್ ಪಾರ್ಕ್ ನುಂಗಿದ ಗೌಡರ ಮಕ್ಕಳು: ಬಿಎಸ್‌ವೈ

deve-gowda-sons-swallowed-mysore-park-bs-yeddyurappa
ಬೆಂಗಳೂರು, ಸೆ.11: 'ರೈತರ ಹೆಸರಲ್ಲಿ ಪ್ರಮಾಣ ಮಾಡಿದ ಯಡಿಯೂರಪ್ಪಗೆ ಭೂದಾಹ ಹೆಚ್ಚಾಗಿ ಭೂಮಿ ಖರೀದಿಸುತ್ತಿದ್ದಾರೆ. ಭ್ರಷ್ಟ ಹಣದಿಂದ ಅಕ್ರಮ ಆಸ್ತಿಗಳನ್ನು ಕೊಳ್ಳಲು ತೋರಿದ ಆಸಕ್ತಿಯನ್ನು ಯಡಿಯೂರಪ್ಪ ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡುವ ವಿಚಾರದಲ್ಲಿ ತೋರಲಿಲ್ಲ' ಎಂದು ಮೊನ್ನೆ ಭಾನುವಾರ ಶಿವಮೊಗ್ಗದಲ್ಲಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದೇ ತಡ ಇತ್ತ ಯಡಿಯೂರಪ್ಪ ತಮ್ಮ ಬತ್ತಳಿಕೆಯಲ್ಲಿನ ಅಸ್ತ್ರವೊಂದನ್ನು ದೊಡ್ಡ ಗೌಡ್ರರತ್ತ ಬಿಟ್ಟಿದ್ದಾರೆ.

'ಬೆಂಗಳೂರನ್ನು ಲೂಟಿ ಹೊಡೆದವರು ನೀವು ಅಪ್ಪ-ಮಕ್ಕಳು. ನಾನು ಬೀದಿಗಿಳಿದರೆ ನಿಮ್ಮ ಬಣ್ಣ ಬಯಲಾಗುತ್ತದೆ' ಎಂದೇ ಮಾತಿಗಿಳಿದಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,

'ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಹೇಳಬಹುದು. ನನ್ನ ಬಗ್ಗೆ ಏನೋ ಬಿಚ್ಚುತ್ತೇನೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅಪ್ಪ-ಮಗ ಮಾಡಿರುವುದನ್ನು ನಾನೂ ಬಿಚ್ಚುತ್ತೇನೆ; ಅವರೇ ನೋಡಿಕೊಳ್ಳಲಿ' ಎಂದು ಸೋಮವಾರ ವ್ಯಂಗ್ಯವಾಡಿದ್ದಾರೆ.

ಯಾವುದದು 'ಮೈಸೂರ್ ಪಾರ್ಕ್': ಇದೇ ವೇಳೆ ಯಡಿಯೂರಪ್ಪನವರು ಸ್ಯಾಂಪಲ್ ಒಂದನ್ನು ಕೊಟ್ಟಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಗಂಭೀರ ಆರೋಪಕ್ಕಿಳಿದ ಬಿಎಸ್‌ವೈ, 'ದೇವೇಗೌಡ ತಮ್ಮ ಅಧಿಕಾರವಧಿಯಲ್ಲಿ ಮೈಸೂರಿನ ಒಂದು ಸಾರ್ವಜನಿಕ ಪಾರ್ಕಿನಲ್ಲಿ ಬರೋಬ್ಬರಿ 70 ಸೈಟ್ ಮಾಡಿ ಅಪ್ಪ-ಮಕ್ಕಳು ನುಂಗಿಬಿಟ್ಟರು' ಎಂದು ಲೇವಡಿ ಮಾಡಿದ್ದಾರೆ.

ಆದರೆ ಆ ಮೈಸೂರ್ ಪಾರ್ಕ್ ಯಾವುದು, ಎಲ್ಲಿತ್ತು ಎಂಬುದರ ವಿವರವನ್ನು ನೀಡದೆ ಬಿಎಸ್‌ವೈ ಮಗುಮ್ಮಾಗುಳಿದರು. ಜತೆಗೆ, ಆಗಲೇ ಬಯಲು ಮಾಡದೆ ಈಗ ತಮ್ಮ ವಿರುದ್ಧ ಆರೋಪ ಮಾಡಿದ ಮೇಲೆ ಏಕೆ ಪ್ರತ್ಯಾರೋಪ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಇನ್ನು ಕುಮಾರಸ್ವಾಮಿಯವರೂ ತಾವು ಸವಿದಿರುವ ಮೈಸೂರ್ ಪಾರ್ಕ್ ಬಗ್ಗೆ ಮಾತನಾಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+