ಅಮ್ಮನ ಗೋಳುಹೊಯ್ದುಕೊಂಡಿದ್ದಕ್ಕೆ ಅಪ್ಪನ್ನ ಸಾಯ್ಸಿಬಿಟ್ರು

ಮೊನ್ನೆ ಗುರುವಾರ ಹೀಗೆ ಕೊಳೆತುಬಿದ್ದಿದ್ದ ಶವವವನ್ನು ಕಂಡ ಪೊಲೀಸರು ತನಿಖೆಗೆ ಮುಂದಾಗ ತಿಳಿದುಬಂದ ವಿಷಯವೆಂದರೆ ಮೃತ ವ್ಯಕ್ತಿಯ ಇಬ್ಬರು ಗಂಡು ಮಕ್ಕಳು ಸೇರಿಕೊಂಡು ಅವರಪ್ಪನನ್ನು ಪರಲೋಕಕ್ಕೆ ಕಳಿಸಿರುವುದಾಗಿ ತಿಳಿದುಬಂದಿತು.
'ಯಾಕಪ್ಪಾ ಮಕ್ಕಳೇ ಹೀಗೆ ಮಾಡಿದ್ದೀರಿ? ಹೆತ್ತಪ್ಪನನ್ನೇ ಸಾಯಿಸುವುದಾ? ನೀವಿನ್ನೆಂಥಾ ಮಕ್ಕಳಯ್ಯಾ?' ಎಂದೆಲ್ಲ ಪೊಲೀಸರು ಗದರಿ ಕೇಳಿದ್ದಾರೆ. ಅದಕ್ಕೆ ಆ ಪುತ್ರರಿಬ್ಬರೂ... 'ಹಂಗೇನಿಲ್ಲ. ಅವನು ಅಪ್ಪನೇ ಅಲ್ಲ. ನರರೂಪದ ರಾಕ್ಷಸ. ನಮ್ಮಮ್ಮನನ್ನು ಒಂದೇ ಸಮನೆ ಗೋಳುಹೊಯ್ದುಕೊಳ್ಳುತ್ತಿದ್ದ. ಅದಕ್ಕೇ ತಕ್ಕ ಶಾಸ್ತಿ ಮಾಡಿದಿವಿ' ಎಂದು ನಿಟ್ಟುಸಿರುಬಿಟ್ಟಿದ್ದಾರೆ.
ಶರದ್ (24) ಮತ್ತು ಸಂತೋಷ್ (22) ಎಂಬುವವರೇ ಹೀಗೆ ತಮ್ಮ ತಾಯಿಗೆ ಅಲ್ಲಲ್ಲ ತಂದೆಗೆ ಈ ಲೋಕದಿಂದ ಮುಕ್ತಿ ದೊರಕಿಸಿದ ಮಕ್ಕಳು. ಭಾರತೀಯ ದಂಡ ಸಂಹಿತೆ ಸೆಕ್ಷನ್ 302ರ ಅನುಸಾರ ಪೊಲೀಸರು ಮಕ್ಕಳಿಬ್ಬರ ಮೇಲೂ ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications