ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲ ಲಾಟರಿ ಜಾಲ: ಹಳ್ಳಕ್ಕೆ ಬಿದ್ದ ಕೆಂಗೇರಿ ಟೆಕ್ಕಿ

By Srinath
|
Google Oneindia Kannada News

kengeri-techie-falls-for-fake-online-lottery-scheme
ಬೆಂಗಳೂರು, ಸೆ.8: ಕೆಂಗೇರಿ ಬಳಿಯ Global Villageನಲ್ಲಿರುವ Hinduja Global Solutions ಆತ ಇಂಜಿಯರ್ ಆಗಿ ದುಡಿಯುತ್ತಿದ್ದಾನೆ. ವಯಸ್ಸು ಇನ್ನೂ 23. ಯಾವ ಮಾಯದ ಬೆನ್ನೇರಿದನೋ ನಕಲಿ ಲಾಟರಿ ಜಾಲದಲ್ಲಿ ಸಿಕ್ಕಿಕೊಂಡು ಬರೋಬ್ಬರಿ 1,69,500 ರೂಪಾಯಿ ಕಳೆದುಕೊಂಡಿದ್ದಾನೆ.

ಆನ್ ಲೈನ್ ಲಾಟರಿ ಜಾಲ: ಕಳೆದ ಭಾನುವಾರ ಏನಾಯಿತೆಂದರೆ ಸದರಿ ಟೆಕ್ಕಿಯ ಮೊಬೈಲ್ ಗೆ ಒಂದು ಎಸ್ಎಂಎಸ್ ಹರಿದುಬಂದಿದೆ. ಆದರೆ ಅದೊಂದು ಮೋಸದ ಜಾಲ ಎಂಬುದು ಹಳ್ಳಕ್ಕೆ ಬಿದ್ದ ಮೇಲೆಯೇ ನಮ್ಮ ಟೆಕ್ಕಿಯ ಅರಿವಿಗೆ ಬಂದಿದ್ದು. ಆದರೆ ಆವೇಳೆಗೆ ಆತನ ಬ್ಯಾಂಕ್ ಖಾತೆಯಿಂದ 1,69,500 ರೂಪಾಯಿ ಕೈಬಿಟ್ಟಿತ್ತು.

'ನೀವು ನಿಜಕ್ಕೂ ಬಹಳ ಅದೃಷ್ಟವಂತರು. ನಿಮಗೆ ಭಾರಿ ಲಾಟರಿ ಹೊಡೆದಿದೆ. 10 ಲಕ್ಷ ರೂಪಾಯೀ, ಜತೆಗೆ ಎರಡು ಸ್ಮಾರ್ಟ್ ಫೋನುಗಳು ಮತ್ತು ಒಂದೇ ಒಂದು HP ಲ್ಯಾಪ್ ಟಾಪ್ ಗೆದ್ದಿದ್ದೀರಿ' ಎಂಬುದು ಎಸ್ಎಂಎಸ್ ಸಾರಾಂಶವಾಗಿತ್ತು.

ನಮ್ಮ ಟೆಕ್ಕಿಗೆ ಏನನ್ನಿಸಿತೋ ಏನೋ, ಹಿಂದುಮುಂದು ಯೋಚನೇನೂ ಮಾಡೋಕ್ಕೆ ಹೋಗಲಿಲ್ಲ. ಸೀದಾ ಹಳ್ಳಕ್ಕೆ ಹೋಗಿ ಬಿದ್ದಿದ್ದಾನೆ. 'ನೀವು ಗೆದ್ದಿರೋದೇನೋ ನಿಜ. ಆದರೆ ಅದಕ್ಕೆ ಕೇವಲ 24,500 ರೂಪಾಯಿ ಪಾವತಿಸಿಬಿಡಿ. ಅದು ಸುಂಕದ ಬಾಬ್ತು. ಮೇಲೆ ಹೇಳಿದ ಅಷ್ಟೂ ಬಹುಮಾನ ನಿಮ್ಮದಾಗುತ್ತದೆ' ಎಂದು ಸೋಮವಾರ ಈಮೇಲ್ ಮೂಲಕವೂ 'ಬಿಸ್ಕೆಟ್' ಹಾಕಲಾಗಿತ್ತು.

ಮತ್ತೆ ವರಾತ ತೆಗೆದ ವಂಚಕ ಹೇಗೂ 10 ಲಕ್ಷ ನಿಮ್ಮದಾಗಲಿದೆ. ಇನ್ನೂ 1.45 ಲಕ್ಷ ರೂಪಾಯಿ ಪಾವತಿಸಿಬಿಡಿ ಎಂದು ಈಮೇಲ್ ಮೂಲಕವೇ ಒಗ್ಗರಣೆ ಹಾಕಿದ್ದಾನೆ. ಅಷ್ಟಕ್ಕೇ ಸೀದುಹೋದ ಟೆಕ್ಕಿ ಅಷ್ಟು ಮೊತ್ತವನ್ನು ತನ್ನ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಯೇ ಬಿಟ್ಟಿದ್ದಾನೆ.

ಸರಿಯಾಗಿ 1,69,500 ರೂಪಾಯಿ ಹಣ ತನ್ನ ಖಾತೆಯಿಂದ ವರ್ಗಾವಣೆಯಾದ ಮೇಲಷ್ಟೇ ಮಂಕುಬೂದಿ ಕೊಡವಿಕೊಂಡೆದ್ದ ಟೆಕ್ಕಿ ತಾನೆಂತಹ ಮೋಸಕ್ಕೆ ಬಲಿಯಾದೆ ಎಂಬುದು ಅರಿವಿಗೆ ಬಂದಿದ್ದು. ಆದರೆ ಅವಯ್ಯ ಈಗ 'ಆಯ್ತು, ಹೇಗೂ ನನ್ನ ಹಣ ವಾಪಸ್ ಬರೋದಿಲ್ಲ. ಆದರೆ ಮುಂದೆ ಯಾರೂ ಇಂತಹ ಮೋಸದ ಜಾಲಕ್ಕೆ ಬಲಿಯಾಗಬಾರದು ಎಂಬ ಉದ್ದೇಶದಿಂದ ಅವನನ್ನು ಹಿಡಿಯುತ್ತೇನೆ' ಎಂದು ಟೆಕ್ಕಿ ಮಹಾಶಯ ಹೇಳುತ್ತಾನೆ.

ನಾವೂ ಅಷ್ಟೇ, ನೀವೂ ಮೋಸ ಹೋಗುವುದು ಬೇಡ. ಸ್ವಲ್ಪ ಎಚ್ಚರದಿಂದಿರಿ ಎಂಬ ಕಳಕಳಿಯೊಂದಿಗೆ ಈ ಸುದ್ದಿಯನ್ನು ನೀಡುತ್ತಿದ್ದೇವೆ.

English summary
Kengeri Techie falls for fake lottery scheme loses Rs 169500 on online. The 23-year-old quality analyst with Hinduja Global Solutions in Global Village, Kengeri, was cheated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X