ಸಸ್ಪೆಂಡ್ ಆಗಿದ್ದ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಸಂದಾಯ!

suspended-teachers-get-teachers-day-award-bijapur-kolar
ಕೋಲಾರ/ ಬಿಜಾಪುರ, ಸೆ.7: ಡಾ. ಎಸ್ ರಾಧಾಕೃಷ್ಣನ್ ಅವರ ಜನ್ಮದಿನದಂದು ಶಿಕ್ಷಕರನ್ನು ಗೌರವಿಸಿ, ಪ್ರಶಸ್ತಿ ನೀಡುವ ಸತ್ಸಂಪ್ರದಾಯ ಅಂದಿನಿಂದಲೂ ನಡೆದುಬಂದಿದೆ. ಆದರೆ ಅಮಾನತುಗೊಂಡಿರುವ ಶಿಕ್ಷಕರಿಗೂ 'ಅತ್ಯುತ್ತಮ ಶಿಕ್ಷಕ' ಪ್ರಶಸ್ತಿ ನೀಡಿದರೆ ಅರ್ಹರಿಗೆ ಏನನ್ನಿಸುವುದಿಲ್ಲ?

ಆದರೂ ಇಂತಹ ದುಸ್ಸಾಹ ಬಿಜಾಪುರ ಮತ್ತು ಕೊಲಾರ ಜಿಲ್ಲೆಯಲ್ಲಿ ನಡೆದಿದೆ. ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ Best Teacher ಪ್ರಶಸ್ತಿಯು ಎಸ್ಎಂ ಇನಾಂದಾರ್ ಮತ್ತು ಎಂಕೆ ಕಹುಂಡರಿ ಅವರಿಗೆ ಸಂದಾಯವಾಗಿದೆ. ಆದರೆ ಇವರಿಬ್ಬರೂ ಅಕ್ರಮ ಮತ್ತು ಅನುಚಿತವರ್ತನೆ ಮೇಲೆ ಸಸ್ಪೆಂಡ್ ಆಗಿರುವ ಶಿಕ್ಷಕರು ಎಂಬುದು ನೋವಿನ ಸಂಗತಿ.

ಬಿಜಾಪುರದ ಇನಾಂದಾರ್ India UBM PS School ಶಾಲೆಯ ಶಿಕ್ಷಕ. ಈತನ ಸಾಧನೆ ಏನಪ್ಪಾ ಅಂದರೆ 2008ರ ಏಪ್ರಿಲ್ ನಲ್ಲಿ ನಡೆದಿದ್ದ SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ನಕಲು ಮಾಡಲು ನೆರವಾಗಿದ್ದು. ಈ ಮಹತ್ಕಾರ್ಯಕ್ಕೆ 'ಬಳುವಳಿ'ಯಾಗಿ 'ಇನಾಂದಾರ'ರನ್ನು ಸಸ್ಪೆಂಡ್ ಮಾಡಲಾಗಿತ್ತು.

ಇನ್ನು ಕೋಲಾರದ MPS ಶಾಲೆಯ ಎಂಕೆ ಕಹುಂಡರಿ ಸಾಹೇಬರು ಅನುಚಿತ ವರ್ತನೆಯ ಮೇಲೆ ಸಸ್ಪೆಂಡ್ ಆಗಿರುವ ಶಿಕ್ಷಕ.

ಈ ಅಚಾತುರ್ಯ/ಅನಾಹುತವನ್ನು ತಕ್ಷಣ ರಾಜ್ಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿಎನ್ ಹಕೀಂ ಅವರ ಗಮನಕ್ಕೆ ತರಲಾಗಿದೆ. ಕಳಂಕಿತ ಶಿಕ್ಷಕರಿಂದ ತಕ್ಷಣ ಪ್ರಶಸ್ತಿಗಳನ್ನು ವಾಪಸ್ ಪಡೆಯುವುದಾಗಿ ಉಪ ನಿರ್ದೇಶಕ ಬಿಎನ್ ಹಕೀಂ ಘೋಷಿಸಿದ್ದಾರೆ. ಮತ್ತು ಇಲಾಖಾ ತನಿಖೆಯನ್ನೂ ನಡೆಸುವುದಾಗಿ ಅವರು ಪ್ರಕಟಿಸಿದ್ದಾರೆ.

ಆಯಾ ಭಾಗದ ತಾಲೂಕು ಮಟ್ಟದ ಶಿಕ್ಷಣಾಧಿಕಾರಿಗಳೂ ಇವರ ಹೆಸರುಗಳನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದರು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+