ದಿಢೀರ್ ಪ್ರವಾಹ: ಬಸ್ಸಿನಲ್ಲಿದ್ದ 100 ಮಂದಿ ನೀರುಪಾಲು

ಬಸ್ಸು ಮಿಡ್ನಾಪುರದ ಜಾರ್ಗಾಮ್ ನಿಂದ ಬರ್ಧ್ವಾನ್ ಜಿಲ್ಲೆಯ ದುರ್ಗಾಪುರದತ್ತ ಸಂಚರಿಸುತ್ತಿತ್ತು. 12 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ನೀರಿನಲ್ಲಿ ಕೊಚ್ಚಿಹೋಗಿರುವ ಉಳಿದವರು ಕಾಣೆಯಾಗಿದ್ದಾರೆ.
ಬಸ್ಸು ಬಂಕಾಪುರ ಬಳಿ ಬರುತ್ತಿದ್ದಂತೆ ಬೈರಬ್ ಬಕಿ ನದಿಯನ್ನು ದಾಟುತ್ತುದ್ದಾಗ ಒಮ್ಮೆಲೇ ಪ್ರವಾಹವುಂಟಾಗಿ ಬಸ್ಸು 300 ಮೀಟರ್ ದೂರ ಕೊಚ್ಚಿಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಪಶ್ಚಿಮ ಬಂಗಾಳದ ಈ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಪ್ರವಾಹಗಳುಂಟಾಗುವುದು ಸಹಜ ಎಂದು ಬಂಕಾಪುರ ಪೊಲೀಸ್ ವರಿಷ್ಠ ಮುಕೇಶ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications