ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಅಮೆರಿಕದ ಸಾಲ ನಿಜಕ್ಕೂ ಭಾರಿ ದುಬಾರಿ ಕಣ್ರೀ!

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ವಾಷಿಂಗ್ಟನ್, ಸೆ.5: ಯಾರು ಹೇಳಿದ್ದು ಅಮೆರಿಕದಲ್ಲಿ ಎಲ್ಲವೂ ಸುಭಿಕ್ಷವಾಗಿದೆ. ತನ್ನದೇ ಭವಿಷ್ಯದ ಕೂಸುಗಳಿಂದ ಅಮೆರಿಕ ಸರಕಾರ ಈಗಾಗಲೇ 16,000,000,000,000 ಡಾಲರ್ ಹಣವನ್ನು ಕಸಿದಿದೆ. ಮತ್ತು ಪ್ರತಿ ದಿನವೂ ಇದಕ್ಕೆ ನೂರಾರು ದಶಲಕ್ಷ ಡಾಲರ್ ಸೇರ್ಪೆಡೆಯಾಗುತ್ತಲೇ ಸಾಗುತ್ತದೆ. ವಿಶ್ವದಲ್ಲಿ ಯಾವುದೇ ರಾಷ್ಟ್ರವೂ ಈ ಪ್ರಮಾಣದ ಸಾಲ ಮಾಡಿಕೊಂಡಿಲ್ಲ.

  america-16-trillion-dollar-debt-most-worrisome

  ಇದು ಕಳೆದ 30 ವರ್ಷಗಳಲ್ಲಿ ಅಮೆರಿಕ ಗುಡ್ಡೆ ಹಾಕಿಕೊಂಡಿರುವ ಹಿಮಾಲಯದೆತ್ತರದ ಸಾಲದ ಗುಡ್ಡೆ. ಬಿನ್ ಲಾಡೆನನ ಭಯೋತ್ಪಾದನೆಗಿಂತಲೂ ಇದು ಅಮೆರಿಕವನ್ನು ಭೀಕರಾವಾಗಿ ಅನುಕ್ಷಣವೂ ಕಾಡುತ್ತಿದೆ. ಹಾಗಾಗಿಯೇ ಮಹಾಜನತೆಗೆ ಇದನ್ನು ತಿಳಿಯ ಹೇಳಲು ನ್ಯೂಯಾರ್ಕಿನಲ್ಲಿ ಅಲ್ಲಲ್ಲಿ national-debt ಗಡಿಯಾರಗಳನ್ನು ತೂಗುಹಾಕಲಾಗಿದೆ. ಇದು ಯಾವಾಗ ಸ್ಫೋಟವಾಗುವುದೋ ಎಂಬ ಆತಂಕ ಅಲ್ಲಿನ ಜನಸಾಮಾನ್ಯರದ್ದು.


  ಅಮೆರಿಕದ ರಾಷ್ಟ್ರೀಯ ಸಾಲ ಒಂದು ಲಕ್ಷ ಕೋಟಿ ಡಾಲರ್ ಗಡಿದಾಟಲು ಸುಮಾರು 200 ವರ್ಷ ಹಿಡಿಸಿತ್ತು. 1986ರಲ್ಲಿ ಅದು 2 ಲಕ್ಷ ಕೋಟಿ ಡಾಲರ್ ಗೆ ಜಿಗಿದಿತ್ತು. 1992ರಲ್ಲಿ 4 ಲಕ್ಷ ಕೋಟಿ ಡಾಲರ್ ಆಯಿತು. 2005ರಲ್ಲಿ 8 ಲಕ್ಷ ಕೋಟಿ ಡಾಲರ್ ಗೆ ತಲುಪಿತು. 2012ರ ಸೆ. 4ರಂದು ಅದು 16 ಲಕ್ಷ ಕೋಟಿ ಡಾಲರ್ ಮಾಂತ್ರಿಕ ಸಂಖ್ಯೆಗೆ ಜಿಗಿದಿದೆ.

  ಇದರಿಂದಾಗಿ ಅಮೆರಿಕ ಸರಕಾರವು ಅಸಲು ತೀರಿಸುವುದು ಹಾಗಿರಲಿ ವಾರ್ಷಿಕ 1 ಲಕ್ಷ ಕೋಟಿ ಡಾಲರ್ ಹಣವನ್ನು ಬಡ್ಡಿಗಾಗಿಯೇ ಕಟ್ಟುತ್ತಿದೆ.

  ಮೊಟ್ಟ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರು ಸತತವಾಗಿ ತನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಪ್ರತಿ ವರ್ಷವೂ ಈ ಟ್ರಲಿಯನ್ ಮೊತ್ತದ ಸಾಲ ಬಜೆಟ್ ಅನ್ನು ಮಂಡಿಸಿದ ಕೀರ್ತಿ ಒಬಾಮಾಗೆ ಸಲ್ಲುತ್ತದೆ. ಮುಂದೆ ಇಂತಹ ಒಬಾಮಾಗಳ ಸಂಖ್ಯೆ ಅಧಿಕವಾಗುವುದರಲ್ಲಿ ಅಮೆರಿಕದ ಪ್ರಜೆಗೆ ಯಾವುದೇ ಅನುಮಾನವಿಲ್ಲ.

  2050ರ ವೇಳೆಗೆ ಅಮೆರಿಕದ ಸಾಲ ಪ್ರಮಾಣವು ಅಲ್ಲಿನ GDPಗಿಂತ 400 ಪಟ್ಟು ಅಧಿಕವಾಗುತ್ತದೆ. ಅದಕ್ಕೂ ಮುನ್ನ 2015ರ ವೇಳೆಗೆ ಅಮೆರಿಕದ ರಾಷ್ಟ್ರೀಯ ಸಾಲದ ಮೊತ್ತ 23 ಲಕ್ಷ ಕೋಟಿ ಡಾಲರ್ ಗೆ ತಲುಪಲಿದೆ.

  ಅಮೆರಿಕದ ಸಾಲ ಭಾರಿ ದುಬಾರಿ: ಹೋಗಲಿ ಅಮೆರಿಕದ ಬಳಿ ಎಷ್ಟು ಆಸ್ತಿ ಇದೆ ಅಂದರೆ ಅದು ಕೇವಲ 2.7 ಲಕ್ಷ ಕೋಟಿ ಡಾಲರ್ ಮಾತ್ರ ಇದೆ. ಅಲ್ಲಿಗೆ ಸಾಲದ ಪ್ರಮಾಣ 17.5 ಲಕ್ಷ ಕೋಟಿ ಡಾಲರ್. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಅಮೆರಿಕ ಸರಕಾರವು ಸೆಕೆಂಡಿಗೆ ಒಂದು ಡಾಲರಿನಂತೆ ಸಾಲ ಮರುಪಾವತಿ ಮಾಡುತ್ತಾ ಹೋದರೆ ಈಗಿನ ತನ್ನ ಸಾಲವನ್ನು 4,80,000 ವರ್ಷಗಳ ನಂತರ ಅದು ಸಾಲ ಮುಕ್ತವಾಗಲಿದೆ, OMG!

  ಸರಕಾರವಷ್ಟೇ ಅಲ್ಲ ಅಲ್ಲಿನ ಜನರೂ ಒಂದೊಂದು ಡಾಲರನ್ನು ಖರ್ಚು ಮಾಡುವ ಮುನ್ನ ಸಾವಿರ ಬಾರಿ ಯೋಚಿಸಬೇಕಾಗಿದೆ. ಮತ್ತೆ ಸಾಲ ಮಾಡುವುದು ಅಮೆರಿಕಕ್ಕೆ ನಿಜಕ್ಕೂ ಭಾರಿ ದುಬಾರಿಯಾಗಲಿದೆ. ಇದರಿಂದ ಭಾರತವೂ ಕಲಿಯುವುದು ಬಹಳಷ್ಟಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  US $16 trillion national debt most worrisome. The U.S. government has stolen 16-trillion-dollar from future generations of Americans. If right this moment you went out and started spending one dollar every single second, it would take you more than 31,000 years to spend one trillion dollars.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more