ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೆ ದಿನವೂ ಚಿನ್ನದ ಬೆಲೆ ಮೇಲೆ ಮೇಲೆ

By Srinath
|
Google Oneindia Kannada News

gold-touches-record-high-of-31980-rs-per-10-gms
ನವದೆಹಲಿ, ಸೆ.5: ಚಿನ್ನದ ಬೆಲೆ ಎರಡನೆಯ ದಿನವೂ ಸತತವಾಗಿ ಏರಿಕೆ ಕಂಡಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ ಬಹುತೇಕ 32,000 ರೂಪಾಯಿ ಗಡಿಯ ಹತ್ತಿರ ಬಂದು ತಲುಪಿದೆ. ಇಷ್ಟು ತುಟ್ಟಿ ಬೆಲೆಯಲ್ಲಿ ಚಿನ್ನ ಖರೀದಿಸಲಾಗದೆ ಗ್ರಾಹಕರು ಪರದಾಡುತ್ತಿದ್ದರೆ ಮಾರಾಟಗಾರರು ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ.

ಸುರಕ್ಷಿತ ಹೂಡಿಕೆಯ ಸಾಧನ ಚಿನ್ನ: ಬುಧವಾರದ ಚಿನ್ನದ ಬೆಲೆ 10 ಗ್ರಾಂ ಗೆ 31,980 ರೂಪಾಯಿ ಆಗಿದೆ. ಈ ದಿಢೀರ್ ಸತತ ಬೆಲೆ ಏರಿಕೆಗೆ ಕಾರಣವೇನಪ್ಪಾ ಅಂದರೆ ಖರೀದಿದಾರರದ್ದೇ ಕಾರುಬಾರು ನಡೆದಿರುವುದು.

ಆದರೆ, ಈ ಖರೀದಿದಾರರು ಸಾಮಾನ್ಯ ಚಿಲ್ಲರೆ ಖರೀದಿದಾರರಲ್ಲ. ಬದಲಿಗೆ ಮುಂದೆ ಚಿನ್ನದ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ಈಗಿನಿಂದಲೇ ಒಂದಷ್ಟು ಖರೀದಿಸಿ, ಚಿನ್ನವನ್ನು ಸಂಗ್ರಹಕ್ಕೆ ಸಂಗ್ರಹಿಸುವ ಉಮೇದಿಗೆ ಬಿದ್ದವರು. ಜತೆಗೆ ಷೇರು ಮಾರುಕಟ್ಟೆ ಕಳೆಗುಂದಿರುವುದರಿಂದ ಹೂಡಿಕೆದಾರರು ಚಿನ್ನದ ವಹಿವಾಟಿನತ್ತ ಆಕರ್ಷಿತರಾಗಿರುವುದೂ ಇದಕ್ಕೆ ಕಾರಣವಾಗಿದೆ.

ಆದರೆ ಬೆಳ್ಳಿಯ ಬೆಲೆ ಇಂದು ಹೆಚ್ಚಾಗಲಿಲ್ಲ. ಬದಲಿಗೆ ಕೆಜಿಗೆ 200 ರೂಪಾಯಿ ಕಡಿಮೆಯಾಗಿದೆ. ಇದರಿಂದ ಒಂದು ಕೆಜಿ ಬೆಳ್ಳಿ ಈಗ 60 ಸಾವಿರ ರೂಪಾಯಿಗೆ ಸಿಗುವಂತಾಗಿದೆ. ಸೆ. 1 ರಂದು ಚಿನ್ನದ ಬೆಲೆ 10 ಗ್ರಾಂಗೆ 31,725 ರೂ.ನಲ್ಲಿ ನಿಂತಿತ್ತು. ಇನ್ನು, ಬೆಳ್ಳಿಯ ಬೆಲೆ ಕೆಜಿಗೆ 60,200 ರೂ.ಗೆ ತಲುಪಿತ್ತು.

English summary
Just when the prices were hovering around the Rs 32,000 mark gold touches record high of R 31980 per 10 gms Sept 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X