ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕೆ ಅಸ್ತು

By Mahesh
|
Google Oneindia Kannada News

Hyderabad-Karnataka Bill
ನವದೆಹಲಿ, ಸೆ.4: ಹೈದರಾಬಾದ್-ಕರ್ನಾಟಕ ಪ್ರದೇಶದ ಅರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಕಲಂ 371 ತಿದ್ದುಪಡಿ ಪ್ರಸ್ತಾವನೆಗೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಚಿವ ಸಂಪುಟ ಮಂಗಳವಾರ(ಸೆ.4) ಒಪ್ಪಿಗೆ ನೀಡಿದೆ.

ಸುಮಾರು 30 ವರ್ಷಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಾದ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರೆಯಲಿದೆ.

ಕಲ್ಲಿದ್ದಲ್ಲು ಗಣಿ ಗದ್ದಲದಲ್ಲಿ ತೊಡಗಿರುವುದರಿಂದ ಸಂಸತ್ ಕಲಾಪದಲ್ಲಿ ಈ ಮಹತ್ವದ ಮಸೂದೆ ಮಂಡನೆ ಮಾಡಲು ಸಾಧ್ಯವಾಗಿಲ್ಲ. ಸೆ.7ಕ್ಕೆ ಮುಂಗಾರು ಅಧಿವೇಶನ ಮುಗಿಯಲಿದ್ದು, ಅಷ್ಟರಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ.

ಸೌಲಭ್ಯಗಳು: ಸಂವಿಧಾನ ಕಲಂ 371 ತಿದ್ದುಪಡಿಗೆ ಒಳಪಟ್ಟಿರುವ ತೆಲಂಗಾಣ, ವಿದರ್ಭ, ಗೋವಾ ಹಾಗೂ ಇತರೆ ಭಾಗಗಳು ಪಡೆಯುತ್ತಿರುವ ವಿಶೇಷ ಸೌಲಭ್ಯ ಹಾಗೂ ಮೀಸಲಾತಿಗಳು ಈಗ ಹೈ-ಕ ಭಾಗಕ್ಕೂ ಸಿಗಲಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಮಂದಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿ ಸಿಗಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣಕಾಸು ನೆರವು ಸಿಗಲಿದೆ. ಕೇಂದ್ರದಿಂದ ಕೆಲವು ಯೋಜನೆಗೆ ವಿಶೇಷ ಪ್ಯಾಕೇಜ್ ಸಿಗಲಿದೆ,

ರಾಜ್ಯದ ಕೆಎಚ್ ಮುನಿಯಪ್ಪ, ಸಂಸದ ಧರ್ಮಸಿಂಗ್, ಎಚ್ ವಿಶ್ವನಾಥ್, ಧೃವ ನಾರಾಯಣ್ಣ್, ಮಲ್ಲಿಕಾರ್ಜುನ ಖರ್ಗೆ, ಅನಿಲ್ ಲಾಡ್ ಮುಂತಾದವರು ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ಭೇಟಿ ಮಾಡಿ, ಮಸೂದೆ ಮಂಡನೆ ಬಗ್ಗೆ ಚರ್ಚಿಸಿದರು.

ಈ ಅಧಿವೇಶನದಲ್ಲಿ ಮಸೂದೆ ಮಂಡನೆ ಹಾಗೂ ಅನುಮೋದನೆ ಸಾಧ್ಯವಾಗದಿದ್ದರೆ, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ದೊರಕಿಸಿಕೊಡುವ ಭರವಸೆಯನ್ನು ಚಿದಂಬರಂ ನೀಡಿದರು ಎನ್ನಲಾಗಿದೆ.

* ಡಾ. ನಂಜುಡಪ್ಪ ಸಮಿತಿ ವರದಿಯನ್ನು ಹಂತ-ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ.
* ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಯಾಗಿದೆ.
* ಸಾರಿಗೆ ವ್ಯವಸ್ಥೆ ಸುಧಾರಣೆಗೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ರಚಿಸಲಾಗಿದೆ.
* ಸಿಇಟಿ ಸೆಲ್‌ನ್ನು ಗುಲ್ಬರ್ಗದಲ್ಲಿ ಆರಂಭಿಸಲಾಗಿದೆ. ಆದರೆ ಇಲ್ಲಿ ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

* ವಿಧಾನಸೌಧದಲ್ಲಿಯೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗಲೂ ಈ ಭಾಗದ ಜಿಲ್ಲೆಗಳಿಗೆ ವಿಶೇಷ ಮೀಸಲು ಲಭ್ಯವಾಗುತ್ತದೆ.
* ಹೈ-ಕ ವಿಭಾಗದ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅದೇ ಜಿಲ್ಲೆಯವರು ಭರ್ತಿಯಾಗಲು ಅವಕಾಶ ಇರುತ್ತದೆ.
* ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಹಂತದ ಶಿಕ್ಷಣಕ್ಕೆ ಈ ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲು ನಿರ್ಧಾರವಾಗುತ್ತದೆ.

ಬಳ್ಳಾರಿಯ ಜನರಿಗೆ ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಮತ್ತು ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕಲ್ಪಿಸುವುದಲ್ಲದೆ ಈ ಪ್ರದೇಶಗಳ ಮೂಲಸೌಲಭ್ಯಗಳ ಅಭಿವದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣದ ಹಂಚಿಕೆಯ ವ್ಯವಸ್ಥೆ ಮಾಡಲಾಗುತ್ತದೆ.

English summary
UPA cabinet today approved to Hyderabad Karnataka Bill on amendment to Article 371 of Constitution. Same bill likely to be tabled and passed in on the ongoing monsoon session which concludes on Sept.7. If the bill passed it will confer special status to Hyderabad-Karnataka(H-K)region
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X