ಇಂಟರ್ ನೆಟ್ ಮೂಲಕ Voter ID ಪಡೆಯುವುದು ಹೇಗೆ?

Posted By:
Subscribe to Oneindia Kannada
Karnataka voters can get voter ID online
ಬೆಂಗಳೂರು, ಸೆ. 4: ಮತದಾರರು ಮತ್ತು ರಾಜ್ಯದ ಚುನಾವಣೆ ಆಯೋಗದ ಮಧ್ಯೆ ನೇರ ಸಂಪರ್ಕ ಸೇತುವೆಯೊಂದು ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಮುಖ್ಯವಾಗಿ ಅರ್ಹರು ಮತದಾರರ ಗುರುತಿನ ಚೀಟಿ ಅಂದರೆ Voter Identity Card ಅನ್ನು ಪಡೆಯಬಹುದಾಗಿದೆ.

ಅದು ಹೇಗೆ ಸಾಧ್ಯವಾಗಲಿದೆ ಅಂದರೆ ಎಲ್ಲಕ್ಕಿಂತ ಮುಖ್ಯವಾಗಿ ಅರ್ಜಿದಾರರಿಗೆ ಇಂಟರ್ ನೆಟ್ ಸೌಲಭ್ಯ ಲಭ್ಯವಿರಬೇಕು. 18 ವರ್ಷ ವಯಸ್ಸು ದಾಟಿದ ಯಾವುದೇ ಭಾರತೀಯ ಪ್ರಜೆ ಮತದಾನ ಫೋಟೋಸಹಿತ ಗುರುತಿನ ಚೀಟಿಯನ್ನು Electoral Photo-Identity Card (EPIC) ಪಡೆಯಬಹುದಾಗಿದೆ. ಅಂದಹಾಗೆ, ಇಂತಹ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕಕ್ಕೆ ಪ್ರಾಪ್ತಿಯಾಗಿದೆ.

ಇದು ಹೊಸದಾಗಿ ಮತದಾರರ ಗುರುತಿನ ಚೀಟಿ ಪಡೆಯುವುದಕ್ಕಷ್ಟೇ ಸೀಮಿತವಾಗುವುದಿಲ್ಲ. ಬದಲಿಗೆ ಈಗಾಗಲೇ Voter ID ಹೊಂದಿರುವವರು ವಿಳಾಸ ಬದಲಾಗಿದ್ದಲ್ಲಿ, ಹೆಸರಿನಲ್ಲಿ ವ್ಯತ್ಯಾಸವಿದ್ದು ಸರಿಪಡಿಸುವುದಿದ್ದರೆ, ವಯಸ್ಸಿನ ಬದಲಾವಣೆ ಮುಂತಾದ ಬದಲಾವಣೆಗಳಿಗೂ ಇಲ್ಲಿ ಅವಕಾಶವಿದೆ. ಅರ್ಹ ಮತದಾರರನ್ನು ಒಂದು ತಿಂಗಳ ಅವಧಿಯಲ್ಲಿ ಹೊಸ ಕಾರ್ಡು ಕೈಸೇರಲಿದೆ.

ಅರ್ಜಿ ಸಲ್ಲಿಸಿದ ಬಳಿಕ ತಮ್ಮ Voter ID ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ಅರ್ಜಿದಾರರಿಗೆ ತಿಳಿಯುವಂತಾಗಲು ಮೊಬೈಲಿನಲ್ಲಿ ಎಸ್ಎಂಎಸ್ ಮೂಲಕ ಮಾಹಿತಿ ರವಾನೆಯಾಗುತ್ತಿರುತ್ತದೆ.

ಆದ್ಯವಾಗಿ ಗಮನಿಸಿ: ವಿಳಾಸ ಮತ್ತು ಗುರುತಿನ ದಾಖಲಾತಿಯನ್ನು ನೇರವಾಗಿ ಒದಗಿಸುವುದು ಕಡ್ಡಾಯ. ಇದನ್ನೂ ಅಂತರ್ಜಾಲದಲ್ಲೇ ಹರಿಯಬಿಡುತ್ತೇವೆ ಅಂದರೆ ಅದಾಗದು ಎನ್ನುತ್ತದೆ ಆಯೋಗ. ಈ ವಿಷಯದಲ್ಲಿ ಸೋಂಭೇರಿತನ ತೋರದೆ, ಆದ್ಯ ಕರ್ತವ್ಯವೆಂದು ಬಗೆದು ಸೂಕ್ತ ದಾಖಲಾತಿಗಳನ್ನು ಆಯೋಗಕ್ಕೆ ತಲುಪಿಸುವ ಹೊಣೆಗಾರಿಕೆ ನಿಮ್ಮದಾಗಿರಲಿ.

ಇದಕ್ಕಾಗಿ ನಿವೇನೂ ಕಬ್ಬನ್ ಪಾರ್ಕಿನಲ್ಲಿರುವ ಆಯೋಗದ ಕಚೇರಿಗೇ ಹೋಗಬೇಕು ಅಂತೇನೂ ಇಲ್ಲ. ನಿಮ್ಮ ಸಮೀಪದಲ್ಲೇ ಇರುವ ಆಯೋಗದ ಕಚೇರಿಗೆ ಹೋಗಿ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿ ಬನ್ನಿ.

ಬೂತ್-ಮಟ್ಟದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ದೈಹಿಕವಾಗಿಯೂ ಒಮ್ಮೆ ತಪಾಸಣೆ ನಡೆಸಿ, ಅನುಮೋದನೆಗೆ ಕಳಿಸುತ್ತಾರೆ. ಹಾಗಾಗಿ ಖುದ್ದಾಗಿ ನೀವೇ ಕಚೇರಿಗೆ ಹೋಗಿಬರುವುದು ಒಳಿತು.

ಇಲ್ಲ ದಾಖಲೆಗಳನ್ನು ಯಾರ ಕೈಯಲ್ಲಾದರೂ ಕಳಿಸಿಕೊಡುತ್ತೇನೆ ಅಂದರೆ ಆಯೋಗವು ಅದಕ್ಕೂ ಆಗದು ಎನ್ನುತ್ತದೆ. ಇದೆಲ್ಲ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಒಂದೇ ತಿಂಗಳಲ್ಲಿ ನಿಮ್ಮ Voter Identity Card ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತದೆ.

ಅಷ್ಟೇ ಅಲ್ಲ. ಈಗಾಗಲೇ ನೋಂದಣಿ ಮಾಡಿಸಿರುವವರು ತಮ್ಮ ಹೆಸರು ಇದೆಯಾ ಎಂಬುದನ್ನೂ ನೋಡಿಕೊಳ್ಳಬಹುದು. ಯಾವುದಕ್ಕೇ ಆಗಲಿ ಒಮ್ಮೆ ಈ ವೆಬ್ಬಾಗಿಲನ್ನು ತಟ್ಟಿ: http://www.voterreg.kar.nic.in/

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka voter can get voter ID online. People above 18 years can apply for Electoral Photo-Identity Card (EPIC) and apply online. Karnataka is the first state in the country to go online for voter IDs. Just log in: http://www.voterreg.kar.nic.in/
Please Wait while comments are loading...