ಬಂಧಿತ ಉಗ್ರರಿಗೆ ಪಾಕಿಸ್ತಾನದ ISI ಸಂಪರ್ಕವೂ ಇತ್ತು

Bangalore CCB arrested terrorists had links with Pakistan ISI,
ಬೆಂಗಳೂರು, ಸೆ. 3: ರಾಜಧಾನಿಯ ಸಿಸಿಬಿ ಪೊಲೀಸರ ಉಗ್ರ ಬೇಟೆಯಲ್ಲಿ ನಿರೀಕ್ಷೆಯಂತೆ ಪಾಕಿಸ್ತಾನದ ಹೆಸರೂ ಕೇಳಿಬಂದಿದೆ. 'ಪಾಕಿಸ್ತಾನದ ISI ಅಧಿಕಾರಿಗಳನ್ನು ಭೇಟಿ ಮಾಡಿದ್ದೆವು' ಎಂದು ಬಂಧಿತ ಉಗ್ರರ ಪೈಕಿ ಒಬ್ಬ ಪಾಕ್ ಕೈವಾಡವನ್ನು ಬಿಚ್ಚಿಟ್ಟಿದ್ದಾನೆ.

ಐಎಸ್‌ಐ ಅಧಿಕಾರಿಗಳ ಬಲೆಯಲ್ಲಿ: ಆರೋಪಿ ಅಬ್ದುಲ್ ಹಕೀಂ ಜಮಾದಾರ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ISI ಕೈವಾಡದ ಬಗ್ಗೆ ಬೆಳಕು ಚೆಲ್ಲಿದ್ದಾನೆ. ಇಡೀ ಪ್ರಕರಣದ ರೂವಾರಿ ಹುಜಿ ಕಮಾಂಡರ್ ಜಾಕೀರ್ @ ಉಸ್ತಾದ್ ಸೂಚನೆಯ ಮೇರೆಗೆ ಇವರಿಬ್ಬರೂ ಐಎಸ್‌ಐ ಅಧಿಕಾರಿಗಳ ಬಲೆಗೆ ಸಿಕ್ಕಿಕೊಳ್ಳುತ್ತಾರೆ.

'ಹುಬ್ಬಳ್ಳಿಯ ಡಾ. ಜಾಫರ್ ಇಕ್ಬಾಲ್ ಸೊಲ್ಲಾಪುರ ಎಂಬ ಮತ್ತೊಬ್ಬ ಬಂಧಿತ ಆರೋಪಿಯ ಜತೆಗೂಡಿ ಭಾರತೀಯ ಪಾಸ್‌ಪೋರ್ಟ್ ಬಳಸಿ ಇರಾನ್‌ಗೆ ಭೇಟಿ ನೀಡಿದೆವು. ಅಲ್ಲಿಂದ ಅಕ್ರಮವಾಗಿ ಪಾಕ್‌ಗೆ ನುಸುಳಿದೆವು.

ಕರಾಚಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ (ಐಎಸ್‌ಐ) ಅಧಿಕಾರಿಗಳಾದ ಅಬ್ದುಲ್ ವಹಾಬ್, ಹಮೀದ್ ಮತ್ತು ಮುಸ್ತಫಾರನ್ನು ಭೇಟಿ ಮಾಡಿದೆವು' ಎಂದು ಜಮಾದಾರ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿವರಿಸಿದ್ದಾನೆ.

ISI ಯಾತ್ರೆಯ ವಿವರ:
'2011ರ ಡಿಸೆಂಬರ್ 11ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ Air Arabia ವಿಮಾಣದ ಮೂಲಕ ಇರಾನ್‌ಗೆ ಇಬ್ಬರೂ ಹೋಗಿದ್ದರು. ಇಮಾಂ ಫಾತೀಮಾ ದರ್ಗಾಕ್ಕೆ ತೆರಳಲು ಧಾರ್ಮಿಕತೆ ಹೆಸರಿನಲ್ಲಿ ಒಂದು ತಿಂಗಳ ವೀಸಾ ಪಡೆಯುತ್ತಾರೆ. ಅಲ್ಲಿ ಎಂಟು ದಿನ ಇದ್ದರು.

ಜಾಕೀರ್ ಸಲಹೆಯಂತೆ ಪಾಕಿಸ್ತಾನದ ಗಡಿ ನೌಬಂದಿಯಾನ್‌ಗೆ (ಗೋಧಾವರ್ ಪಟ್ಟಣ) ಹೋಗುತ್ತಾರೆ. ಟ್ಯಾಂಕರ್‌ನಲ್ಲಿ ಬಚ್ಚಿಟ್ಟುಕೊಂಡು ಕಳ್ಳಮಾರ್ಗದಲ್ಲಿ ಪಾಕಿಸ್ತಾನಕ್ಕೆ ತೆರಳಲು ಇರಾನ್‌ ಹಾಗೂ ಪಾಕಿಸ್ತಾನ ನಡುವೆ ಸಂಚರಿಸುವ ಟ್ಯಾಂಕರ್‌ಗಳ ಮಾಲೀಕರಿಗೆ ತಲಾ ನಾಲ್ಕು ಸಾವಿರ ಲಂಚ ಸಹ ನೀಡುತ್ತಾರೆ.

ಹೀಗೆ ಪಾಕಿಸ್ತಾನಕ್ಕೆ ತೆರಳುವ ಅವರು ಕರಾಚಿಯಲ್ಲಿ ಪಾಕಿಸ್ತಾನದ ಐಎಎಸ್‌ನ ಉಪ ನಿರ್ದೇಶಕ ಅಬ್ದುಲ್‌ ವಹಾಬ್‌, ಹಿರಿಯ ನಿರ್ದೇಶಕರುಗಳಾದ ಹಮೀದ್‌ ಹಾಗೂ ಮುಸ್ತಫಾ ಅವರನ್ನು ಭೇಟಿ ಮಾಡುತ್ತಾರೆ.

'ಮೊದಲಿಗೆ ಅವರನ್ನು ಭಾರತದ ಮಾಹಿತಿದಾರರೆಂದು ಶಂಕಿಸಿದ ISI ಅಧಿಕಾರಿಗಳು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಹದಿನೈದು ದಿನ ಅವರನ್ನು ಹಿಂಸೆಗೀಡುಮಾಡುತ್ತಾರೆ. ಕೊನೆಗೆ ಬಂಧಿತರು ಭಾರತದ ಮಾಹಿತಿದಾರರು ಅಲ್ಲವೆಂದು ಅವರಿಗೆ ಮನನವಾಗುತ್ತದೆ. ಆಗ, ಭಾರತದಲ್ಲಿ ಐಎಸ್‌ಐ ಮಾಹಿತಿದಾರರಾಗಿ ಕೆಲಸ ಮಾಡಿದರೆ ಹೆಚ್ಚಿನ ಹಣ ನೀಡುವುದಾಗಿ ಇಬ್ಬರಿಗೂ ಪ್ರಲೋಭವೊಡ್ಡುತ್ತಾರೆ.

ಈ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಉಗ್ರ ತಂಡವನ್ನು ರಚಿಸುವ ಮತ್ತು ಅದಕ್ಕೆ ಅಗತ್ಯವಾದ ಆರ್ಥಿಕ ನೆರವು ಪಡೆಯುವ ಬಗ್ಗೆ ಮಾತುಕತೆ ನಡೆಸುತ್ತಾರೆ. ಐಎಎಸ್‌ನ ಪ್ರಮುಖರಿಂದ ನೆರವಿನ ಭರವಸೆ ಪಡೆದು 15 ದಿನಗಳ ನಂತರ ಮತ್ತೆ ಇರಾನ್‌ ಮಾರ್ಗವಾಗಿ ಭಾರತಕ್ಕೆ ಈ ಇಬ್ಬರು ಉಗ್ರರು ಆಗಮಿಸುತ್ತಾರೆ.

ತಮ್ಮ ಪಾಕಿಸ್ತಾನ ಯಾತ್ರೆಯ ನಂತರ ಅಬ್ದುಲ್‌ ಹಕೀಂ ಬೆಂಗಳೂರಿಗೆ ಹಿಂತಿರುಗಿದರೆ, ಡಾ. ಜಾಫ‌ರ್‌ ಹುಬ್ಬಳ್ಳಿಗೆ ತೆರಳುತ್ತಾನೆ. ಇಬ್ಬರೂ ಈಗಾಗಲೇ ರಚನೆಯಾಗಿದ್ದ ಪ್ರತ್ಯೇಕ ತಂಡಗಳ ಮೂಲಕ ತಮ್ಮ ಷಡ್ಯಂತ್ರವನ್ನು ಕಾರ್ಯರೂಪಕ್ಕೆ ಇಳಿಸಲು ಮುಂದಾಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+