• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫುಟ್ಬಾಲ್ : ಭಾರತಕ್ಕೆ ಹ್ಯಾಟ್ರಿಕ್ ನೆಹರೂ ಕಪ್

By Mahesh
|

ನವದೆಹಲಿ, ಸೆ.3: ಹಾಲಿ ಚಾಂಪಿಯನ್ ಭಾರತ ಭಾನುವಾರ ನಡೆದ ನೆಹರೂ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಅಂತಿಮ ಹಣಹಣಿಯಲ್ಲಿ ಬಲಿಷ್ಠ ಕ್ಯಾಮರೂನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-5 ಅಂತರದಿಂದ ಮಣಿಸಿ ಸತತ ಮೂರನೆ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಸಂಭ್ರಮದಿಂದ ಕುಣಿದಾಡಿದೆ.

ಜವಹಾರ್‌ಲಾಲ್ ಸ್ಟೇಡಿ ಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿತ್ತು. ಹೆಚ್ಚುವರಿ ಅವಧಿಯಲ್ಲೂ ಯಾವುದೇ ಗೋಲು ದಾಖಲಾಗದೆ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತ್ತು. ಆ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿತು.

90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ತಲಾ 2 ಗೋಲು ದಾಖಲಿಸಿತ್ತು. ಮತ್ತೆ ನೀಡಲಾದ ಹೆಚ್ಚುವರಿ 31 ನಿಮಿಷಗಳಲ್ಲೂ ಗೋಲು ಬರಲಿಲ್ಲ. ಹೀಗಾಗಿ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಪರ ರಾಬಿನ್ ಸಿಂಗ್, ಸುನೀಲ್ ಚೆಟ್ರಿ, ಡೆಂಝಿಲ್ ಫ್ರಾಂಕೊ , ಮೆಹ್ತಾಬ್ ಹುಸೈನ್ ಮತ್ತು ಕ್ಲಿಲ್ಫರ್ಡ್ ಮಿರಾಂದ ಚೆಂಡನ್ನು ಗುರಿ ತಲುಪಿಸಿ ಭಾರತಕ್ಕೆ ಮೂರನೆ ಬಾರಿ ಟ್ರೋಫಿ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು.

ಆದರೆ ಕ್ಯಾಮರೂನ್ ಪರ ಅಶು ತಾಂಬೆ, ಆಸ್ಮಿಲಾ ಬಾಬಾ, ಪೌಲ್ ಬೆಬೈ ಮತ್ತು ಕಿಂಗು ಎಂಪೊಂಡಾ ಯಶಸ್ಸು ಸಾಧಿಸಿದರು. ಭಾರತ ಈ ಹಿಂದೆ 2007 ಮತ್ತು 2009ರಲ್ಲಿ ನೆಹರೂ ಕಪ್ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಂಡಿತ್ತು.

ಟೂರ್ನಿಯಲ್ಲಿ ಭಾರತ ತಂಡ ತಾನಾಡಿದ 4 ಪಂದ್ಯಗಳಿಂದ 2 ಜಯ, ತಲಾ ಒಂದು ಡ್ರಾ ಮತ್ತು ಸೋಲಿನಿಂದ 7 ಅಂಕ ಸಂಪಾದಿಸಿದರೆ, ಕೆಮರೂನ್ ತಂಡ 4 ಪಂದ್ಯಗಳಿಂದ 3 ಜಯ ಒಂದು ಡ್ರಾ ಸೇರಿದಂತೆ 10 ಅಂಕ ಸಂಪಾದಿಸಿ -ಫೈನಲ್ ಪ್ರವೇಶಿಸಿತ್ತು. ಈಗಾಗಲೇ ಫೀಫಾ ಶ್ರೇಣಿಯಲ್ಲಿ ಇತಿಹಾಸದಲ್ಲೇ ಕನಿಷ್ಠ 168ನೇ ಸ್ಥಾನಕ್ಕೆ ಕುಸಿದಿರುವ ಭಾರತ ತಂಡ ಈ ಗೆಲುವಿನಿಂದ ತನ್ನ ಸ್ಥಾನ ಉತ್ತಮಪಡಿಸಿಕೊಳ್ಳಲಿದೆ.

ವಿಶ್ವಕಪ್ ನಲ್ಲಿ ಆಡಿದ ಅನುಭವ ಹೊಂದಿರುವ ಕೆಮರೂನ್ ತಂಡ ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿತ್ತು, ಲೀಗ್ ಹಂತದಲ್ಲಿ ಭಾರತದ ವಿರುದ್ಧ ಸುಲಭ ಜಯ ಕೂಡಾ ದಾಖಲಿಸಿತ್ತು. ಭಾರತಕ್ಕೆ ಜಯ ಅಷ್ಟು ಸುಲಭವಾಗಿರಲಿಲ್ಲ. ಆಟಗಾರರು ಸಂಘಟಿತವಾಗಿ ಹೋರಾಟ ನಡೆಸಿದ್ದು ಕೊನೆಗೂ ಫಲ ನೀಡಿದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
India showed nerves of steel to overcome Cameroon 5-4 via penalty shootout and retain the Nehru Cup football tournament as coach Wim Koevermans' first assignment in the hot seat ended in glory,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X