ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಪಾದವೇ ಗಟ್ಟಿ

ಜನಮತ ಸಮೀಕ್ಷೆಯ ಪ್ರಕಾರ ಯಡಿಯೂರಪ್ಪ ಅವರೇನಾದರೂ ಪಕ್ಷ ತೊರೆದರೆ ಬಿಜೆಪಿಗೆ ಶೇ. 80ಕ್ಕೂ ಹೆಚ್ಚು ಹಾನಿಯಾಗಲಿದೆ. ಅದಕ್ಕಿಂತ ಗಮನಾರ್ಹ ಸಂಗತಿಯೆಂದರೆ ಬಿಜೆಪಿ ಮತದಾರರಲ್ಲಿ ಶೇ. 1/3 ಮಂದಿ ಯಡಿಯೂರಪ್ಪನವರು ಹೊಸ ಪಕ್ಷ ಸ್ಥಾಪಿಸುವುದು ಒಳಿತು ಎಂದಿದ್ದಾರೆ. ಇನ್ನು ಯಡಿಯೂರಪ್ಪನವರನ್ನು ಪಕ್ಷದಲ್ಲಿ ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಶೇ. 50ರಷ್ಟು ಮಂದಿ ನೊಂದುಕೊಂಡು ಹೇಳಿದ್ದಾರೆ.
ಸಮೀಕ್ಷೆಯ ವಿವರ:
ಅಕಸ್ಮಾತ್ ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೈ ಮೇಲಾಗಲಿದೆಯಂತೆ. ಬಿಜೆಪಿ ಈಗಿರುವ 19 ಸ್ಥಾನಗಳಲ್ಲಿ ಏಳನ್ನು ಕಳೆದುಕೊಳ್ಳಲಿದೆ. ಕಾಂಗ್ರೆಸ್ ಹೆಚ್ಚುವರಿಯಾಗಿ 5 ಮತ್ತು ಜೆಡಿಎಸ್ ಹೆಚ್ಚುವರಿ 2 ಸ್ಥಾನ ಗಳಿಸಲಿದೆ.
ಪ್ರಸ್ತುತ, ರಾಜ್ಯ ವಿಧಾನಸಭೆಯು ಚುನಾವಣೆಯ ಹೊಸ್ತಿಲಲ್ಲಿದೆ. ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರವೇ ಬಿಜೆಪಿಯನ್ನು ಕಾಡುವ ವಿಷಯವಾಗಲಿದೆ ಎಂಬುದು ಸಮೀಕ್ಷೆಯ ಸಾರ. ಶೇ. 60ರಷ್ಟು ಮಂದಿ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ರೋಸಿಹೋಗಿದ್ದಾರೆ. ಶೇ. 50ರಷ್ಟು ಮಂದಿ ಕಾಂಗ್ರೆಸ್ ಸಹ ಭ್ರಷ್ಟ ಪಕ್ಷ ಎಂದಿದ್ದಾರೆ.
ಇನ್ನು ಗುಜರಾತಿನತ್ತ ಹೊರಟರೆ ನರೇಂದ್ರ ಮೋದಿಯೇ ದೇಶದ ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ ಎಂದು ಶೇ. 85ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಶೇ. 85ರಷ್ಟು ಮಂದಿ ಮೋದಿ ಅತ್ಯುತ್ತಮ ಸಿಎಂ ಎಂದಿದ್ದಾರೆ. ಡಿಸೆಂಬರಿನಲ್ಲಿ ನಡೆಯಲಿರುವ ಗಿಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 120 ಸ್ಥಾನ ಗೆಲ್ಲಲಿದೆ. 16 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಳ್ಳಲಿದೆ.












Click it and Unblock the Notifications