ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪ ಸಾಬೀತಾದರೆ ಸೂರಿಗೆ 30 ವರ್ಷ ಜೈಲು

By Mahesh
|
Google Oneindia Kannada News

NRI arrested, US
ಬೆಂಗಳೂರು, ಆ.24: ಅಮೆರಿಕದ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ವಂಚನೆ ಆರೋಪದ ಮೇಲೆ ಬಂಧಿಸಲಾಗಿದೆ. ಲೋನ್ ಪಡೆಯಲು ಬಯಸಿದ್ದ ಗ್ರಾಹಕರೊಬ್ಬರಿಗೆ ಅನುಕೂಲಕರವಾಗುವಂತೆ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪ ಹೊತ್ತಿದ್ದಾರೆ. ಆರೋಪಿ ಸತೀಶ್ ಸೂರಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಅಮೆರಿಕ್ದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ದಾಖಲೆಗಳಲ್ಲಿ ದೋಷ ಕಂಡು ಬಂದಿದೆ ಎಂದು ಯುಎಸ್ ಅಟಾರ್ನಿ ಜೇನ್ ಡೇವಿಡ್ ಹೇಳಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿರುವ ಬ್ಯಾಂಕ್ ನಲ್ಲಿ ಲೋನ್ ಆಫೀಸರ್ ಆಗಿರುವ ಸೂರಿ, ಬೇಕಂತಲೇ ಸುಳ್ಳು ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಿದ್ದಾರೆ. ಸಾಲಗಾರರ ಜೊತೆ ಡೀಲ್ ಕುದುರಿಸಿಕೊಂಡು ಕಮೀಷನ್ ಲೆಕ್ಕದಲ್ಲಿ ಹಣ ಹೊಡೆದಿದ್ದಾರೆ. ಸುಮಾರು 8 ಕಟ್ಟಡಗಳನ್ನು ಬ್ಯಾಂಕಿಗೆ ಅಡಮಾನ ಇಡುವ ಪ್ರಕರಣವೊಂದರ ಲಾಭ ಪಡೆದು ಸುಳ್ಳು ದಾಖಲೆ ಸಲ್ಲಿಸಿದ್ದಾರೆ. 2005 ರಿಂದ 2008ರ ಅವಧಿಯಲ್ಲಿ ನಡೆದಿರುವ ಈ ಕೃತ್ಯದಿಂದ ಬ್ಯಾಂಕಿಗೆ ಭಾರಿ ನಷ್ಟವಾಗಿದೆ.

ಸತೀಶ್ ಸೂರಿ ನೀಡಿದ ದಾಖಲಾತಿಗಳನ್ನು ಅವರ ಮೇಲಿನ ಅಧಿಕಾರಿಗಳು ಹೆಚ್ಚಾಗಿ ಪರಿಶೀಲಿಸದೆ ಅಡಮಾನಕ್ಕೆ ಒಪ್ಪಿಗೆ ಸೂಚಿಸಿ ಸಾಲ ನೀಡಿದ್ದಾರೆ. ಈ ವ್ಯವಹಾರದಲ್ಲಿ 20 ಮಿಲಿಯನ್ ಯುಎಸ್ ಡಾಲರ್ ಹಣ ಬ್ಯಾಂಕ್ ನಿಂದ ಹೊರ ಹೋಗಿದೆ.

ಈ ಆರೋಪ ಸಾಬೀತಾದರೆ ಸೂರಿ ಕನಿಷ್ಠ ಪಕ್ಷ 30 ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಜೈಲು ಶಿಕ್ಷೆ ಜೊತೆಗೆ ಬ್ಯಾಂಕ್ ನೀಡಿದ ಸಾಲದ ಮೊತ್ತ 20 ಮಿಲಿಯನ್ ಡಾಲರ್ ಕೂಡಾ ಸೂರಿ ತನ್ನ ಜೇಬಿನಿಂದ ತೆಗೆದು ಪಾವತಿಸಬೇಕಾಗುತ್ತದೆ. ಇದಲ್ಲದೆ, ಕೋರ್ಟಿನ ಖರ್ಚುವೆಚ್ಚ ಸೇರಿ ಸುಮರು 2,200 ವಿಶೇಷ ದಂಡ ಕೂಡಾ ಸೂರಿಗೆ ಕಾದಿದೆ.

English summary
Satish Suri, an Indian employee at a bank in the U.S. was arrested yesterday on charges of bank fraud, false statements on loans, and false statements to HUD (the Department of Housing and Urban Development) on a loan insured by the department, said Zane David Memeger , United States Attorney in a statement, reports PTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X