ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನ್ ಮುಖ್ಯಸ್ಥರಾಗಿರುವ ನ್ಯಾಟ್ ಗ್ರಿಡ್ ವೈಶಿಷ್ಟವೇನು?

By Srinath
|
Google Oneindia Kannada News

more-about-national-intelligence-grid-chief-raghu-raman
ನವದೆಹಲಿ, ಆ. 24: ಈ ರಾಷ್ಟ್ರೀಯ ಗುಪ್ತಚರ ಸಂಸ್ಥೆ (National Intelligence Grid-Natgrid-ನ್ಯಾಟ್ ಗ್ರಿಡ್) ಇದೆಯಲ್ಲ, ಅದರ ಮುಖ್ಯಸ್ಥ ಪಿ. ರಘು ರಾಮನ್ ಅವರು ಪ್ರಧಾನಿಗಿಂತ ಹತ್ತಾರು ಪಟ್ಟು ಅಂದರೆ ತಿಂಗಳಿಗೆ 10 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಹಾಗಾದರೆ ಅದಿನ್ನೆಂತ ಸಂಸ್ಥೆಯಿರಬಹುದು ಎಂದು ತಿಳಿಯುವ ಕುತೂಹಲವೇ?

ಈ ಸಂಸ್ಥೆ ನ್ಯಾಟ್ ಗ್ರಿಡ್ ಇದೆಯಲ್ಲ, ಇದು ದೇಶದ ರಕ್ಷಣೆಯ ವಿಷಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿದೆ. ಹಾಗೆ ನೋಡಿದರೆ ದೇಶದಲ್ಲಿ ಗುಪ್ತಚರಕ್ಕೆ ಸಂಬಂಧಿಸಿದಂತೆ 21 ಬಹುಮುಖ್ಯ ಸಂಸ್ಥೆಗಳಿವೆ. ಅವಷ್ಟೂ ಸಂಸ್ಥೆಗಳಿಂದ ಬರುವ ಮಾಹಿತಿ ಕೊನೆಗೆ ಐಕ್ಯವಾಗುವುದು ಈ ನ್ಯಾಟ್ ಗ್ರಿಡ್ ಸಂಸ್ಥೆಯಲ್ಲೇ. ಅಷ್ಟೊಂದು ಪ್ರಮುಖ ಸ್ಥಾನವನ್ನು ಈ ಸಂಸ್ಥೆಗೆ ಕಲ್ಪಿಸಲಾಗಿದೆ.

ಭಾರತದ ಗುಪ್ತಚರ ಮೂಲಸೌಕರ್ಯ ಛಿದ್ರಗೊಂಡಿದ್ದಂತಹ ಸಂಕಷ್ಟ ಕಾಲದಲ್ಲಿ ಈ ಮಹತ್ವಾಕಾಂಕ್ಷಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಈ 21 ಸಂಸ್ಥೆಗಳಿಂದ ಕಲೆ ಹಾಕುವ ಮಾಹಿತಿಯನ್ನು ನೈಜ ಸಮಯದಲ್ಲಿ ಬಳಸಿಕೊಳ್ಳುವುದು ಈ ಸಂಸ್ಥೆಯ ಧ್ಯೇಯೋದ್ದೇಶ.

ಸೆರಗಿನಲ್ಲಿ ಕೆಂಡವಿಟ್ಟುಕೊಂಡು, ಭಯೋತ್ಪಾದನೆಯ ನೆರಳಿನಲ್ಲಿರುವ ಭಾರತದಂತಹ ಬಹುಸಂಖ್ಯಾತ ಜನರಿರುವ ದೇಶಕ್ಕೆ ಇಂತಹ ಸಂಸ್ಥೆಯ ಅಗತ್ಯ ಬಹಳಷ್ಟಿದೆ.

ಇನ್ನೂ ಶೈಶಾವಸ್ಥೆಯಲ್ಲಿರುವ ನ್ಯಾಟ್ ಗ್ರಿಡ್ ಸಂಸ್ಥೆಗೆ ಇತ್ತೀಚೆಗೆ 1500 ಕೋಟಿ ರೂ. ಅನುದಾನ ನೀಡಲಾಗಿದೆ. ರೈಲ್ವೆ, ವಿಮಾನ ಯಾನ, ಆದಾಯ ತೆರಿಗೆ, ನಾನಾ ಬ್ಯಾಂಕ್ ಖಾತೆಗಳು, ವೀಸಾ, ವಲಸೆ ಇಲಾಖೆ ಮುಂತಾದ ಆಯಕಟ್ಟಿನ ವಿಭಾಗಗಳ ಮಾಹಿತಿಯನ್ನು ನ್ಯಾಟ್ ಗ್ರಿಡ್ ನೇರವಾಗಿ ಯಾವುದೇ/ಯಾರದೇ ಅಡ್ಡಿ ಆತಂಕವಿಲ್ಲದೆ ಪಡೆಯಬಹುದಾಗಿದೆ.

ಸಿಬಿಐ ಮಾದರಿಯಲ್ಲಿ ಇದಕ್ಕೆ ಸರ್ವತಂತ್ರ ಸ್ವತಂತ್ರ. ಇನ್ನು ಮಾಹಿತಿ ಹಕ್ಕು ಕಾಯಿದೆಯಡಿ ಜಪ್ಪಯ್ಯಾ ಅಂದರೂ ನೀವು ಈ ಸಂಸ್ಥೆಯಿಂದ ಒಂದೇ ಒಂದು ಮಾಹಿತಿಯನ್ನು ಹೆಕ್ಕಿ ತೆಗೆಯಲು ಸಾಧ್ಯವಿಲ್ಲ.

ಆರಂಭವಾದಾಗಿನಿಂದ ಇಂತಹ ವಿಶಿಷ್ಟ ಸಂಸ್ಥೆಯ ಮುಖ್ಯಸ್ಥರಾಗಿರುವ ಪಿ. ರಘು ರಾಮನ್ ಅವರ ಬಗ್ಗೆ ಮತ್ತೊಂದಿಷ್ಟು ಮಾಹಿತಿ:

ಭದ್ರತೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಮನ್ ಗೆ 2 ದಶಕಗಳ ಅನುಭವವಿದೆ. ಅಂದಹಾಗೆ, ರಾಮನ್ ತಮ್ಮ ಉದ್ಯೋಗ ಆರಂಭಿಸಿದ್ದು ಭಾರತೀಯ ಸೇನೆಯಲ್ಲಿ. 11 ವರ್ಷಗಳ ಕಾಲ ಸೇನೆಯ ಸೇವೆ ಮಾಡಿದ್ದಾರೆ. ಆ ಅವಧಿಯಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಆ ನಂತರ 1998ರಲ್ಲಿ ಅವರು ಮಹೀಂದ್ರಾ ಪಾಲಾದರು. ಅಲ್ಲೂ 11 ವರ್ಷ ಕಾಲ ಮಹತ್ವದ ಜವಾಬ್ದಾರಿ ನಿಭಾಯಿಸಿದರು.

ಐಐಎಂ-ಬೆಂಗಳೂರಿನಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ. ರಾಮನ್ ಅವರಿಗೆ Indian Military Academy, Infantry School, School of Armoured Warfare, Commando School, Siachen Base Camp ಗಳಲ್ಲಿ ತರಬೇತಿ ಪಡೆದಿದ್ದಾರೆ. Weapons, Armament, Missiles, Tacticsನಲ್ಲಿ ಅತ್ಯುತ್ತಮ ತರಬೇತುದಾರ. ಸದ್ಯಕ್ಕೆ ಇವರು 'ಮಿಂಟ್' ವಾಣಿಜ್ಯ ದೈನಿಕದಲ್ಲಿ ಪಾಕ್ಷಿಕ ಕಾಲಂ ಬರೆಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X