ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಎಂಎಸ್ ಮಿತಿ 5 ರಿಂದ 20ಕ್ಕೆ ಏರಿಕೆ

By Mahesh
|
Google Oneindia Kannada News

Govt increases SMS limit from 5 to 20
ನವದೆಹಲಿ, ಆ.24: ಈಶಾನ್ಯ ಭಾರತದಲ್ಲಿ ಗಲಭೆಗೆ ಕಾರಣವಾಗಿರುವ ರಾಶಿಗಟ್ಟಲೆ ಎಸ್ ಎಂಎಸ್, ಎಂಎಂಎಸ್ ಗೆ ವಿಧಿಸಿದ್ದ ಕಡಿವಾಣವನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ದಿನಕ್ಕೆ 5 ಎಸ್ ಎಂಎಸ್ ಮಿತಿಯನ್ನು 20 ಎಸ್ ಎಂಎಸ್ ಕ್ಕೇರಿಸಲಾಗಿದೆ ಎಂದು ಪ್ರಧಾನಮಂತ್ರಿ ಸಚಿವಾಲಯ ಪ್ರಕಟಿಸಿದೆ.

ಈ ಆದೇಶ ತಕ್ಷಣದಿಂದಲೆ(ಆ.24) ಜಾರಿಗೊಳ್ಳಲಿದ್ದು, ಪ್ರೀಪೇಯ್ಡ್ ಗ್ರಾಹಕರಿಗೆ ನಿರಾಳತೆ ತಂದಿದೆ. ರಾಶಿಗಟ್ಟಲೆ ಎಸ್ ಎಂಎಸ್/ಎಂಎಂಎಸ್ ಗಳನ್ನು 20 ಎಸ್ ಎಂಎಸ್/ ದಿನಕ್ಕೆ ಏರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೂಡಾ ಹೇಳಿದೆ.

ಉಳಿದಂತೆ ಎಲ್ಲಾ ನಿರ್ಬಂಧಗಳು ಹಾಗೆ ಉಳಿಯಲಿದೆ. ಅಸ್ಸಾಂ ಗಲಭೆ, ಸಾಮೂಹಿಕ ವಲಸೆಗೆ ಕಾರಣವಾದ ವದಂತಿ ಹರಡುವಿಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಸಾಮಾನ್ಯ ಮೊಬೈಲ್ ಫೋನ್ ಗ್ರಾಹಕರು ದಿನನಿತ್ಯ ಎಸ್ ಎಂಎಸ್ ಸೌಲಭ್ಯದಿಂದ ವಂಚಿತರಾಗಿ ಪರಿತಪಿಸಿದ್ದರು.

ಸುಮಾರು 930 ಮಿಲಿಯನ್ ಗೂ ಅಧಿಕ ಗ್ರಾಹಕರು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ. ದಿನಕ್ಕೆ 20 ಎಸ್ ಎಂಎಸ್ ಕಳಿಸಬಹುದಾದರೂ 25 KB ಗಿಂತ ಅಧಿಕ ತೂಕದ ಮಾಹಿತಿ ಒಳಗೊಂಡಿರಬಾರದು.

ಈ ನಿರ್ಬಂಧದ ಅವಧಿಯಲ್ಲಿ 25 KB ಗಿಂತ ಅಧಿಕ ಗಾತ್ರದ ಎಸ್ ಎಂಎಸ್, ಎಂಎಂಎಸ್ ಗಳನ್ನು ನಿಷೇಧಿಸಲಾಗಿದೆ.

ಗ್ರಾಹಕರಿಗೆ ಈ ನಿರ್ಬಂಧದಿಂದ ಕೊಂಚ ಮಟ್ಟಿಗೆ ತೊಂದರೆ ಉಂಟಾಗುತ್ತದೆ ನಿಜ. ಆದರೆ, ಸುಳ್ಳು ವದಂತಿ ಹರಡುವವರನ್ನು ಮಟ್ಟ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕ್ರಮೇಣ ಈ ನಿರ್ಬಂಧ ಸಡಿಲಗೊಳಿಸಲಾಗುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.

ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ಸಂದೇಶ ಹರಡಲು ವೇದಿಕೆಯಾಗಿ ಗಲಭೆ ಹಬ್ಬಲು ಕಾರಣವಾಗಿರುವ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟರ್ ಗಳನ್ನು ಕೆಲ ದಿನಗಳ ಮಟ್ಟಿಗೆ ನಿಷೇಧಿಸುವಂತೆ ಸಂಸದರು ಆಗ್ರಹಿಸಿದ್ದರು.

ಎಸ್ ಎಂಎಸ್ ಗಳ ಮೂಲಕ ವದಂತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳ ಜನತೆ ಭಯಭೀತರಾಗಿ ತಮ್ಮೂರಿಗೆ ಹೋಗುತ್ತಿದ್ದಾರೆ ಎಂಬುದು ದೃಢಪಟ್ಟಿರುವುದರಿಂದ ಕೇಂದ್ರ ಗೃಹ ಸಚಿವಾಲಯ ಎಸ್ಎಂಎಸ್ ನಿಷೇಧದ ನಿರ್ಣಯ ಕೈಗೊಂಡಿತ್ತು.

ಮೊಬೈಲ್ ಸಂದೇಶಗಳ ನಿಷೇಧದ ಮುಂದಿನ ಭಾಗವಾಗಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟರ್ ಗಳು ಸೇರಿದಂತೆ ಸುಮಾರು 250 ವೆಬ್ ಪುಟಗಳನ್ನು ಕೆಲ ದಿನಗಳ ಮಟ್ಟಿಗೆ ಸರ್ಕಾರ ನಿಷೇಧ ಹೇರಿದೆ.

English summary
After checking the use of SMSes to prevent spreading of rumours which had led to mass exodus of northeastern people from certain states, the government today increased the number of SMSes to 20 per day with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X