• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದ್ಯ ಸೇವನೆಯಿಂದ ಕ್ಯಾನ್ಸರ್ ಬಂದೀತು ಜೋಕೆ

By Prasad
|
Alcohol damages DNA, causes cancer
ವಾಷಿಂಗ್ಟನ್, ಆ. 23 : ಅತಿಯಾದ ಅಲ್ಕೋಹಾಲ್ ಸೇವನೆಯಿಂದ ಕ್ರಮೇಣ ಡಿಎನ್ಎ ನಾಶವಾಗಿ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದು, ಏಷ್ಯಾ ಖಂಡದ ಜನತೆಯಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದ್ದಾರೆ.

ಅತಿಯಾದ ಮದ್ಯ ಸೇವನೆಯಿಂದ ನಮ್ಮ ದೇಹ ಜರ್ಜರಿತವಾದಾಗ ಬಿಯರ್, ವೈನ್ ಅಥವಾ ಇನ್ನಾವುದೇ ಮದ್ಯದಿಂದ ಅಸಿಟಾಲ್ಡಿಹೈಡ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುವ ಫಾರ್ಮಾಲ್ಡಿಹೈಡ್ ರಾಸಾಯನಿಕ ವಸ್ತುವನ್ನು ಹೋಲುತ್ತದೆ ಎಂದು ಮಿನ್ನೇಸೋಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

"ಅಸಿಟಾಲ್ಡಿಹೈಟ್ ರಾಸಾಯನಿಕ ಕ್ರಮೇಣ ಡಿಎನ್ಎ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದರಿಂದ ಜೀವಕೋಶಗಳಲ್ಲಿನ ವಂಶವಾಹಿನಿ(ಕ್ರೊಮೊಸೋಮ್)ಗಳು ಅಸ್ವಾಭಾವಿಕವಾಗಿ ವರ್ತಿಸಲು ಪ್ರಾರಂಭಿಸುತ್ತವೆ. ಇದರ ಮುಂದಿನ ಹಂತವೇ ಕ್ಯಾನ್ಸರ್ ಕೋಶಗಳ ಬೆಳೆಯುವಿಕೆ. ನಮ್ಮ ಸಂಶೋಧನೆಯಲ್ಲಿ ಇದಕ್ಕೆ ಮೊದಲ ಪುರಾವೆ ದೊರೆತಿದೆ" ಎಂದು ಸಂಶೋಧನೆಯ ಮುಂದಾಳತ್ವ ವಹಿಸಿದ್ದ ಸಿಲ್ವಿಯಾ ಬಾಲ್ಬೊ ಹೇಳಿದ್ದಾರೆ.

ಅಸಿಟಾಲ್ಡಿಹೈಡ್ ಡಿಎನ್ಎ ಮೇಲೆ ಆಕ್ರಮಣ ಮಾಡಿ ಅದರ ಕಾರ್ಯನಿರ್ವಹಣೆಯನ್ನು ಏರುಪೇರು ಮಾಡುತ್ತದೆ. ಇದರಿಂದ ಕ್ಯಾನ್ಸರ್ ಬರುವ ರಿಸ್ಕ್ ಜಾಸ್ತಿ ಇರುತ್ತದೆ. ಆದರೆ ಇದರ ಜೊತೆಗೆ ಅಲ್ಕೋಹಾಲ್ ಸೇವಿಸುವ ಎಲ್ಲರಲ್ಲೂ ಕ್ಯಾನ್ಸರ್ ಏಕೆ ಬರುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಉತ್ತರವನ್ನೂ ವಿಜ್ಞಾನಿಗಳು ನೀಡಿದ್ದಾರೆ.

ಡಿಎನ್ಎಗೆ ಘಾಸಿಯಾದರೆ ಅದನ್ನು ಸರಿಪಡಿಸುವ ಸ್ವಾಭಾವಿಕ ವ್ಯವಸ್ಥೆ ನಮ್ಮ ದೇಹದಲ್ಲಿಯೇ ಇರುತ್ತದೆ. ಆದ್ದರಿಂದ, ಅಲ್ಕೋಹಾಲ್ ಸೇವನೆಯಿಂದ ದೇಹದ ಮೇಲೆ ಇತರ ವ್ಯತಿರಿಕ್ತ ಪರಿಣಾಮಗಳಾದರೂ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದಿಲ್ಲ. ಅಲ್ಲದೆ, ಅಲ್ಕೋಹಾಲ್ ಡಿಹೈಡ್ರೋಜೆನೇಸ್ ಎಂಬ ಎನ್‌ಜೈಮ್ ಬಹಳಷ್ಟು ಜನರಲ್ಲಿ ಇದ್ದು, ಅಸಿಟಾಲ್ಡಿಹೈಡ್ ರಾಸಾಯನಿಕವನ್ನು ಅಸಿಟೇಟ್ ಆಗಿ ಪರಿವರ್ತಿಸುತ್ತದೆ. ಇದು ಅಷ್ಟು ಅಪಾಯಕಾರಿ ಅಲ್ಲ.

ಆದರೆ, ಏಷ್ಯಾದ ಅಲ್ಕೋಹಾಲ್ ಸೇವಿಸುವ ಶೇ.30ರಷ್ಟು ಜನರಲ್ಲಿ ಈ ಎನ್‌ಜೈಮ್ ಕೊರತೆಯಿದೆ. ಹಾಗಾಗಿ ಮದ್ಯ ಸೇವನೆಯಿಂದ ಉತ್ಪತ್ತಿಯಾಗುವ ಅಸಿಟಾಲ್ಡಿಹೈಡ್ ರಾಸಾಯನಿಕ ಅಸಿಟೇಟ್ ಆಗಿ ಪರಿವರ್ತನೆಯಾಗುವುದಿಲ್ಲ. ಇದು ಕ್ಯಾನ್ಸರ್ ಆಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಮದ್ಯಕ್ಕಿಂತ ಚಹಾ ಉತ್ತಮ : ಅಲ್ಕೋಹಾಲ್ ಬದಲಿಗೆ ಭಾರತ ಮತ್ತು ಪಾಕಿಸ್ತಾನದ ಬಂಜರು ಪ್ರದೇಶದಲ್ಲಿ ಕಾಣಸಿಗುವ ಅಪರೂಪದ ಸಸ್ಯದಿಂದ ತಯಾರಿಸಿದ ಹರ್ಬಲ್ ಚಹಾ ಕುಡಿಯಿರಿ. ಇದರಿಂದ ಕ್ಯಾನ್ಸರ್ ಮಾಯವಾಗುತ್ತದೆ ಎಂದು ಲಂಡನ್ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕ್ಯಾನ್ಸರ್ ಸುದ್ದಿಗಳುView All

English summary
Scientists at Minnesota University in USA have found that alcohol can damage DNA in our body and chance of cancer increases. Asian descent are at greater risk. So, stop consuming alcohol and lead a healthy life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more